ಇಸ್ಲಾಮಾಬಾದ್: ಐಸಿಸಿ ಏಕದಿನ ವಿಶ್ವಕಪ್ (World Cup) ಪಂದ್ಯಕ್ಕಾಗಿ ಭಾರತಕ್ಕೆ ಪ್ರಯಾಣಿಸಲಿರುವ ಪಾಕ್‍ಗೆ (Pakistan) ಅನುಮತಿ ನೀಡುವ ಮೊದಲು ಪಂದ್ಯ ನಡೆಯುವ ಪ್ರದೇಶಗಳನ್ನು ಪರಿಶೀಲಿಸಲು ಭದ್ರತಾ ನಿಯೋಗವನ್ನು ಕಳುಹಿಸಲು ಪಾಕಿಸ್ತಾನ ತಿರ್ಮಾನಿಸಿದೆ.
ಈದ್ ರಜೆಯ ಮುಗಿದ ಬಳಿಕ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (PCB) ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ. ನಂತರ ಭದ್ರತಾ ನಿಯೋಗವನ್ನು ಭಾರತಕ್ಕೆ ಯಾವಾಗ ಕಳುಹಿಸಬೇಕು ಎಂಬುದರ ಬಗ್ಗೆ ಸರ್ಕಾರ ನಿರ್ಧರಿಸಲಿದೆ ಎಂದು ಕ್ರೀಡಾ ಸಚಿವಾಲಯದ ಅಧಿಕೃತ ಮೂಲಗಳು ತಿಳಿಸಿವೆ. ಇದನ್ನೂ ಓದಿ: Lausanne Diamond League: ಚಿನ್ನಕ್ಕೆ ಮುತ್ತಿಟ್ಟ ನೀರಜ್ ಚೋಪ್ರಾ
Advertisement
ಭಾರತ (Team India), ಪಾಕಿಸ್ತಾನ ನಡುವಿನ ಪಂದ್ಯ ನಡೆಯಲಿರುವ ಸ್ಥಳವಾದ ಚೆನ್ನೈ, ಬೆಂಗಳೂರು, ಹೈದರಾಬಾದ್, ಕೋಲ್ಕತ್ತಾ ಮತ್ತು ಅಹಮದಾಬಾದ್‍ಗೆ ನಿಯೋಗ ಭೇಟಿ ನೀಡಲಿದೆ. ಭಾರತಕ್ಕೆ ಪ್ರವಾಸ ಮಾಡುವ ಮುನ್ನ ಸಾಮಾನ್ಯವಾಗಿ ನಿಯೋಗವನ್ನು ಕಳುಹಿಸಲು ಸರ್ಕಾರದಿಂದ ಅನುಮತಿ ಪಡೆಯುವುದು ಕ್ರಿಕೆಟ್ ಮಂಡಳಿಯ ಕರ್ತವ್ಯವಾಗಿದೆ ಎಂದು ಪಾಕ್‍ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement
Advertisement
ನಿಯೋಗವು ಭಾರತದಲ್ಲಿನ ಅಧಿಕಾರಿಗಳೊಂದಿಗೆ ಸಂವಾದ ನಡೆಸಲಿದೆ. ಪಂದ್ಯಾವಳಿಗೆ ತೆರಳುವ ನಮ್ಮ ಆಟಗಾರರು, ಅಧಿಕಾರಿಗಳು, ಅಭಿಮಾನಿಗಳು ಮತ್ತು ಮಾಧ್ಯಮದ ಭದ್ರತೆ ಮತ್ತು ಇತರ ವ್ಯವಸ್ಥೆಗಳ ಬಗ್ಗೆ ಅವರೊಂದಿಗೆ ಚರ್ಚಿಸಲಿದೆ. ಇದರೊಂದಿಗೆ ಆಟಗಾರರು ಉಳಿಯುವ ಸ್ಥಳ ಹಾಗೂ ಕ್ರೀಡಾಂಗಣವನ್ನು ನಿಯೋಗ ಪರಿಶೀಲಿಸಲಿದೆ ಎಂದು ಪಾಕ್ ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಈಗಾಗಲೇ ಗೊತ್ತುಪಡಿಸಿದ ಸ್ಥಳದ ಬದಲಿಗೆ ಬೇರೆ ಯಾವುದಾದರೂ ಸ್ಥಳದಲ್ಲಿ ಆಡುವುದು ಸೂಕ್ತ ಎನಿಸಿದರೆ ನಿಯೋಗ ತನ್ನ ವರದಿಯಲ್ಲಿ ಉಲ್ಲೇಖಿಸಲಿದೆ. ನಿಯೋಗವು ಯಾವುದಾದರೂ ಸಮಸ್ಯೆಗಳನ್ನು ಗುರುತಿಸಿದರೆ ಪಿಸಿಬಿ, ಐಸಿಸಿ ಮತ್ತು ಬಿಸಿಸಿಐಯೊಂದಿಗೆ ವರದಿಯನ್ನು ಹಂಚಿಕೊಳ್ಳಲಿದೆ.
ಈ ಹಿಂದೆ ಪಾಕಿಸ್ತಾನವು ಟಿ20 ವಿಶ್ವಕಪ್‍ಗಾಗಿ ಭಾರತಕ್ಕೆ ತೆರಳಿದಾಗ ಪಾಕ್ ಸರ್ಕಾರವು ನಿಯೋಗವನ್ನು ತಪಾಸಣೆಗೆ ಕಳುಹಿಸಿತ್ತು. ಈ ವೇಳೆ ನಿಯೋಗದ ಶಿಫಾರಸಿನ ಮೇರೆಗೆ ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಭಾರತ ವಿರುದ್ಧದ ಪಂದ್ಯವನ್ನು ಕೋಲ್ಕತ್ತಾಗೆ ಸ್ಥಳಾಂತರಿಸಲಾಗಿತ್ತು.
ಈ ಬಾರಿಯ ವಿಶ್ವಕಪ್ ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ಭಾರತದ 10 ನಗರಗಳಲ್ಲಿ ನಡೆಯಲಿದೆ. ಇದನ್ನೂ ಓದಿ: Byju’sಗೆ ಗುಡ್‌ಬೈ – Dream11 ತೆಕ್ಕೆಗೆ ಟೀಂ ಇಂಡಿಯಾ ಜೆರ್ಸಿ ಪ್ರಾಯೋಜಕತ್ವ
Web Stories