ಭಾರತವನ್ನು ಸೋಲಿಸಿ ಎಂದು ಬಾಂಗ್ಲಾ ಕ್ರಿಕೆಟಿಗರಿಗೆ ಡೇಟಿಂಗ್ ಆಫರ್ ಕೊಟ್ಟ ಪಾಕ್ ನಟಿ

Public TV
1 Min Read
sehar shinwari

ಕದಿನ ವಿಶ್ವಕಪ್ ಟೂರ್ನಿಯಲ್ಲಿ ಅ.19ರಂದು ಭಾರತ- ಬಾಂಗ್ಲಾದೇಶ (Bangladesh) ತಂಡದೊಂದಿಗೆ ಸೆಣಸಾಡಲಿದೆ. ಹೀಗಿರುವಾಗ ಪಾಕಿಸ್ತಾನದ ನಟಿ ಸೆಹರ್ ಶಿನ್ವಾರಿ (Sehar Shinwari) ಅವರು ಭಾರತವನ್ನು ಸೋಲಿಸಿದರೆ ನಿಮ್ಮೊಂದಿಗೆ ಡೇಟ್‌ಗೆ ಬರುತ್ತೇನೆ ಎಂದು ಬಾಂಗ್ಲಾ ಕ್ರಿಕೆಟಿಗರಿಗೆ ಡೇಟಿಂಗ್ ಆಫರ್ ನೀಡಿದ್ದಾರೆ. ಈ ಕುರಿತ ಪೋಸ್ಟೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

sehar shinwari 1

ನನ್ನ ಬಂಗಾಳಿ ಸಹೋದರರು ಮುಂದಿನ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳುತ್ತಾರೆ. ಅವರ ತಂಡ ಭಾರತವನ್ನು ಸೋಲಿಸುವಲ್ಲಿ ಯಶಸ್ವಿಯಾದರೆ ನಾನು ಢಾಕಾಕ್ಕೆ ಹೋಗಿ ಬಾಂಗ್ಲಾ ಹುಡುಗನೊಂದಿಗೆ ಫಿಶ್ ಡಿನ್ನರ್ ಡೇಟ್ ಮಾಡುತ್ತೇನೆ ಎಂದು ಬರೆದಿದ್ದಾರೆ. ಇದನ್ನೂ ಓದಿ:‘ಸೀತಾರಾಮಂ’ ನಟಿ ಲಿಪ್‌ಲಾಕ್ ಮಾಡಿದ್ದಕ್ಕೆ ಫ್ಯಾನ್ಸ್ ಅಸಮಾಧಾನ

ಸೆಹರ್ ಶಿನ್ವಾರಿ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಮೂಲಕ ಬಾಂಗ್ಲಾ ಕ್ರಿಕೆಟಿಗರಿಗೆ ಪಾಕ್ ನಟಿ ಬೆಂಬಲಿಸಿದ್ದಾರೆ.

ಅ.19ರಂದು ಪುಣೆಯಲ್ಲಿ ಭಾರತ- ಬಾಂಗ್ಲಾದೇಶ ನಡುವಿನ ಪಂದ್ಯ ನಡೆಯಲಿದೆ. ಭಾರತ ತಂಡ ಆಡಿದ 3 ಪಂದ್ಯಗಳನ್ನು ಗೆದ್ದಿದೆ. ಇದೀಗ ಭಾರತಕ್ಕೆ ಸೆಮಿಫೈನಲ್ ಹಾದಿ ಸುಲಭವಾಗುತ್ತಿದೆ. ಬಾಂಗ್ಲಾದೇಶದ ವಿರುದ್ಧವೂ ಭಾರತ ಗೆದ್ದರೆ ಭಾರತಕ್ಕೆ ಸೆಮಿಫೈನಲ್ ಹಾದಿ ತೆರೆದುಕೊಳ್ಳಲಿದೆ.

Share This Article