ಇಸ್ಲಾಮಾಬಾದ್: ಏಕದಿನ ಏಷ್ಯಾಕಪ್ (Asia Cup 2023) ಟೂರ್ನಿ ಆಡಲು ಭಾರತ ತಂಡ ಪಾಕಿಸ್ತಾನಕ್ಕೆ ಬರದಿದ್ದರೆ ಪಾಕ್ ತಂಡ ಕೂಡ ವಿಶ್ವಕಪ್ ಟೂರ್ನಿ (ICC World Cup 2023) ಆಡೋದಕ್ಕೆ ಬರೋದಿಲ್ಲ ಎಂದು ಪಾಕಿಸ್ತಾನದ ಕ್ರೀಡಾ ಸಚಿವ ಎಹ್ಸಾನ್ ಮಜಾರಿ ಹೇಳಿಕೆ ನೀಡಿದ್ದಾರೆ.
ಈ ವರ್ಷ ಭಾರತದಲ್ಲಿ ನಡೆಯುವ ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ಭಾಗವಹಿಸುವ ಕುರಿತು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif), ಸಮಿತಿ ರಚಿಸಿದ ಒಂದು ದಿನದ ನಂತರ ಸಚಿವ ಮಜಾರಿ ಈ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಏಕದಿನ ವಿಶ್ವಕಪ್‌ನಲ್ಲೂ ಬುಮ್ರಾ ಕಣಕ್ಕಿಳಿಯೋದು ಡೌಟ್ – ಟೀಂ ಇಂಡಿಯಾಕ್ಕೆ ಎಚ್ಚರಿಕೆ ಕೊಟ್ಟ ರವಿಶಾಸ್ತ್ರಿ
Advertisement
Advertisement
ವಿಶ್ವಕಪ್‌ಗೆ ಇನ್ನೂ 3 ತಿಂಗಳು ಬಾಕಿಯಿದೆ. ಅದಕ್ಕೂ ಮುನ್ನ ಟೀಂ ಇಂಡಿಯಾ (Team India) ಸಾಲು-ಸಾಲು ಸರಣಿಗಳನ್ನ ಎದುರಿಸಬೇಕಿದೆ. ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್, ಏಕದಿನ ಹಾಗೂ ಟಿ20 ಸರಣಿ, ನಂತರ ಐರ್ಲೆಂಡ್ ವಿರುದ್ಧ ಟಿ20 ಸರಣಿ ಆಡಲಿದೆ. ಆ ಬಳಿಕ ಆಗಸ್ಟ್ 31 ರಿಂದ ಸೆಪ್ಟಂಬರ್ 17ರ ವರೆಗೆ ನಡೆಯುವ ಏಷ್ಯಾಕಪ್‌ನಲ್ಲಿ ಪಾಲ್ಗೊಳ್ಳಲಿದೆ. ಇದನ್ನೂ ಓದಿ: ಆ.31 ರಿಂದ ಏಕದಿನ ಏಷ್ಯಾಕಪ್; ಲಂಕಾ, ಪಾಕ್ ಆತಿಥ್ಯ – ಬುಮ್ರಾ, ಅಯ್ಯರ್ ಕಂಬ್ಯಾಕ್ ಸಾಧ್ಯತೆ
Advertisement
Advertisement
ಏಷ್ಯಾಕಪ್ ಟೂರ್ನಿಯು ಪಾಕಿಸ್ತಾನ (Pakistan) ಮತ್ತು ಶ್ರೀಲಂಕಾದಲ್ಲಿ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ. ಈ ಬಾರಿ ಏಷ್ಯಾಕಪ್ ಟೂರ್ನಿಯ ಹಕ್ಕು ಪಾಕಿಸ್ತಾನದ ಬಳಿಯೇ ಇದ್ದರೂ, ಭಾರತ-ಪಾಕಿಸ್ತಾನದಲ್ಲಿ ಆಡಲು ಬಿಸಿಸಿಐ ಒಪ್ಪಿಗೆ ನಿರಾಕರಿಸಿದ ನಂತರ ಹೈಬ್ರಿಡ್ ಮಾದರಿಯಲ್ಲಿ ನಡೆಸಲು ಏಷ್ಯಾಕಪ್ ಕ್ರಿಕೆಟ್ ಸಮಿತಿ ನಿರ್ಧರಿಸಿದೆ. ಇದರಿಂದ ಪಾಕ್ ಅಸಮಾಧಾನಗೊಂಡಿದೆ. ಭಾರತವು ತಮ್ಮ ಏಷ್ಯಾಕಪ್ ಪಂದ್ಯಗಳನ್ನ ತಟಸ್ಥ ಸ್ಥಳದಲ್ಲಿ ಆಡಬೇಕೆಂದು ಒತ್ತಾಯಿಸಿದೆ. ನಾವೂ ಕೂಡ ವಿಶ್ವಕಪ್ ಟೂರ್ನಿಗೆ ಅದೇ ಬೇಡಿಕೆಯನ್ನ ಮುಂದಿಡುತ್ತೇವೆ ಎಂದು ಹೇಳಿದ್ದಾರೆ.
ಪಾಕ್ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ನಾನೂ ಸಹ 11 ಸಚಿವರ ಪೈಕಿ ಒಬ್ಬನಿದ್ದೇನೆ. ಈ ಸಮಸ್ಯೆ ಚರ್ಚಿಸಿ ಪ್ರಧಾನಿಗೆ ಪಾಕ್ ತಂಡವನ್ನು ಭಾರತಕ್ಕೆ ಕಳುಹಿಸದಂತೆ ಶಿಫಾರಸು ಮಾಡುತ್ತೇನೆ. ಅವರು ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನ ವಿಶ್ವಕಪ್ ಟೂರ್ನಿಗೆ ಬಾರದಿದ್ರೆ ICC ಬಳಿಯಿದೆ ಮಾಸ್ಟರ್ ಪ್ಲ್ಯಾನ್ – ಇದರಿಂದ ಯಾರಿಗೆ ನಷ್ಟ?
ಭಾರತವು ಕ್ರೀಡೆಯನ್ನ ರಾಜಕೀಯಕ್ಕೆ ತರುತ್ತಿದೆ. ಕೆಲ ದಿನಗಳ ಹಿಂದೆ ಭಾರತದಿಂದ ಬೇಸ್ ಬಾಲ್ ಟೂರ್ನಿಗೆ ಕ್ರೀಡಾಪಟುಗಳ ತಂಡ ಆಗಮಿಸಿತ್ತು. ಸುಮಾರು 60 ಮಂದಿ ಇದ್ದರು. ಇಲ್ಲಿ ಆಡಿ ಟೂರ್ನಿ ಗೆದ್ದುಕೊಂಡು ಹೋಗಿದ್ದಾರೆ. ಆ ನಂತರ ನಮ್ಮ ಪಾಕಿಸ್ತಾನ ತಂಡವು ಸಾಫ್ ಫುಟ್ಬಾಲ್ ಟೂರ್ನಿಗೆ ಭಾರತಕ್ಕೆ ಆಗಮಿಸಿದೆ. ಆದರೂ ಬಿಸಿಸಿಐ ಏಕೆ ಒಪ್ಪುತ್ತಿಲ್ಲ ಅನ್ನೋದೇ ಆರ್ಥವಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಭಾರತ ಏಕೆ ಪಾಕ್‌ಗೆ ಹೋಗ್ತಿಲ್ಲ: ಭಾರತ ತಂಡವು 2005-2006ರಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಪಾಕಿಸ್ತಾನಕ್ಕೆ ತನ್ನ ಕೊನೆಯ ಪ್ರವಾಸ ಕೈಗೊಂಡಿತ್ತು. ಈ ಪಂದ್ಯದಲ್ಲಿ ಇತ್ತಂಡಗಳು 3 ಟೆಸ್ಟ್ ಹಾಗೂ 5 ಏಕದಿನ ಪಂದ್ಯಗಳನ್ನಾಡಿದ್ದವು. ಆದರೆ 2008ರಲ್ಲಿ ನಡೆದ ಮುಂಬೈ ದಾಳಿಯ ನಂತರ ಉಭಯ ತಂಡಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿ ನಡೆದಿಲ್ಲ. ಐಸಿಸಿ (ICC) ಟೂರ್ನಿ ಅಥವಾ ಏಷ್ಯಾ ಕಪ್ ಟೂರ್ನಿಗಳಲ್ಲಿ ಮಾತ್ರವೇ ಪರಸ್ಪರ ಮುಖಾಮುಖಿಯಾಗುತ್ತಿವೆ.
Web Stories