ಇಸ್ಲಾಮಾಬಾದ್: ಇಸ್ಲಾಮಿಕ್ ಸಹಕಾರ ಸಂಘಟನೆಯು (ಓಐಸಿ) ವಿದೇಶಾಂಗ ಸಚಿವರೊಂದಿಗೆ ಅಧಿವೇಶನ ಆಯೋಜಿಸಿದ್ದು, ರಾಜಧಾನಿ ಇಸ್ಲಾಮಾಬಾದ್‍ನಲ್ಲಿ 3 ದಿನಗಳವರೆಗೂ ಮೊಬೈಲ್ ಫೋನ್ ಸೇವೆ ಸ್ಥಗಿತಗೊಳಿಸುತ್ತಿರುವುದಾಗಿ ಪಾಕಿಸ್ತಾನ ಘೋಷಿಸಿದೆ.
ಒಐಸಿಯು ವಿದೇಶಾಂಗ ಸಚಿವರ ಜೊತೆ ಅಧಿವೇಶನವನ್ನು ಶುಕ್ರವಾರ ಪ್ರಾರಂಭಿಸುವುದರಿಂದ ಡಿಸೆಂಬರ್ 17 ರಿಂದ 19ರವರೆಗೂ ಮೂರು ದಿನಗಳವರೆಗೆ ಮೊಬೈಲ್ ಫೋನ್ ಸೇವೆಗಳನ್ನು ಸ್ಥಗಿತಗೊಳಿಸುತ್ತಿರುವುದಾಗಿ ಆಂತರಿಕ ಸಚಿವಾಲಯ ಪ್ರಕಟಿಸಿದೆ. ಇದನ್ನೂ ಓದಿ: ತುಂಬಾ ಜನರು ನನ್ನನ್ನ ಜೈಲಿಗೆ ಕಳುಹಿಸಲು ಸಿದ್ಧರಿದ್ದಾರೆ: ರಮೇಶ್ ಕುಮಾರ್
Advertisement
Advertisement
ಆಗಸ್ಟ್‍ನಲ್ಲಿ ತಾಲಿಬಾನ್ ಕಾಬೂಲ್ ಅನ್ನು ವಶಪಡಿಸಿಕೊಂಡ ನಂತರ ಅಗತ್ಯವಿರುವ ಅಫ್ಘಾನಿಸ್ತಾನದ ಲಕ್ಷಾಂತರ ಜನರಿಗೆ ಆಹಾರ, ಔಷಧ ಮತ್ತು ಆಶ್ರಯವನ್ನು ಒದಗಿಸುವ ಬಗ್ಗೆ ಒಐಸಿ ಅಧಿವೇಶನದಲ್ಲಿ ಚರ್ಚೆ ನಡೆಸಲಿದೆ. ಇಸ್ಲಾಮಾಬಾದ್ ವಿಮಾನ ನಿಲ್ದಾಣದಿಂದ ರೆಡ್ ಜೋನ್‍ವರೆಗೂ ಮೊಬೈಲ್ ಫೋನ್ ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತಿದ್ದು, ಈ ಸಂಬಂಧ ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರ (ಪಿಟಿಎ) ಆಂತರಿಕ ಸಚಿವಾಲಯದಿಂದ ಪತ್ರ ಸ್ವೀಕರಿಸಿದೆ. ಇದನ್ನೂ ಓದಿ: ಇನ್ಮುಂದೆ ಎಚ್ಚರಿಕೆಯಿಂದ ಮಾತಾಡ್ತೀನಿ- ಕ್ಷಮೆಯಾಚಿಸಿದ ರಮೇಶ್ ಕುಮಾರ್
Advertisement
Advertisement
ಅಧಿವೇಶನವನ್ನು ಆಯೋಜಿಸಲು ಸಂಸತ್ ಭವನದ ನಿರ್ವಹಣೆಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಎಂಟು ದಿನಗಳ ಕಾಲ ಹಸ್ತಾಂತರಿಸಲಾಗಿದೆ. ಈ ಕುರಿತಂತೆ ಸಮಾಲೋಚನೆಗಳು ಇನ್ನೂ ನಡೆಯುತ್ತಿರುವುದರಿಂದ ಈ ವಿಷಯದ ಬಗ್ಗೆ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಸದ್ಯ ಮೊಬೈಲ್ ಸೇವೆ ಸ್ಥಗಿತಗೊಳಿಸುವ ಸಮಯ ಮತ್ತು ದಿನಾಂಕಗಳನ್ನು ಶುಕ್ರವಾರ ಅಂತಿಮಗೊಳಿಸಲಾಗುವುದು ಎಂದು ಆಂತರಿಕ ಸಚಿವ ಶೇಖ್ ರಶೀದ್ ಹೇಳಿದ್ದಾರೆ.