ಶ್ರೀನಗರ: ಪಾಕಿಸ್ತಾನದ ಅಂತರಾಷ್ಟ್ರೀಯ ಏರ್‌ಲೈನ್ಸ್ (Pakistan International Airlines) ಲಾಂಛನ ಇರುವ ವಿಮಾನದ ಆಕಾರದ ಅನುಮಾನಾಸ್ಪದ ಬಲೂನ್ ಜಮ್ಮು ಮತ್ತು ಕಾಶ್ಮೀರದ (Jammu and Kashmir) ಕಥುವಾ ಜಿಲ್ಲೆಯಲ್ಲಿ ಶನಿವಾರ ಪತ್ತೆಯಾಗಿದೆ.
ಕಪ್ಪು ಬಿಳುಪು ಬಣ್ಣದ ನಿಗೂಢ ಬಲೂನ್ ನೆಲದ ಮೇಲೆ ಬಿದ್ದಿರುವುದು ಕಂಡು ಬಂದಿದೆ. ಭದ್ರತಾ ಪಡೆಗಳು (Border Security Forces) ಅದನ್ನು ವಶಪಡಿಸಿಕೊಂಡಿವೆ. ಬಲೂನ್ ಎಲ್ಲಿಂದ ಬಂದಿದೆ ಎಂದು ತನಿಖೆ ಮಾಡಲು ಪ್ರದೇಶದಲ್ಲಿ ಸೇನೆಯಿಂದ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. ಇದನ್ನೂ ಓದಿ: ಗಡಿದಾಟಿ ಬಂದ ಬಾಂಗ್ಲಾ ಯೋಧರನ್ನು ಓಡಿಸಿದ ಮೇಘಾಲಯ ಗ್ರಾಮಸ್ಥರು
Advertisement
Advertisement
ಕಳೆದ ಫೆಬ್ರವರಿಯಲ್ಲಿ ಇದೇ ರೀತಿಯ ವಿಮಾನದ ಆಕಾರದ ಹಸಿರು ಮತ್ತು ಬಿಳಿ ಬಲೂನ್ ಶಿಮ್ಲಾದಲ್ಲಿ ಪತ್ತೆಯಾಗಿತ್ತು. ಅದರ ಮೇಲೆ ಸಹ ಪಿಐಎ (PIA) ಲೋಗೋವನ್ನು ಮುದ್ರಿಸಲಾಗಿತ್ತು. ಮೇ 20 ರಂದು ಅಮೃತಸರದಲ್ಲಿ ಮಾದಕ ವಸ್ತುಗಳನ್ನು ಹೊಂದಿದ್ದ ಪಾಕಿಸ್ತಾನದ (Pakistan) ಡ್ರೋನ್‍ನ್ನು ಸೇನೆ ಹೊಡೆದುರುಳಿಸಿತ್ತು.
Advertisement
Advertisement
ಅಲ್ಲದೇ ಇತ್ತೀಚೆಗೆ ಸೇನೆ ನಾಲ್ಕು ಪಾಕಿಸ್ತಾನಿ ಡ್ರೋನ್‍ಗಳನ್ನು ಗಡಯಲ್ಲಿ ತಡೆದಿತ್ತು. ಅವುಗಳಲ್ಲಿ ಮೂರನ್ನು ಪಂಜಾಬ್‍ನ (Punjab) ಅಂತರರಾಷ್ಟ್ರೀಯ ಗಡಿಯಲ್ಲಿ ಹೊಡೆದುರುಳಿಸಿತ್ತು. ಇದನ್ನೂ ಓದಿ: ಪ್ರೇಯಸಿಯನ್ನು ಕೊಂದು ಟ್ಯಾಂಕ್‌ನಲ್ಲಿ ಬಚ್ಚಿಟ್ಟ ಭೂಪ ಅಂಧರ್