ವಿಶ್ವದ ಗಮನ ಇದೀಗ ಕಾನ್ ಸಿನಿಮೋತ್ಸವದಲ್ಲಿದೆ. ಎಲ್ಲಾ ಚಿತ್ರರಂಗದ ಸ್ಟಾರ್‌ಗಳು ಕಾನ್ ಫೆಸ್ಟಿವಲ್‌ನಲ್ಲಿ ಭಾಗಿಯಾಗುತ್ತಿದ್ದಾರೆ. ಈಗ ವಿಶೇಷವೆಂದರೆ ಪಾಕಿಸ್ತಾನದ ತೃತಿಯ ಲಿಂಗಿ ಕಲಾವಿದೆ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿ, ಎಲ್ಲರ ಗಮನ ಸೆಳೆದಿದ್ದಾರೆ.
Advertisement
ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಕಾನ್ ಫೆಸ್ಟಿವಲ್‌ನಲ್ಲಿ ಹಾಲಿವುಡ್, ಭಾರತೀಯ ಚಿತ್ರರಂಗ ಸೇರಿದಂತೆ ವಿಶ್ವದ ಖ್ಯಾತ ತಾರೆಯರು ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ್ದಾರೆ. ಇದೀಗ ಮೊದಲ ಬಾರಿಗೆ ಪಾಕಿಸ್ತಾನದ ಚಿತ್ರವೊಂದು ಅವಕಾಶ ಪಡೆದಿದೆ. ಪಾಕಿಸ್ತಾನವನ್ನು ಪ್ರತಿನಿಧಿಸುತ್ತಿರುವ `ಜಾಯ್‌ಲ್ಯಾಂಡ್’ ಚಿತ್ರದ ತೃತಿಯ ಲಿಂಗಿ ನಟಿ ಅಲಿನಾ ಖಾನ್ ಕೂಡ ಭಾಗಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ರೆಡ್ ಕಾರ್ಪೆಟ್‌ನಲ್ಲಿ ತೃತಿಯ ಲಿಂಗಿ ಪಾಕಿಸ್ತಾನ ನಟಿಯೊಬ್ಬರು ಹೆಜ್ಜೆ ಹಾಕಿದ್ದು, ಈ ವಿಚಾರ ವಿಶ್ವದೆಲ್ಲೆಡೆ ಸುದ್ದಿಯಾಗಿದೆ.
Advertisement
Advertisement
ಸೈಮ್ ಸಾದಿಕ್ ನಿರ್ದೇಶನದ `ಜಾಯ್‌ಲ್ಯಾಂಡ್’ ಚಿತ್ರದಲ್ಲಿ ಅಲಿನಾ ಖಾನ್ ಬಣ್ಣ ಹಚ್ಚಿದ್ದಾರೆ. ಈ ಚಿತ್ರದ ಭಿನ್ನ ಕಥೆಯನ್ನ ಸಿನಿಪ್ರಿಯರು ನೋಡಿ ಇಷ್ಟಪಟ್ಟಿದ್ದರು. ಇದೀಗ ಕಾನ್ ಫೆಸ್ಟಿವಲ್‌ಗೂ ಈ ಸಿನಿಮಾ ಸೆಲೆಕ್ಟ್ ಆಗಿ ಅಲಿಯಾ ಖಾನ್ ಎಂಟ್ರಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ತೃತಿಯ ಲಿಂಗಿ ಕಥೆಯನ್ನ ಒಳಗೊಂಡಿರೋ `ಜಾಯ್‌ಲ್ಯಾಂಡ್’ ಕಥೆ ಕಾನ್ ಫೆಸ್ಟಿವಲ್‌ನಲ್ಲಿ ಪ್ರದರ್ಶನವಾಗಲಿದೆ. ಇದನ್ನೂ ಓದಿ: ನಟಿ ಚೈತ್ರಾ ಹಳ್ಳಿಕೇರಿ 25 ಕೋಟಿ ಬೇಡಿಕೆ ಇಟ್ಟರಾ? ನಟಿಯ ಆರೋಪಕ್ಕೆ ತಿರುಗೇಟು ನೀಡಿದ ಪತಿ ಬಾಲಾಜಿ
Advertisement
ಕಾನ್ ಫೆಸ್ಟಿವಲ್ ಮೇ 17ರಂದು ಆರಂಭವಾಗಿದ್ದು, ಮೇ 28ಕ್ಕೆ ಮುಕ್ತಾಯಗೊಳ್ಳಲಿದೆ. ದೀಪಿಕಾ ಪಡುಕೋಣೆ ಜ್ಯೂರಿಯಾಗಿ ಕಾಣಿಸಿಕೊಂಡ್ರೆ, ಪೂಜಾ ಹೆಗ್ಡೆ, ತಮನ್ನಾ, ಐಶ್ವರ್ಯ ರೈ, ಊರ್ವಶಿ ಇನ್ನು ಮುಂತಾದ ತಾರೆಯರು ಕಾನ್ ಫಸ್ಟಿವಲ್‌ನಲ್ಲಿ ಭಾಗಿಯಾಗಿದ್ದಾರೆ.