ಇಸ್ಲಾಮಾಬಾದ್: ಭಾರತ (India) ತನ್ನ ಮೇಲೆ ದಾಳಿ ಮಾಡಲಿದೆ ಎಂದು ಪಾಕ್ ಮಧ್ಯರಾತ್ರಿ ಸುದ್ದಿಗೋಷ್ಠಿ ನಡೆಸಿ ಘೋಷಣೆ ಮಾಡಿದ ಬೆನ್ನಲ್ಲೇ ಪಾಕಿಸ್ತಾನ ಷೇರು ಮಾರುಕಟ್ಟೆಯಲ್ಲಿ (Pakistan Stock Market) ರಕ್ತಪಾತವಾಗಿದೆ.
ಕರಾಚಿ ಸ್ಟಾಕ್ ಎಕ್ಸ್‌ಚೆಂಜ್ (KSE) ಇಂದು ಒಂದೇ ದಿನ 3,519 ಅಂಶ ಅಥವಾ 3.06% ಪತನಗೊಂಡು 1,11,353 ರಲ್ಲಿ ವ್ಯವಹಾರ ಮುಗಿಸಿದೆ. ಪಹಲ್ಗಾಮ್ ದಾಳಿ ನಡೆದ ದಿನ KSE 1,18,455 ಅಂಶದಲ್ಲಿ ವ್ಯವಹಾರ ನಡೆಸುತ್ತಿತ್ತು. ಇದನ್ನೂ ಓದಿ: ನಿಗದಿಯಾಗಿದ್ದ ಮೋದಿ ರಷ್ಯಾ ಪ್ರವಾಸ ದಿಢೀರ್ ರದ್ದು!
ಪಹಲ್ಗಾಮ್ ದಾಳಿ ನಡೆದ ಒಂದು ವಾರದಲ್ಲಿ ಕೆಎಸ್‌ಇ ಸೂಚ್ಯಂಕ 7,102 ಅಂಕ ಪತನಗೊಂಡಿದೆ. ಇದನ್ನೂ ಓದಿ: ಭಾರತದ ವಿರುದ್ಧ ವಿಷ ಕಾರುತ್ತಿದ್ದ ಅಫ್ರಿದಿ ಬಾಯಿ ಬಂದ್!
On April 30, 2025, Pakistan’s Minister for Information, Attaullah Tarar, claimed at a 2AM press conference that India is preparing for a military strike within 36 hours. He warned of “catastrophic consequences” and accused India of pursuing an “irrational and confrontational”… pic.twitter.com/uhwxOnUFEd
— IndiaToday (@IndiaToday) April 30, 2025
ಮಧ್ಯರಾತ್ರಿ 2:30ಕ್ಕೆ ತರಾತುರಿಯಲ್ಲಿ ಸುದ್ದಿಗೋಷ್ಠಿ ಮಾತನಾಡಿದ್ದ ಪಾಕ್ ಸಚಿವ ಅತಾವುಲ್ಲಾ ತರಾರ್, ಭಾರತವು ಮುಂದಿನ 24 ರಿಂದ 36 ಗಂಟೆಗಳಲ್ಲಿ ಸೇನಾ ಕಾರ್ಯಾಚರಣೆಗೆ ಮುಂದಾಗಲಿದೆ. ಪಹಲ್ಗಾಮ್ ಉಗ್ರರ ದಾಳಿಯಲ್ಲಿ ( Pahalgam Terror Attack) ಪಾಕಿಸ್ತಾನ ಭಾಗಿಯಾಗಿದೆ ಎನ್ನುವುದು ಆಧಾರರಹಿತ, ಕಪೋಲಕಲ್ಪಿತ ಆರೋಪ. ಉಗ್ರ ದಾಳಿಯನ್ನೇ ಮಿಲಿಟರಿ ಕ್ರಮಕ್ಕೆ ನೆಪವಾಗಿ ಬಳಸಲು ಭಾರತ ಉದ್ದೇಶಿಸಿದೆ. ಈ ಬಗ್ಗೆ ನಮಗೆ ಗುಪ್ತಚರ ಮಾಹಿತಿ ಇದೆ. ಭಾರತ ಸೇನಾ ಕಾರ್ಯಾಚರಣೆ ಮಾಡಿದರೆ ಅದರ ಪರಿಣಾಮ ಎದುರಿಸಬೇಕಾದೀತು ಅಂತ ಭಂಡ ಮಾತುಗಳನ್ನಾಡಿದ್ದ. ಇದನ್ನೂ ಓದಿ: ನಿಮ್ಗೆ ಹುಚ್ಚು ಹಿಡಿದಿದ್ಯಾ? – ಪಾಕಿಸ್ತಾನದಲ್ಲಿ ಈಗ ಸೇನೆ Vs ಪೊಲೀಸ್ ಕಿತ್ತಾಟ