ಪರ್ತ್: ಪಾಕಿಸ್ತಾನ (Pakistan) ಹಾಗೂ ಜಿಂಬಾಬ್ವೆ (Zimbabwe) ನಡುವಿನ ರಣರೋಚಕ ಕಾದಾಟದಲ್ಲಿ ಜಿಂಬಾಬ್ವೆ 1 ರನ್‍ಗಳ ರೋಚಕ ಜಯ ಸಾಧಿಸಿ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದೆ.
Advertisement
ಪಾಕಿಸ್ತಾನ ಗೆಲುವಿಗೆ ಕೊನೆಯ 2 ಓವರ್‌ಗಳಲ್ಲಿ 22 ರನ್ ಬೇಕಾಗಿತ್ತು. 19ನೇ ಓವರ್‌ನಲ್ಲಿ 11 ರನ್ ಬಂತು. ಕೊನೆಯ 6 ಎಸೆತಗಳಲ್ಲಿ 11 ರನ್ ಬೇಕಾಗಿತ್ತು. ಜಿಂಬಾಬ್ವೆ ಪರ ಬ್ರಾಡ್ ಇವಾನ್ಸ್ ಕೊನೆಯ ಓವರ್ ಎಸೆಯಲು ಮುಂದಾದರು. ಮೊಹಮ್ಮದ್ ನವಾಝ್ ಮತ್ತು ಮೊಹಮ್ಮದ್ ವಾಸೀಂ ಪಾಕಿಸ್ತಾನ ಪರ ಬ್ಯಾಟಿಂಗ್ ನಡೆಸುತ್ತಿದ್ದರು. ಮೊದಲ ಎಸೆತದಲ್ಲೇ ನವಾಝ್ 3 ರನ್ ಕಸಿದರು. ಮುಂದಿನ ಎಸೆತದಲ್ಲಿ ವಾಸೀಂ ಬೌಂಡರಿ ಬಾರಿಸಿದರು. ಕೊನೆಯ 4 ಎಸೆತಗಳಲ್ಲಿ ಪಾಕಿಸ್ತಾನ ಗೆಲುವಿಗೆ 4 ರನ್ ಬೇಕಾಗಿತ್ತು. ಮೂರನೇ ಎಸೆತದಲ್ಲಿ 1 ರನ್ ಬಂತು. ಕೊನೆಯ 3 ಎಸೆತಗಳಲ್ಲಿ ಗೆಲುವಿಗೆ 3 ರನ್ ಅವಶ್ಯಕತೆ ಇತ್ತು. 4 ಎಸೆತ ಡಾಟ್‍ಬಾಲ್. 5ನೇ ಎಸೆತದಲ್ಲಿ ನವಾಝ್ ಕ್ಯಾಚ್ ನೀಡಿ ಔಟ್ ಆದರು. ಕೊನೆಯ ಎಸೆದಲ್ಲಿ ಪಾಕ್ ಗೆಲುವಿಗೆ 3 ರನ್ ಬೇಕಾಗಿತ್ತು. ಶಾಹೀನ್ ಶಾ ಅಫ್ರಿದಿ ರನೌಟ್ ಆಗುವುದರೊಂದಿಗೆ ಜಿಂಬಾಬ್ವೆ 1 ರನ್‍ಗಳ ರೋಚಕ ಗೆಲುವು ದಾಖಲಿಸಿತು. ಇದನ್ನೂ ಓದಿ: ಅತ್ತ ಕೊಹ್ಲಿ, ಸೂರ್ಯ ಪಾರ್ಟ್‌ನರ್‌ಶಿಪ್ ಆಟ – ಇತ್ತ ಲೈಫ್ ಪಾರ್ಟ್‌ನರ್‌ಗೆ ಪ್ರಪೋಸ್
Advertisement
Advertisement
ಜಿಂಬಾಬ್ವೆ ನೀಡಿದ 131 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಪಾಕಿಸ್ತಾನ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಾಗಿತು. ಆದರೂ ಶಾನ್ ಮಸೂದ್ 44 ರನ್ (38 ಎಸೆತ, 3 ಬೌಂಡರಿ) ಮತ್ತು ಮೊಹಮ್ಮದ್ ನವಾಜ್ 22 ರನ್ (18 ಎಸೆತ, 1 ಬೌಂಡರಿ, 1 ಸಿಕ್ಸ್) ಚಚ್ಚಿ ಪ್ರಯತ್ನ ಪಟ್ಟರೂ ಕೊನೆಯ ಕ್ಷಣದಲ್ಲಿ ನವಾಝ್ ಔಟ್ ಆಗುವುದರೊಂದಿಗೆ ಗೆಲುವು ಮರಿಚಿಕೆಯಾಯಿತು. ಇದು ಪಾಕಿಸ್ತಾನಕ್ಕೆ ಟಿ20 ವಿಶ್ವಕಪ್ (T20 World Cup) ಕೂಟದಲ್ಲಿ ಎದುರಾದ 2ನೇ ಸೋಲು. ಮೊದಲ ಪಂದ್ಯದಲ್ಲಿ ಭಾರತ (India) ವಿರುದ್ಧ ಸೋತಿತ್ತು. ಇದನ್ನೂ ಓದಿ: ಡಚ್ಚರಿಗೆ ಸೋಲಿನ ಡಿಚ್ಚಿ – ಮೊದಲ ಸ್ಥಾನಕ್ಕೆ ಜಿಗಿದ ಭಾರತ
Advertisement
ಬೌಲಿಂಗ್‍ನಲ್ಲಿ ಸಿಕಂದರ್ ರಾಜಾ 3 ವಿಕೆಟ್ ಕಿತ್ತು ಮಿಂಚಿದರೆ, ಬ್ರಾಡ್ ಇವಾನ್ಸ್ 2 ವಿಕೆಟ್ ಕಿತ್ತು ಗೆಲುವಿನ ಹೀರೋಗಳಾದರು. ಈ ಮೊದಲು ಬ್ಯಾಟಿಂಗ್‍ನಲ್ಲಿ ಜಿಂಬಾಬ್ವೆ ಪರ ವಿಲಿಯಮ್ಸ್ ಸಿಡಿಸಿದ 31 ರನ್ (28 ಎಸೆತ, 3 ಬೌಂಡರಿ) ಜಿಂಬಾಬ್ವೆ ಪರ ಹೆಚ್ಚಿನ ಗಳಿಕೆಯಾಗಿತ್ತು.