ಮಂಡ್ಯ: ಭಾರತದಲ್ಲಿದ್ದು ಪಾಕಿಸ್ತಾನದ ಪರವಾಗಿ ಮಾತನಾಡುವ ಮುಸಲ್ಮಾನರೇ ಆಗಿರಲಿ, ಮುಸಲ್ಮಾನರೇತರರೇ ಆಗಿರಲಿ ಅವನನ್ನು ಬಾರ್ಡರ್ ನಲ್ಲಿ ನಿಲ್ಲಿಸಿ ಗುಂಡು ಹೊಡೆಯಬೇಕು ಎಂದು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಖಾನ್ ಆಕ್ರೋಶ ಹೊರಹಾಕಿದ್ದಾರೆ.
ಮಂಡ್ಯದಲ್ಲಿ ಗಡಿಯಲ್ಲಿನ ಉದ್ವಿಗ್ನ ಸ್ಥಿತಿಯ ಬಗ್ಗೆ ಮಾತನಾಡಿ, ನಾನೊಬ್ಬ ಭಾರತೀಯ ಎಂದು ಗರ್ವದಿಂದ ಹೇಳುತ್ತೇನೆ. ಇವತ್ತು ಪಾಕಿಸ್ತಾನದ ವಿರುದ್ಧ ಭಾರತ ತೆಗೆದುಕೊಂಡಿರುವ ನಿರ್ಧಾರಕ್ಕೆ ನಾನು ಸೆಲ್ಯೂಟ್ ಮಾಡುತ್ತೇನೆ. ನಾನು ಪಾಕಿಸ್ತಾನವನ್ನು ದ್ವೇಷಿಸುತ್ತೇನೆ. ನಮ್ಮ ಭಾರತದಲ್ಲಿರುವ ಕಾಶ್ಮೀರವನ್ನು ಉಗ್ರವಾದಿಗಳಾಗಿ ಮಾಡುವ ಪ್ರಯತ್ನ ಪಾಕಿಸ್ತಾನದ್ದು, ಯಾವತ್ತು ನಮ್ಮ ದೇಶವನ್ನು ಕಚಡ ಪಾಕಿಸ್ತಾನದ ಜೊತೆ ಹೋಲಿಕೆ ಮಾಡಬೇಡಿ. ನಮ್ಮ ಹೋಲಿಕೆ ಮಾಡಬೇಕಾದರೆ ಅಮೆರಿಕಾ, ಚೈನಾ ಜೊತೆ ಹೋಲಿಕೆ ಮಾಡಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತದ ಒಬ್ಬೊಬ್ಬ ಮುಸಲ್ಮಾನರೇ ಪಾಕಿಸ್ತಾನದ ಪ್ರಜೆಗಳನ್ನು ಹೊಡೆದು ಕೊಲ್ಲುವ ತಾಕತ್ತಿದೆ: ಇಸ್ಮಾಯಿಲ್ ರಿಹನಾ
ಇದೇ ಸಮಯದಲ್ಲಿ ಭಾರತ ದೇಶದಲ್ಲೇ ಇದ್ದುಕೊಂಡು ಪಾಕಿಸ್ತಾನದ ಪರ ಮಾತನಾಡುವರ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿ, ಇಲ್ಲಿ ತಿಂದು, ಇಲ್ಲಿ ಬೆಳೆದು ಪಾಕಿಸ್ತಾನದ ಪರ ಮಾತನಾಡುವವರು ಯಾವುದೇ ಜಾತಿ, ಧರ್ಮದವರೇ ಆಗಲಿ ಅವರಿಗೆ ಪಾಕಿಸ್ತಾನದ ಬಾರ್ಡರ್ ನಲ್ಲಿ ನಿಲ್ಲಿಸಿ ಗುಂಡು ಹೊಡೆಯಬೇಕು. ಅಂತಹವರ ಹೆಣ ಸಹ ಭಾರತದ ಒಳಗೆ ಬೀಳಬಾರದು. ಅದು ಪಾಕಿಸ್ತಾನದ ಒಳಗೆ ಬೀಳಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.
ಮುಸ್ಲಿಂಧರ್ಮ ಗ್ರಂಥದ ಬಗ್ಗೆ ಪ್ರಸ್ತಾಪಿಸಿ, ಮುಸಲ್ಮಾನರ ಧರ್ಮಗ್ರಂಥದಲ್ಲಿ ನೀವು ಯಾವ ದೇಶದಲ್ಲಿ ಇರುತ್ತಿರೋ ಆ ದೇಶಕ್ಕೆ ನಿಷ್ಠರಾಗಿರಿ. ಆ ದೇಶದ ಕಾನೂನು ಪಾಲಿಸಿ ಎಂದು ಹೇಳಿದೆ. ಯಾರಾದರೂ ಮುಸ್ಲಿಂ ಭಾರತದಲ್ಲಿದ್ದು, ಪಾಕಿಸ್ತಾನದ ಬಗ್ಗೆ ಮಾತನಾಡಿದರೆ ಆತ ಮುಸ್ಲಿಂ ಕೂಡ ಅಲ್ಲ ಭಾರತೀಯನೂ ಅಲ್ಲ ಎಂದು ಜಫ್ರುಲ್ಲಾಖಾನ್ ತಿಳಿಸಿದ್ದಾರೆ.
https://www.youtube.com/watch?v=VB5CSOOgFZo
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv