ಬಾಲಿವುಡ್ ಕ್ಯೂಟ್ ಬ್ಯೂಟಿ ಆಲಿಯಾ ಭಟ್ ಹೆಚ್ಚು ಬಬ್ಲಿ ಕ್ಯಾರೆಕ್ಟರ್ ಇರುವಂತಹ ಸಿನಿಮಾಗಳನ್ನು ಮಾಡುತ್ತಿದ್ದರು. ಆದರೆ ಇತ್ತೀಚೆಗೆ ರಿಲೀಸ್ ಆದ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾದಲ್ಲಿ ಪ್ರೌಢ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇಡೀ ಚಿತ್ರರಂಗದಲ್ಲಿಯೇ ಟಾಕ್ ಆಗಿದ್ದಾರೆ. ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ಪ್ರೇಕ್ಷಕರಿಂದ ಒಳ್ಳೆ ಮೆಚ್ಚುಗೆ ಪಡೆದುಕೊಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ವೇಳೆ ಪಾಕ್ ಖ್ಯಾತ ನಟರೊಬ್ಬರು ಆಲಿಯಾ ಸಿನಿಮಾ ನೋಡಲು ಇಡೀ ಥಿಯೇಟರ್ ಬುಕ್ ಮಾಡಿದ್ದಾರೆ.
ಭಾರತೀಯ ಚಿತ್ರರಂಗದಲ್ಲಿ ಮಾತ್ರವಲ್ಲಿ ವಿಶ್ಚದಲ್ಲೇ ಆಲಿಯಾ ಸಿನಿಮಾ ಹವಾ ಹೆಚ್ಚಾಗಿದೆ. ವಿದೇಶದಲ್ಲಿಯೂ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ನೈಜ ಕಥೆಯನ್ನು ತೆರೆಮೇಲೆ ತರುವ ಪ್ರಯತ್ನ ಚಿತ್ರತಂಡ ಮಾಡಿದ್ದಾರೆ. ಈ ಸಿನಿಮಾವನ್ನು ಪಾಕಿಸ್ತಾನದಲ್ಲಿಯೂ ಸಿನಿರಸಿಕರು ನೋಡಿ ಎಂಜಾಯ್ ಮಾಡಿದ್ದಾರೆ. ಇದನ್ನೂ ಓದಿ: ಪ್ರಿ ಆಸ್ಕರ್ ಪಾರ್ಟಿಯಲ್ಲಿ ಮೊದಲಬಾರಿ ಮಗಳ ಬಗ್ಗೆ ಮಾತನಾಡಿದ ದೇಸಿ ಗರ್ಲ್ ಪಿಗ್ಗಿ
View this post on Instagram
ಈ ಸಿನಿಮಾ ನೋಡಲೇ ಬೇಕೆಂದು ಪಾಕ್ ನಟ ಮುನೀಬ್ ಬಟ್ ತನ್ನ ಪತ್ನಿ ಅಮಾನ್ ಖಾನ್ ಜೊತೆ ಸೇರಿ ಇಡೀ ಥಿಯೇಟರ್ ಬುಕ್ ಮಾಡಿದ್ದಾರೆ. ಅವರು ದುಬೈನಲ್ಲಿರುವ ಮುನೀಬ್ ಅಲ್ಲೇ ಇಡೀ ಥಿಯೇಟರ್ ಬುಕ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮುನೀಬ್, ಪತ್ನಿ ಜೊತೆ ಸಿನಿಮಾ ವೀಕ್ಷಿಸುತ್ತಿರುವ ವೀಡಿಯೋ ಶೇರ್ ಮಾಡಿದ್ದು, ಫುಲ್ ವೈರಲ್ ಆಗಿದೆ.
ಮುನೀಬ್ ಪತ್ನಿ ಮತ್ತು ಮಗಳ ಜೊತೆ ದುಬೈನಲ್ಲಿ ರಜೆಯ ಕಳೆಯುತ್ತಿದ್ದಾರೆ. ಪತ್ನಿಗಾಗಿ ಮುನೀಬ್ ಅಲಿಯಾ ಭಟ್ ಸಿನಿಮಾವನ್ನು ಬುಕ್ ಮಾಡಿದ್ದಾರೆ. ಸುದ್ದಿ ತಿಳಿದ ಅಭಿಮಾನಿಗಳು ಆಲಿಯಾ ನಟನೆ ಬಗ್ಗೆ ಇನ್ನಚ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಆರ್ಯ ಈಡಿಗ ಸಮಾಜಕ್ಕೆ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಿ – ಡಾ.ಪ್ರಣವಾನಂದ ಸ್ವಾಮೀಜಿ ಒತ್ತಾಯ