ಹೈದರಾಬಾದ್: ಭಾರತದ ಆತಿಥ್ಯದಲ್ಲಿ ಇದೇ ಅಕ್ಟೋಬರ್ 5 ರಿಂದ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯನ್ನಾಡಲು ಬಾಬರ್ ಆಜಂ (Babar Azam) ಪಾಕಿಸ್ತಾನ ಕ್ರಿಕೆಟ್ ತಂಡ ಹೈದರಾಬಾದ್‌ನಲ್ಲಿ ವಾಸ್ತವ್ಯ ಹೂಡಿದೆ. ಪಾಕಿಸ್ತಾನ ತಂಡದ (Pakistan Team) ಆಟಗಾರರು ಬರುತ್ತಿದ್ದಂತೆ ವಿವಿಧ ರೀತಿಯ ಶಾಲುಗಳನ್ನ ಹೊದಿಸಿ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಗಿದೆ. ಇದರೊಂದಿಗೆ ಊಟೋಪಚಾರ ವಿಷಯಗಳಲ್ಲೂ ಅಷ್ಟೇ ಕಾಳಜಿ ವಹಿಸಲಾಗಿದೆ.
Pakistan Cricket Team have safely reached the team hotel in Hyderabad and straightaway had the famous Hyderabadi Biryani in India. #worldcup2023 #BabarAzam???? #pakistancricket pic.twitter.com/fZAU5uSB06
— King???? Babar Azam Fans club (@BasitBasit24360) September 27, 2023
Advertisement
ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸೇರಿ ಪಾಲ್ಗೊಳ್ಳುವ 10 ತಂಡಗಳಿಗಳಿಗೆ ಗೋಮಾಂಸ ನಿಷೇಧಿಸಲಾಗಿದೆ. ಆದ್ದರಿಂದ ಪಾಕಿಸ್ತಾನ ತಂಡಕ್ಕೆ ದೈನಂದಿನ ಪ್ರೋಟೀನ್‌ಯುಕ್ತ ಆಹಾರಕ್ಕಾಗಿ ಕೋಳಿ (Chicken), ಕುರಿ ಹಾಗೂ ಮೀನು ಆಹಾರ ಪದಾರ್ಥಗಳ ಮೆನು ನೀಡಲಾಗಿದೆ. ಡಯಟ್ ಚಾರ್ಚ್‌ನಲ್ಲಿ ಗ್ರಿಲ್ಡ್ ಲ್ಯಾಂಬ್ ಚಾಪ್ಸ್ (Grilled Lamb Chops), ಮಟನ್ ಕರಿ, ಹೈದರಾಬಾದ್‌ನಲ್ಲಿ ಬಹುಬೇಡಿಕೆಯ ಬಟರ್ ಚಿಕನ್ ಮತ್ತು ಗ್ರಿಲ್ಡ್ ಫಿಶ್ (Grilled Fish) ನೀಡಲಾಗುತ್ತಿದೆ.
Advertisement
Advertisement
ಬಿರಿಯಾನಿಯಂತಹ ಆಹಾರ ಪದಾರ್ಥಗಳನ್ನ ತಯಾರಿಸಲು ಸ್ಟೀಮ್ಡ್ ಬಾಸುಮತಿ ರೈಸ್ ಅನ್ನು ಬಳಸಲಾಗುತ್ತಿದೆ. ಅಷ್ಟೇ ಅಲ್ಲದೇ ಬೊಲೊಗ್ನೀಸ್ ಸಾಸ್‌ನಲ್ಲಿರುವ ಸ್ಪಾಗೆಟ್ಟಿ, ಶೇನ್ ವಾರ್ನ್ ಚಿಕನ್ ಹಾಗೂ ವೆಜ್ ಪಲಾವ್ ಎಲ್ಲದಕ್ಕಿಂತ ಮುಖ್ಯವಾಗಿ ಹೈದರಾಬಾದ್ ಬಿರಿಯಾನಿ ಮೆನುವನ್ನು ಸಿದ್ಧಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
Advertisement
ಶುಕ್ರವಾರ ನ್ಯೂಜಿಲೆಂಡ್ ವಿರುದ್ಧ ಅಭ್ಯಾಸ ಪಂದ್ಯವನ್ನಾಡಲಿರುವ ಪಾಕಿಸ್ತಾನ ತಂಡ ಗುರುವಾರ ಮೈದಾನ ವೀಕ್ಷಣೆ ಮಾಡಿದೆ. ಇದೇ ವೇಳೆ ಪಾಕ್ ತಂಡದ ನಾಯಯ ಬಾಬರ್ ಆಜಂ ಪಿಚ್ ಬಗ್ಗೆ ಮಾಹಿತಿಯನ್ನೂ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಬಂದ ಪಾಕ್ ತಂಡಕ್ಕೆ ಕೇಸರಿ ಶಾಲು ಹಾಕಿ ಸ್ವಾಗತ – ಬಾಬರ್ ಆಜಂ ಬಿಜೆಪಿ ಯುವನಾಯಕ ಎಂದು ಟ್ರೋಲ್
ವಿಶ್ವಕಪ್ ಟೂರ್ನಿಗೂ ಮುನ್ನ ಪಾಕಿಸ್ತಾನವು ಸೆಪ್ಟೆಂಬರ್ 29ರಂದು ನ್ಯೂಜಿಲೆಂಡ್ ವಿರುದ್ಧ ಹೈದರಾಬಾದ್‌ನಲ್ಲಿ ಅಭ್ಯಾಸ ಪಂದ್ಯವನ್ನಾಡಲಿದೆ. ಅಕ್ಟೋಬರ್ 3 ರಂದು ಆಸ್ಟ್ರೇಲಿಯಾ ವಿರುದ್ಧ ಕೊನೆಯದ್ದಾಗಿ ಅಭ್ಯಾಸ ಪಂದ್ಯಗಳನ್ನಾಡಲಿದೆ. ಆ ನಂತರ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿದೆ. ಇದನ್ನೂ ಓದಿ: Asian Games 2023: ಈಕ್ವೆಸ್ಟ್ರೀಯನ್‌ನಲ್ಲಿ ಭಾರತಕ್ಕೆ ಕಂಚು – ಇತಿಹಾಸ ನಿರ್ಮಿಸಿದ ಅನುಷ್
ಅಕ್ಟೋಬರ್ 14 ರಂದು ಹೈವೋಲ್ಟೇಜ್ ಕದನ: ಅ.5ರಿಂದ ನ.19ರ ವರೆಗೆ ಭಾರತದ ವಿವಿಧ ಕ್ರೀಡಾಂಗಣದಲ್ಲಿ ವಿಶ್ವಕಪ್ ಟೂರ್ನಿ ನಡೆಯಲಿದೆ. ಭಾರತ ಮತ್ತು ಪಾಕ್ ನಡುವಿನ ಹೈವೋಲ್ಟೇಜ್ ಕದನ ಅಕ್ಟೋಬರ್ 14ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯ ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ.
Web Stories