ಕೊನೆಗೂ ಅಫ್ರಿದಿ ತನ್ನ ಅಸಲಿ ವಯಸ್ಸನ್ನು ರಿವೀಲ್ ಮಾಡಿದ್ರು

Public TV
1 Min Read
SHAHID AFRIDI

ನವದೆಹಲಿ: ಪಾಕಿಸ್ತಾನ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ತಮ್ಮ ನಿಜವಾದ ಹುಟ್ಟಿದ ವರ್ಷವನ್ನು ರಿವೀಲ್ ಮಾಡಿದ್ದು, ತಮ್ಮ ಆತ್ಮಕಥೆಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.

ಅಫ್ರಿದಿ ಪಾಕಿಸ್ತಾನದ ಪರ ಕ್ರಿಕೆಟ್ ಪಾದಾರ್ಪಣೆ ಮಾಡಿದ ಸಂದರ್ಭದಿಂದಲೂ ಅವರ ವಯಸ್ಸಿನ ಬಗ್ಗೆ ಹಲವು ಮಂದಿ ಅನುಮಾನ ವ್ಯಕ್ತಪಡಿಸಿದ್ದರು. ಅಲ್ಲದೇ ಕ್ರಿಕೆಟ್ ನಿಂದ ಅಫ್ರಿದಿ ನಿವೃತ್ತಿ ಹೊಂದಿದ ಬಳಿಕವೂ ಈ ಸಂದೇಹ ಮುಂದುವರಿದಿತ್ತು. ಪಾಕ್ ಕ್ರಿಕೆಟ್ ತಂಡ ಪರ ಹಲವು ಪಂದ್ಯದಲ್ಲಿ ಗೇಮ್ ಚೇಂಜಿಂಗ್ ಪ್ರದರ್ಶನ ನೀಡಿದ ಅಫ್ರಿದಿ ಹೆಚ್ಚಿನ ಅಭಿಮಾನಿಗಳನ್ನು ಗಳಿಸಿದ್ದರು. ಅವರ ಅಭಿಮಾನಿ ಬಳಗದಲ್ಲೂ ವಯಸ್ಸಿನ ಬಗ್ಗೆ ಸಾಕಷ್ಟು ಚರ್ಚೆ ನಡೆಸಿದಿತ್ತು.

Shahid Afridi

ಇದುವರೆಗೂ ಕ್ರಿಕೆಟ್ ದಾಖಲೆಗಳಲ್ಲಿ ಅಫ್ರಿದಿ 1980ರಲ್ಲಿ ಜನಿಸಿದ್ದರು ಎಂದೇ ದಾಖಲಾಗಿದ್ದು, ಆದರೆ ತಾನು ಜನಿಸಿದ್ದು 1975ರಲ್ಲಿ ಎಂದಿದ್ದಾರೆ. ಅಫ್ರಿದಿ ಶ್ರೀಲಂಕಾ ವಿರುದ್ಧ 1996 ರಲ್ಲಿ ನಡೆದ ಪಂದ್ಯದಲ್ಲಿ ಕೇವಲ 37 ಎಸೆತದಲ್ಲಿ ಶತಕ ಸಿಡಿಸಿ ಸಂಭ್ರಮಿಸಿದ್ದರು. ಅಫ್ರಿದಿ ಅವರ ಆಟೋಬಯೋಗ್ರಾಫಿ ‘ಗೇಮ್ ಚೇಂಜರ್’ ಪುಸ್ತಕದ ಅನ್ವಯ ಈಗ 16ರ ವಯಸ್ಸಿನಲ್ಲಿ ಅಫ್ರಿದಿ ಶತಕ ಸಿಡಿಸಿಲ್ಲ, ಆಗ 21 ವರ್ಷ ವಯಸ್ಸಾಗಿತ್ತು ಎಂಬುವುದು ರುಜುವಾಗಿದೆ. ತನ್ನ ಡೇಟ್ ಆಫ್ ಬರ್ತ್ ದಿನಾಂಕವನ್ನು ನಮೂದಿಸುವ ವೇಳೆ ಅಧಿಕಾರಿಗಳು ತಪ್ಪಾಗಿ ಬರೆದಿದ್ದಾರೆ. ಹೀಗಾಗಿ ವಯಸ್ಸು ಕಡಿಮೆ ಆಗಿದೆ ಎಂದಿದ್ದಾರೆ. 27 ಟೆಸ್ಟ್, 398 ಏಕದಿನ ಹಾಗೂ 99 ಏಕದಿನ ಪಂದ್ಯಗಳನ್ನು ಆಡಿರುವ ಅಫ್ರಿದಿ 2016ರಲ್ಲಿ ನಿವೃತ್ತಿ ಘೋಷಿಸಿದ್ದರು.

ಈ ಹಿಂದೆ ಟೀಂ ಇಂಡಿಯಾ ಮಾಜಿ ಆಟಗಾರರ ರಾಹುಲ್ ದ್ರಾವಿಡ್ ಅವರು ಆಟಗಾರರ ವಯಸ್ಸಿನ ಬಗ್ಗೆ ತಪ್ಪು ಮಾಹಿತಿ ನೀಡುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು. ಎಂಸಿಸಿ ಕ್ರಿಕೆಟ್ ಉಪನ್ಯಾಸದಲ್ಲಿ ಈ ಬಗ್ಗೆ ಮಾತನಾಡಿದ್ದ ರಾಹುಲ್, ಕ್ರಿಕೆಟ್ ನಲ್ಲಿ ವಯಸ್ಸಿನ ಬದಲಾವಣೆ ಅಪರಾಧ ಎಂದು ಅಭಿಪ್ರಾಯ ಪಟ್ಟಿದ್ದರು.

Cricket 1

Share This Article
Leave a Comment

Leave a Reply

Your email address will not be published. Required fields are marked *