ಪಾಕ್‌ ಜೈಲುಗಳಲ್ಲಿದ್ದಾರೆ 654 ಭಾರತೀಯ ಮೀನುಗಾರರು; ಶುಕ್ರವಾರ 199 ಮಂದಿ ರಿಲೀಸ್‌

Public TV
1 Min Read
Indian Fishermen pakistan jail

ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಜಲಗಡಿಯೊಳಗೆ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ ಬಂಧಿಸಲಾಗಿದ್ದ 199 ಮಂದಿ ಭಾರತೀಯರನ್ನು (Indian Fishermen)  ಇದೇ ಶುಕ್ರವಾರದಂದು ಪಾಕ್‌ ಅಧಿಕಾರಿಗಳು ಬಿಡುಗಡೆ ಮಾಡಲಿದ್ದಾರೆ.

ಶುಕ್ರವಾರದಂದು 199 ಮೀನುಗಾರರ ಬಿಡುಗಡೆ ಮಾಡಿ ಭಾರತಕ್ಕೆ (India) ವಾಪಸ್‌ ಕಳುಹಿಸಿ ಎಂದು ಸರ್ಕಾರಿ ಸಚಿವಾಲಯ ಹೇಳಿದೆ ಎಂದು ಸಿಂಧ್‌ನ ಜೈಲು ಮತ್ತು ತಿದ್ದುಪಡಿ ವಿಭಾಗದ ಉನ್ನತ ಪೊಲೀಸ್ ಅಧಿಕಾರಿ ಕಾಜಿ ನಜೀರ್ ತಿಳಿಸಿದ್ದಾರೆ. ಈ ಮೀನುಗಾರರನ್ನು ಲಾಹೋರ್‌ಗೆ ಕಳುಹಿಸಲಾಗುವುದು. ವಾಘಾ ಗಡಿಯಲ್ಲಿ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು. ಸದ್ಯ ಈ ಮೀನುಗಾರರನ್ನು ಪಾಕಿಸ್ತಾನದ ಲಾಂಧಿ ಜೈಲಿನಲ್ಲಿ ಇರಿಸಲಾಗಿದೆ. ಇದನ್ನೂ ಓದಿ: ಭಾರತ – ಪಾಕಿಸ್ತಾನ ಕಾಶ್ಮೀರದ ವಿವಾದವನ್ನು ವಿಶ್ವಸಂಸ್ಥೆ ನಿರ್ಣಯದಂತೆ ಬಗೆಹರಿಸಬೇಕು: ಚೀನಾ

india pakistan

ಮೀನುಗಾರರೊಂದಿಗೆ ವಾಪಸಾಗಬೇಕಿದ್ದ ಭಾರತೀಯ ನಾಗರಿಕ ಖೈದಿ ಜುಲ್ಫಿಕರ್ ಅನಾರೋಗ್ಯದ ಕಾರಣ ಶನಿವಾರ ಕರಾಚಿಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಅವರ ಮೃತದೇಹವನ್ನು ಸಹ ಮೀನುಗಾರರೊಂದಿಗೆ ಭಾರತಕ್ಕೆ ಹಸ್ತಾಂತರಿಸಲಾಗುತ್ತಿದೆ.

ಭಾರತೀಯ ಖೈದಿ ತೀವ್ರ ಜ್ವರ ಮತ್ತು ಎದೆನೋವಿನ ಸಮಸ್ಯೆಗಳ ಬಗ್ಗೆ ದೂರು ನೀಡಿದ್ದರು. ಕಳೆದ ವಾರ ಅವರ ಸ್ಥಿತಿ ಹದಗೆಟ್ಟಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿ ಅವರು ಶ್ವಾಸಕೋಶದ ಸೋಂಕಿನಿಂದ ನಿಧನರಾದರು ಎಂದು ಲಾಂಧಿ ಜೈಲಿನ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಭಯೋತ್ಪಾದನೆಗೆ ಹಣಕಾಸು ನೆರವು ನಿಲ್ಲಿಸಬೇಕು – ಬಹಿರಂಗ ಸಭೆಯಲ್ಲೇ ಪಾಕ್‌ ಸಚಿವನಿಗೆ ಪಂಚ್‌ಕೊಟ್ಟ ಜೈಶಂಕರ್‌

654 ಭಾರತೀಯ ಮೀನುಗಾರರು ಕರಾಚಿ ಜೈಲುಗಳಲ್ಲಿ ಇದ್ದಾರೆ. ಅಂದಾಜು 83 ಪಾಕಿಸ್ತಾನಿ ಮೀನುಗಾರರು ಭಾರತೀಯ ಜೈಲುಗಳಲ್ಲಿದ್ದಾರೆ. 654 ಭಾರತೀಯ ಮೀನುಗಾರರ ಪೈಕಿ 631 ಮಂದಿ ತಮ್ಮ ಶಿಕ್ಷೆಯನ್ನು ಪೂರ್ಣಗೊಳಿಸಿದ್ದಾರೆ.

Share This Article