ಶಾರ್ಜಾ: ಏಷ್ಯಾ ಕಪ್(Asia Cup) ಸೂಪರ್ 4 ಪಂದ್ಯದಲ್ಲಿ ಪಾಕಿಸ್ತಾನ(Pakistan) ವಿರುದ್ಧ ಸೋತಿದ್ದಕ್ಕೆ ಅಫ್ಘಾನಿಸ್ತಾನದ ಕ್ರಿಕೆಟ್ ಅಭಿಮಾನಿಗಳು ಕ್ರೀಡಾಂಗಣದಲ್ಲಿ ದಾಂಧಲೆ ನಡೆಸಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ(Afghanistan) 6 ವಿಕೆಟ್ ನಷ್ಟಕ್ಕೆ 129 ರನ್ ಗಳಿಸಿತು. ಪಾಕಿಸ್ತಾನ 19.2 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿ ರೋಚಕ ಜಯಗಳಿಸಿತು. ಇದನ್ನೂ ಓದಿ: ಏಷ್ಯಾಕಪ್ ಸೋಲು, ರೊಚ್ಚಿಗೆದ್ದ ಅಭಿಮಾನಿಗಳು – #BoycottIPL ಟ್ರೆಂಡ್
Advertisement
Just saw another Video of Afghan supporters demolishing stadium and beating Pakistani Supporters
what a disgraceful move!@ICC @sharjahstadium
#PAKvAFG #AsiaCup2022 #AsiaCupT20 #NaseemShah
#PAKvAFG pic.twitter.com/eh3bVrtQQu
— MUHAMMAD ROBAS (@IAmRobas) September 7, 2022
Advertisement
ಕೊನೆಯ ಓವರ್‌ನಲ್ಲಿ ಪಂದ್ಯ ಸೋತ ಬೆನ್ನಲ್ಲೇ ಅಫ್ಘಾನಿಸ್ತಾನದ ಅಭಿಮಾನಿಗಳು(Afghan Fans) ರೊಚ್ಚಿಗೆದ್ದು ಕ್ರೀಡಾಂಗಣದಲ್ಲಿ ಅಳವಡಿಸಿದ್ದ ಕುರ್ಚಿಗಳನ್ನು ಕಿತ್ತಿದ್ದಾರೆ. ಕಿತ್ತ ಚಯರ್‌ಗಳನ್ನು ಮೇಲಿನಿಂದ ಎಸೆದಿದ್ದಾರೆ.
Advertisement
ಆಕ್ರೋಶಗೊಂಡ ಅಭಿಮಾನಿಗಳು ಪಾಕಿಸ್ತಾನದ ಟೀಶರ್ಟ್ ಧರಿಸಿದ ಅಭಿಮಾನಿಗಳ ಮೇಲೆ ಚಯರ್‌ನಿಂದ ಹಲ್ಲೆ ನಡೆಸಿದ್ದಾರೆ.
Advertisement
This is what Afghan fans are doing.
This is what they've done in the past multiple times.This is a game and its supposed to be played and taken in the right spirit.@ShafiqStanikzai your crowd & your players both need to learn a few things if you guys want to grow in the sport. pic.twitter.com/rg57D0c7t8
— Shoaib Akhtar (@shoaib100mph) September 7, 2022
ಸಾಮಾಜಿಕ ಜಾಲತಾಣದಲ್ಲಿ ಅಫ್ಘಾನ್ ಅಭಿಮಾನಿಗಳ ಹುಚ್ಚಾಟದ ವೀಡಿಯೋ ವೈರಲ್ ಆಗಿದೆ. ತಾಲಿಬಾನ್ ಹೇಗೆ ಜನರನ್ನು ಹೆದರಿಸಿ ಸರ್ಕಾರ ನಡೆಸುತ್ತಿದೆಯೋ ಅದೇ ರೀತಿಯ ಮನಸ್ಥಿತಿ ಅಲ್ಲಿನ ಕ್ರಿಕೆಟ್ ಅಭಿಮಾನಿಗಳಿಗೆ ಬಂದಿದೆ ಎಂದು ಜನ ಸಿಟ್ಟು ಹೊರ ಹಾಕುತ್ತಿದ್ದಾರೆ.
ಅಫ್ಘಾನಿಸ್ತಾನ ಈ ಪಂದ್ಯವನ್ನು ಸೋತ ಹಿನ್ನೆಲೆಯಲ್ಲಿ ಇಂದು ನಡೆಯಲಿರುವ ಭಾರತದ ಪಂದ್ಯ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಲಿದೆ. ಎರಡು ಪಂದ್ಯ ಗೆದ್ದಿರುವ ಶ್ರೀಲಂಕಾ ಮತ್ತು ಪಾಕಿಸ್ತಾನ ಭಾನುವಾರ ಫೈನಲ್‌ನಲ್ಲಿ ಸೆಣಸಾಡಲಿವೆ.