– ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಜಿಗಿತ
– ಕೊನೆಯ ಸ್ಥಾನಕ್ಕೆ ಜಿಗಿದ ಇಂಗ್ಲೆಂಡ್
ಚೆನ್ನೈ: ಇಂಗ್ಲೆಂಡ್‌ಗೆ (England) ಶಾಕ್ ನೀಡಿದ್ದ ಅಫ್ಘಾನಿಸ್ತಾನ ಈಗ ಬದ್ಧ ವೈರಿ ಪಾಕಿಸ್ತಾನಕ್ಕೂ (Pakistan) ಶಾಕ್ ನೀಡಿದೆ. ಇದೇ ಮೊದಲ ಬಾರಿಗೆ ವಿಶ್ವಕಪ್ ಕ್ರಿಕೆಟ್‌ನಲ್ಲಿ (World Cup Cricket) ಅಫ್ಘಾನಿಸ್ತಾನ (Afghanistan) ಪಾಕಿಸ್ತಾನದ ವಿರುದ್ಧ ಜಯಗಳಿಸಿ ಇತಿಹಾಸ ಸೃಷ್ಟಿಸಿದೆ.
Advertisement
ಪಾಕಿಸ್ತಾನ ಕಳಪೆ ಬೌಲಿಂಗ್ ಮತ್ತು ಕಳಪೆ ಫೀಲ್ಡಿಂಗ್ ಲಾಭ ಪಡೆದ ಅಫ್ಘಾನಿಸ್ತಾನ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಗೆಲ್ಲಲು 282 ರನ್‌ಗಳ ಗುರಿಯನ್ನು ಪಡೆದ ಅಫ್ಘಾನಿಸ್ತಾನ ಇನ್ನೂ 6 ಎಸೆತ ಇರುವಂತೆಯೇ 2 ವಿಕೆಟ್ ನಷ್ಟಕ್ಕೆ 286 ರನ್ ಹೊಡೆಯುವ ಮೂಲಕ ಜಯ ಸಾಧಿಸಿತು.
Advertisement
ಬ್ಯಾಟಿಂಗ್ ಆರಂಭಿಸಿದ ಅಫ್ಘಾನಿಸ್ತಾನ ರೆಹಮಾನುಲ್ಲಾ ಗುರ್ಬಾಜ್ ಮತ್ತು ಇಬ್ರಾಹಿಂ ಜಾರ್ದನ್ ಮೊದಲ ವಿಕೆಟಿಗೆ 128 ಎಸೆತಗಳಲ್ಲಿ 130 ರನ್ ಜೊತೆಯಾಟವಾಡುವ ಮೂಲಕ ಪಂದ್ಯವನ್ನು ಪಾಕ್ ಕೈಯಿಂದ ಕಸಿದರು.
Advertisement
Look, what this win means for us! ????
Incredible scenes in Chennai! ????#AfghanAtalan | #CWC23 | #AFGvPAK | #WarzaMaidanGata pic.twitter.com/G17vJ9gl5q
— Afghanistan Cricket Board (@ACBofficials) October 23, 2023
Advertisement
ನಂತರ ಎರಡನೇ ವಿಕೆಟಿಗೆ ರೆಹ್ಮಾತ್ ಶಾ ಮತ್ತು ಜದ್ರಾನ್ 74 ಎಸೆತಗಳಲ್ಲಿ 60 ರನ್ ಜೊತೆಯಾಟ, ಮುರಿಯದ ಮೂರನೇ ವಿಕೆಟಿಗೆ ರೆಹ್ಮತ್ ಶಾ ಮತ್ತು ಹಶ್ಮತುಲ್ಲಾ ಶಾಹಿದಿ 93 ಎಸೆತಗಳಲ್ಲಿ 96 ರನ್ ಜೊತೆಯಾಟವಾಡಿ ತಂಡವನ್ನು ಗೆಲ್ಲಿಸಿಕೊಟ್ಟರು. ಇದನ್ನೂ ಓದಿ: ಅಫ್ಘಾನಿಸ್ತಾನಕ್ಕೆ ಪಾಕ್ ಮೇಲೆ ಸಿಟ್ಯಾಕೆ?
I think Mickey Arthur will resign today ..
Worst Cricket from Pakistan ????????#PAKvsAFG pic.twitter.com/Si1zYxmMcs
— Hamza Khan (محترم) (@ranahamza1111) October 23, 2023
ರೆಹಮಾನುಲ್ಲ 65 ರನ್ (53 ಎಸೆತ, 9 ಬೌಂಡರಿ, 1 ಸಿಕ್ಸರ್), ಜದ್ರಾನ್ 87 ರನ್ (113 ಎಸೆತ, 10 ಬೌಂಡರಿ) ರೆಹ್ಮತ್ ಶಾ ಔಟಾಗದೇ 77 ರನ್, ಶಾಹಿದಿ ಔಟಾಗದೇ 48 ರನ್ (45 ಎಸೆತ, 4 ಬೌಂಡರಿ) ಹೊಡೆದರು.
Let's all take a moment to laugh at Pakistan's fielding! ????????????#PAKvsAFG pic.twitter.com/xPPtBjMczo
— Daily Detect (@DailyDetect) October 23, 2023
ಕಳಪೆ ಫೀಲ್ಡಿಂಗ್:
ಇಂದಿನ ಪಾಕ್ ಫೀಲ್ಡಿಂಗ್ ಕಳಪೆಯಾಗಿತ್ತು. ಬೌಂಡರಿ ಹೋಗುವುದನ್ನು ತಡೆಯಲು ಪಾಕ್ ಫೀಲ್ಡರ್‌ಗಳು ವಿಫಲರಾದರು. ಸರಿಯಾಗಿ ಫೀಲ್ಡ್ ಮಾಡಿದರೆ ಹಲವು ಬೌಂಡರಿಗಳನ್ನು ತಡೆಯಬಹುದಿತ್ತು. ಸರಿಯಾಗಿ ಫೀಲ್ಡಿಂಗ್ ಮಾಡದ್ದಕ್ಕೆ ಕೀಪರ್ ರಿಜ್ವಾನ್ ಮೊಹಮ್ಮದ್ ಅವರು ತಲೆಗೆ ಕೈಯನ್ನು ಚಚ್ಚಿ ಸಿಟ್ಟು ಹೊರಹಾಕಿದ್ದರು.
Here is what you all have been waiting for; Enjoy the winning celebrations and an outstanding @RashidKhan_19 dance! ????#AfghanAtalan | #CWC23 | #AFGvPAK | #WarzaMaidanGata pic.twitter.com/Tb6KVbLlji
— Afghanistan Cricket Board (@ACBofficials) October 23, 2023
ಪಾಕಿಸ್ತಾನದ ಆರಂಭ ಉತ್ತಮವಾಗಿತ್ತು. ಅಬ್ದುಲ್ಲ ಶಫಿಕ್ 58 ರನ್( 75 ಎಸೆತ, 5 ಬೌಂಡರಿ, 2 ಸಿಕ್ಸರ್), ನಾಯಕ ಬಾಬರ್ ಅಜಂ 74 ರನ್ ( 92 ಎಸೆತ, 4 ಬೌಂಡರಿ 1 ಸಿಕ್ಸರ್) ಹೊಡೆದು ಔಟಾದರು.
#PAKvAFG
Rizwan hiding his face and Mickey Arthur face after watching the fielding of Pakistan. ????????????????#PAKvsAFG pic.twitter.com/LAj0eoonoX
— Kohli Das ????????⭐ (@kingsuper1816) October 23, 2023
ಶಾದಬ್ ಶಕೀಲ್ 40 ರನ್(38 ಎಸೆತ, 1 ಬೌಂಡರಿ, 1 ಸಿಕ್ಸರ್), ಇಫ್ತಿಕಾರ್ ಅಹ್ಮದ್ 40 ರನ್(27 ಎಸೆತ, 2 ಬೌಂಡರಿ, 4 ಸಿಕ್ಸರ್) ಚಚ್ಚಿದ ಪರಿಣಾಮ ಪಾಕಿಸ್ತಾನ 280 ರನ್‌ಗಳ ಗಡಿಯನ್ನು ದಾಟಿತು.
ನೂರ್ ಅಹ್ಮದ್ 3 ವಿಕೆಟ್ ಕಿತ್ತರೆ, ನವೀನ್ ಉಲ್ ಹಕ್ 2 ವಿಕೆಟ್, ಮೊಹಮ್ಮದ್ ನಬಿ ಮತ್ತು ಅಜ್ಮತ್ತುಲ್ಲ ತಲಾ ಒಂದು ವಿಕೆಟ್ ಪಡೆದರು.
Web Stories