ಪಾಕಿಸ್ತಾನಿ ನಟಿ ಹೀರಾ ಸಲ್ಮಾನ್ ಸಲ್ಲದ ಕಾರಣಕ್ಕಾಗಿ ಟ್ರೋಲ್ ಆಗುತ್ತಿದ್ದರು. ತನ್ನ ಪತಿಯು ತನಗೆ ದಪ್ಪ ಇದ್ದಾಳೆ ಎಂದು ಹೇಳಿದ ಕಾರಣಕ್ಕಾಗಿ ಹತ್ತು ಕೇಜಿ ತೂಕ ಕಡಿಮೆ ಮಾಡಿಕೊಂಡಿದ್ದಾರಂತೆ ಹೀರಾ. ತೂಕ ಕಳೆದುಕೊಂಡು ತೆಪ್ಪಗಿದ್ದರೆ, ಅಲ್ಲಿಗೆ ಕತೆಯೇ ಮುಗಿದಿರೋದು. ಆದರೆ, ತಾನು ತಳ್ಳಗೆ ಆಗುವುದಕ್ಕೂ ಬಾಲಿವುಡ್ ನಟಿ ಕರೀನಾ ಕಪೂರ್ ದಪ್ಪಗಿರುವುದಕ್ಕೂ ಹೋಲಿಕೆ ಮಾಡಿಕೊಂಡಿದ್ದಾರೆ. ಅಲ್ಲಿಗೆ ಪಾಕ್ ನಟಿಯ ಜನ್ಮಜಾಲಾಡಿದ್ದಾರೆ ಕರೀನಾ ಅಭಿಮಾನಿಗಳು. ಇದನ್ನೂ ಓದಿ : Exclusive- ಅಮೆಜಾನ್ ಪ್ರೈಮ್ನಲ್ಲಿ ‘ಕೆಜಿಎಫ್ 2’ : ಫಸ್ಟ್ ಟೈಮ್ ಮೆಂಬರ್ ಅಲ್ಲದವರೂ ಸಿನಿಮಾ ನೋಡಬಹುದು
Advertisement
ನನ್ನ ಗಂಡ ನಾನು ದಪ್ಪಗಿದ್ದೇನೆ ಎಂದು ಹೇಳಿದ್ದಕ್ಕೆ ಅದನ್ನೇ ಸವಾಲಾಗಿ ತಗೆದುಕೊಂಡು ಹತ್ತು ಕೆಜಿ ತೂಕ ಕಡಿಮೆಮಾಡಿಕೊಂಡು ಇದೀಗ ಬಳುಕುವ ಬಳ್ಳಿ ಆಗಿದ್ದೇನೆ. ಪಾಪ, ಕರೀನಾ ಕಪೂರ್ ದಪ್ಪಗಿದ್ದಾರೆ. ಅವರಿಗೆ ಯಾರೂ, ಏನೂ ಹೇಳುವುದಿಲ್ಲವೆ? ಎಂದು ಈ ಹಿಂದೆ ವಿಡಿಯೋವೊಂದನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹೀರಾ ಹರಿಬಿಟ್ಟಿದ್ದರು. ಇದೀಗ ಆ ವಿಡಿಯೋ ಕುರಿತಾಗಿ ಕರೀನಾ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ : ಪತಿ ಉಪ್ಪಿಗಿಂತಲೂ ಪತ್ನಿ ಪ್ರಿಯಾಂಕಾ ಉಪೇಂದ್ರ ಫಾಸ್ಟ್ : ಡಿಟೆಕ್ಟೀವ್ ತೀಕ್ಷ್ಣ @ 50
Advertisement
Advertisement
ಕರೀನಾ ದಪ್ಪ ಎಂದು ಹೇಳಿ ಸುಮ್ಮನಿದ್ದರೂ ಇಷ್ಟೊಂದು ವಿವಾದ ಆಗುತ್ತಿರಲಿಲ್ಲ. ತನ್ನನ್ನು ಕರೀನಾ ವಿರೋಧಿ ನಟಿಯರಿಗೆ ಹೋಲಿಸಿಕೊಂಡಿದ್ದ ಕರೀನಾ ಅಭಿಮಾನಿಗಳನ್ನು ಕೆರಳಿಸುವಂತೆ ಮಾಡಿದೆ. ಅಲ್ಲದೇ, ಬಾಲಿವುಡ್ ಕೆಲ ನಟಿಯರಂತೆ ನಾನೂ ಕೂಡ ಫಿಗರ್ ಮೆಂಟೇನ್ ಮಾಡಿಕೊಂಡಿದ್ದೇನೆ ಎಂದು ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ ಸೇರಿದಂತೆ ಹಲವು ನಟಿಯರ ಹೆಸರು ಹೇಳಿದ್ದಾರೆ. ಹೀಗಾಗಿ ಹೀರಾ ವಿಡಿಯೋ ಸಖತ್ ವೈರಲ್ ಕೂಡ ಆಗಿದೆ. ಇದನ್ನೂ ಓದಿ : ಕಾಲೇಜು ದಿನಗಳಲ್ಲೇ ರಮ್ಯಾ ಮೇಲೆ ಕ್ರಶ್ ಆಗಿದೆ : ರಕ್ಷಿತ್ ಶೆಟ್ಟಿ
Advertisement
ಈ ಕುರಿತು ಕರೀನಾ ಕಪೂರ್ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಹಾಗಂತ ಕರೀನಾ ಅಭಿಮಾನಿಗಳು ಸುಮ್ಮನೆ ಕುಳಿತಿಲ್ಲ. ಹೀರಾ ಅವರ ಹತ್ತಾರು ಫೋಟೋಗಳನ್ನು ಬಳಸಿಕೊಂಡು ಟ್ರೋಲ್ ಮಾಡುತ್ತಿದ್ದಾರೆ. ಆ ಟ್ರೋಲ್ ಆಗುತ್ತಿರುವ ಫೋಟೋದಲ್ಲಿ ಹೀರಾ ದಪ್ಪಗಿದ್ದಾರೆ.