ಇಸ್ಲಾಮಾಬಾದ್: ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ರಾವಲ್ಪಿಂಡಿ ಮೈದಾನದಲ್ಲಿ ನಡೆಯುತ್ತಿದೆ. ಐದನೇ ದಿನವಾದ ಇಂದು ಆಸ್ಟ್ರೇಲಿಯಾ ತಂಡದ ಆಟಗಾರ ಡೇವಿಡ್ ವಾರ್ನರ್ ಭಾಂಗ್ರಾ ನೃತ್ಯ ಮಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ.
Advertisement
ಮೊದಲ ಟೆಸ್ಟ್‌ನ ಕೊನೆಯ ದಿನವಾದ ಇಂದು ವಾರ್ನರ್ ಮೈದಾನದಲ್ಲಿ ಭಾಂಗ್ರಾ ನೃತ್ಯ ಮಾಡಿರುವ ವೀಡಿಯೋವನ್ನು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ಇದನ್ನೂ ಓದಿ: ಸೂರತ್‍ನಲ್ಲಿ ಅಭ್ಯಾಸ ಆರಂಭಿಸಿದ ಧೋನಿ – ಮುಗಿಬಿದ್ದ ಅಭಿಮಾನಿಗಳು
Advertisement
Advertisement
ಈ ವೀಡಿಯೋದಲ್ಲಿ ವಾರ್ನರ್ ಮೈದಾನದಲ್ಲಿ ಮ್ಯೂಸಿಕ್ ಬರುತ್ತಿದ್ದಂತೆ ನೃತ್ಯ ಮಾಡಲು ಆರಂಭಿಸಿದ್ದಾರೆ. ಹಾಡಿಗೆ ತಕ್ಕಂತೆ ಪಾಕಿಸ್ತಾನ ಮತ್ತು ಭಾರತದ ಪಂಜಾಬ್‍ನಲ್ಲಿ ಹೆಚ್ಚು ಜನಪ್ರಿಯವಾಗಿರುವ ಭಾಂಗ್ರಾ ನೃತ್ಯ ಮಾಡುವ ಮೂಲಕ ಪ್ರೇಕ್ಷಕರನ್ನು ಮನರಂಜಿಸಿದ್ದಾರೆ. ಇದನ್ನೂ ಓದಿ: ಒಟ್ಟು 65 ದಿನ ಐಪಿಎಲ್ ಕಲರವ – ಆರ್ಸಿಬಿಗೆ ಪಂಜಾಬ್ ಮೊದಲ ಎದುರಾಳಿ
Advertisement
The crowd and the camera love @davidwarner31 ????????#BoysReadyHain I #PAKvAUS pic.twitter.com/UWQYAjTLsk
— Pakistan Cricket (@TheRealPCB) March 8, 2022
ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಬ್ಯಾಟ್ಸ್‌ಮ್ಯಾನ್‌ಗಳ ಮೇಲಾಟಕ್ಕೆ ಸಾಕ್ಷಿಯಾಯಿತು. ಎರಡು ತಂಡಗಳು ಕೂಡ ದೊಡ್ಡ ಮೊತ್ತ ಕಲೆಹಾಕಿ ಮಿಂಚಿದವು. ಮೊದಲ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನ ತಂಡ 476 ರನ್ ಸಿಡಿಸಿ ಡಿಕ್ಲೇರ್ ಮಾಡಿಕೊಂಡರೆ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 459 ರನ್‍ಗೆ ಆಲೌಟ್ ಆಗಿ 16 ರನ್‍ಗಳ ಹಿನ್ನಡೆ ಅನುಭವಿಸಿದೆ. ಎರಡನೇ ಇನ್ನಿಂಗ್ಸ್ ಆರಂಭಿಸಿದ ಪಾಕಿಸ್ತಾನ ತಂಡ ಬೃಹತ್ ಮೊತ್ತದತ್ತ ಮುನ್ನುಗ್ಗಿದೆ. ಆದರೂ ಇಂದು ಕೊನೆಯ ದಿನವಾಗಿರುವುದರಿಂದಾಗಿ ಡ್ರಾ ಆಗುವ ಸಾಧ್ಯತೆ ಹೆಚ್ಚಿದೆ.