ಕೊಪ್ಪಳ: ರಾಮ ಭಕ್ತ ಹನುಮಂತನ ಜನ್ಮಸ್ಥಳ ಅಂಜನಾದ್ರಿ ಬೆಟ್ಟದ (Anjanadri Hill) ದೇವಸ್ಥಾನದ ಹುಂಡಿಯಲ್ಲಿ ಪ್ರಪಂಚದ ವಿವಿಧ ದೇಶದ ನಾಣ್ಯ ಪತ್ತೆ ಆಗುವುದು ಸಾಮಾನ್ಯ. ಆದರೆ, ಇದೇ ಮೊದಲ ಬಾರಿಗೆ ಕಾಣಿಕೆ ಪೆಟ್ಟಿಗೆಯಲ್ಲಿ ಪಾಕಿಸ್ತಾನದ ನಾಣ್ಯ ಪತ್ತೆಯಾಗಿದೆ.
ಕೊಪ್ಪಳದ (Koppal) ಗಂಗಾವತಿ ತಾಲೂಕಿನ ಚಿಕ್ಕರಾಂಪೂರ ಗ್ರಾಮದಲ್ಲಿನ ಅಂಜನಾದ್ರಿ ದೇವಸ್ಥಾನ ಧಾರ್ಮಿಕ ಮತ್ತು ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಟ್ಟ ಪ್ರತಿ ತಿಂಗಳು ಹುಂಡಿ ಎಣಿಕೆ ಮಾಡಲಾಗುತ್ತದೆ. ವಿಶ್ವ ಪಾರಂಪರಿಕ ಹಂಪಿ-ಆನೆಗೊಂದಿ ಸುತ್ತಲು ಪ್ರವಾಸಕ್ಕೆ ಬರುವ ವಿದೇಶಿಗರು ಅಂಜನಾದ್ರಿಗೆ ಭೇಟಿ ನೀಡುತ್ತಿದ್ದಾರೆ. ಇದನ್ನೂ ಓದಿ: ರೇವ್ ಪಾರ್ಟಿಯಲ್ಲಿ ಗಾಂಜಾ, ಡ್ರಗ್ಸ್ ಸಿಕ್ಕಿದೆ – ಪಾಲ್ಗೊಂಡವರ ಹೆಸರು ಪೊಲೀಸರ ಬಳಿ ಇದೆ: ಪರಮೇಶ್ವರ್
- Advertisement
ಹೀಗೆ ಭೇಟಿ ನೀಡುವ ವಿದೇಶಿಗರು ತಮ್ಮ ದೇಶದ ನಾಣ್ಯಗಳನ್ನು ಕಾಣಿಕೆ ಪೆಟ್ಟಿಗೆಯಲ್ಲಿ ಹಾಕುವುದು ಸಾಮಾನ್ಯ. ಇದೀಗ ಇದೇ ಮೊದಲ ಬಾರಿಗೆ ಪಾಕಿಸ್ತಾನದ ನಾಣ್ಯವೊಂದು ಹುಂಡಿಯಲ್ಲಿ ಪತ್ತೆಯಾಗಿದ್ದು ಕುತೂಹಲಕ್ಕೆ ಕಾರಣವಾಗಿದೆ.
- Advertisement
ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಸೂಚನೆ ಮೇರೆಗೆ, ತಹಸೀಲ್ದಾರ್ ಯು. ನಾಗರಾಜ ನೇತೃತ್ವದಲ್ಲಿ ಕಂದಾಯ ಇಲಾಖೆ ಹಾಗೂ ದೇವಸ್ಥಾನ ಸಿಬ್ಬಂದಿ ಮಂಗಳವಾರ ಕಾಣಿಕೆ ಪೆಟ್ಟಿಗೆ ಎಣಿಕೆ ನಡೆಸಿದರು. ಈ ಸಂದರ್ಭದಲ್ಲಿ ಪಾಕಿಸ್ತಾನ, ಮೊರಾಕ್ಕೊ, ಶ್ರೀಲಂಕಾ, ಅಮೆರಿಕಾ ಮತ್ತು ನೇಪಾಳದ ನಾಣ್ಯಗಳು ಪತ್ತೆಯಾಗಿವೆ. ಪಾಕಿಸ್ತಾನದ ಐದು ರೂಪಾಯಿ ಮುಖಬೆಲೆಯ ನಾಣ್ಯ, ಯುನೈಟೆಡ್ ಸ್ಟೇಟ್ ಆಫ್ ಆಮೆರಿಕದ ಒಂದು ಸೆಂಟ್, ಮೊರಾಕ್ಕೊದಾ ಒಂದು ದಿರಮ್, ನೇಪಾಳದ ಒಂದು ನಾಣ್ಯ ಹಾಗೂ ಶ್ರೀಲಂಕಾದ ಐದು ರೂಪಾಯಿ ನಾಣ್ಯಗಳು ಹುಂಡಿಯಲ್ಲಿ ಪತ್ತೆಯಾಗಿವೆ. ಇದನ್ನೂ ಓದಿ: ನಮ್ಮ ಆಡಳಿತಾವಧಿಯಲ್ಲಿ ಎನ್‌ಕೌಂಟರ್‌ಗಳಾಗಿದ್ದರೆ ಇವತ್ತು ಇಂತಹ ಕೃತ್ಯಗಳಾಗುತ್ತಿರಲಿಲ್ಲ: ಯತ್ನಾಳ್
30.21 ಲಕ್ಷ ಸಂಗ್ರಹ: ಐದು ವಿದೇಶಿ ನಾಣ್ಯ ಸೇರಿ ಅಂಜನಾದ್ರಿ ದೇವಸ್ಥಾನದ ಹುಂಡಿಯಲ್ಲಿ ಒಟ್ಟು 31.21 ಲಕ್ಷ ರೂಪಾಯಿ ಮೊತ್ತದ ನಗದು ಹಣ ಸಂಗ್ರವಾಗಿದೆ. ಕಳೆದ ಮಾರ್ಚ್ 27ರಿಂದ ಇಲ್ಲಿವರೆಗೂ ಅಂದರೆ ಮೇ 21 ರ ವರೆಗಿನ ಒಟ್ಟು 56 ದಿನಗಳಲ್ಲಿ 31.21 ಲಕ್ಷ ಮೊತ್ತದ ಹಣ ಸಂಗ್ರಹವಾಗಿದೆ. ಕಳೆದ ಮಾರ್ಚ್ 26 ರಂದು ನಡೆದಿದ್ದ ಹುಂಡಿ ಎಣಿಕೆಯಲ್ಲಿ ಕೇವಲ 9.29 ಲಕ್ಷ ರೂ. ಮೊತ್ತದ ಹಣ ಸಂಗ್ರಹವಾಗಿತ್ತು. ಪ್ರತಿ ತಿಂಗಳು ಅಂಜನಾದ್ರಿಯ ಕಾಣಿಕೆ ಹುಂಡಿಯ ಆದಾಯ ಸರಾಸರಿ 18 ರಿಂದ 20 ಲಕ್ಷ ರೂಪಾಯಿ ಇದೆ.