ಭೋಪಾಲ್: ಮಧ್ಯಪ್ರದೇಶದ ನರಸಿಂಗ್‍ಪುರ್ ಎಂಬಲ್ಲಿ ಗುರುವಾರದಂದು ಆಂಜನೇಯ ದೇವಸ್ಥಾನದ ಮೇಲೆ ಪಾಕಿಸ್ತಾನದ ಬಾವುಟ ಹಾರಿಸಲಾಗಿದೆ.
ಅಲ್ಲದೆ ಹಿಂದೂಗಳನ್ನ ನಿರ್ನಾಮ ಮಾಡುವುದಾಗಿ ದೇವಸ್ಥಾನದ ಗೋಡೆಯ ಮೇಲೆ ಹಿಂದಿಯಲ್ಲಿ ಬರೆಯಲಾಗಿದೆ. ಈ ಕೃತ್ಯವೆಸಗಿದವರು ಯಾರು ಎಂದು ಪತ್ತೆಹಚ್ಚಲು ಪೊಲೀಸರು ಇದೂವರೆಗೂ 100 ಜನರನ್ನು ವಿಚಾರಣೆ ಮಾಡಿದ್ದಾರೆ.
Advertisement
Advertisement
ನರಸಿಂಗ್‍ಪುರ್‍ನ ಎಸ್‍ಪಿ ಮೋನಿಕಾ ಶುಕ್ಲಾ ಮಾಧ್ಯಮಗಳೊಂದಿಗೆ ಮಾತನಾಡಿ, ದೇವಸ್ಥಾನದ ಹತ್ತಿರದ ಸಿಸಿಟಿವಿಯಲ್ಲಿ ಕಿಡಿಗೇಡಿಗಳ ದೃಶ್ಯ ಸೆರೆಯಾಗಿರಬಹುದು. ಆದ್ರೆ ಆ ಸಿಸಿಟಿವಿಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಅದರ ರಿಪೇರಿಗಾಗಿ ಮೆಕಾನಿಕ್‍ನನ್ನು ಕರೆಸಲಾಗಿದೆ ಎಂದು ತಿಳಿಸಿದ್ದಾರೆ.
Advertisement
ಘಟನೆ ಹಿನ್ನೆಲೆಯಲ್ಲಿ ಬಲಪಂಥೀಯ ಹಿಂದೂ ಸಂಘಟನೆಗಳು ಗುರುವಾರದಂದು ಪ್ರತಿಭಟನೆ ನಡೆಸಿದ್ದು, ಒಂದು ನಿರ್ದಿಷ್ಟ ಧರ್ಮದ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
Advertisement
ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದ ಮೇಲೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
MP town tense after ‘Pakistani flag’ found atop a Hanuman temple https://t.co/kYvsh9izcV@neerajsantoshi reports pic.twitter.com/3fMIwfZkmk
— Hindustan Times (@htTweets) August 25, 2017
Pakistani flag found atop temple in Madhya Pradesh's Narsinghpur https://t.co/NRXvOGKq22
— The Indian Express (@IndianExpress) August 25, 2017
https://twitter.com/reallysravan/status/901026974239301632