ಇಸ್ಲಾಮಾಬಾದ್: ಕಳೆದ ಜುಲೈನಲ್ಲಿ ಕೊಲಂಬೊದಲ್ಲಿ ನಡೆದ ಪುರುಷರ ಎಮರ್ಜಿಂಗ್ ಏಷ್ಯಾಕಪ್-2023 (Emerging Asia Cup 2023) ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ-ಎ ತಂಡದ ವಿರುದ್ಧ ಭಾರತ-ಎ ತಂಡ ಸೋತ ನಂತರ ಪಾಕಿಸ್ತಾನ (Pakistan) ತಂಡದ ವಿರುದ್ಧ ಭಾರೀ ಟೀಕೆಗಳು ವ್ಯಕ್ತವಾಗ್ತಿದೆ.
‘Humne toh nahin kaha tha aap chotay larkay le ke aao’ – Mohammad Haris ♥️
Pakistan Shaheens captain Haris says India A had the opportunity to choose whichever squad they wanted to. He also says India A players had experience of 260 IPL matches ????pic.twitter.com/QWNuLCVGO8
— Farid Khan (@_FaridKhan) August 5, 2023
Advertisement
ಪಾಕಿಸ್ತಾನ (Pakistan A Team) ಅನೇಕ ಹಿರಿಯರನ್ನೊಳಗೊಂಡ ಹಾಗೂ ಅಂತಾರಾಷ್ಟ್ರೀಯ ಅನುಭವ ಪಡೆದ ತಂಡವನ್ನ ಕಣಕ್ಕಿಳಿಸಿತ್ತು. ಈ ಕಾರಣದಿಂದಾಗಿ ಭಾರತ ತಂಡ ಸೋಲುವಂತಾಯಿತು ಎಂಬ ಆರೋಪಗಳು ಕೇಳಿಬಂದಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ಪಾಕ್ ಎ ತಂಡದ ಮಾರ್ಗದರ್ಶಕ ಹಾಗೂ ಕ್ರಿಕೆಟಿಗ ಮೊಹಮ್ಮದ್ ಹ್ಯಾರಿಸ್ (Mohammad Haris), ನಾವೇನು ಚಿಕ್ಕಮಕ್ಕಳನ್ನ ಕಳುಹಿಸಿ ಅಂತಾ ಅವರಿಗೆ ಕೇಳಿರಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಭಾರತದ ವಿರುದ್ಧ ಮೋಸದಾಟವಾಡಿತಾ ಪಾಕ್? ಕಂಡೂ ಕಾಣದಂತಿದ್ರಾ ಅಂಪೈರ್? – ಏಷ್ಯಾಕಪ್ ಸೋಲಿನ ಬಳಿಕ ಮತ್ತೆ ವಿವಾದ!
Advertisement
Advertisement
ಪಾಡ್‌ಕಾಸ್ಟ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಹ್ಯಾರಿಸ್ (Mohammad Haris), ಪಾಕಿಸ್ತಾನ ಅನೇಕ ಹಿರಿಯರನ್ನೊಳಗೊಂಡ ತಂಡವನ್ನ ಕಳುಹಿಸಿತ್ತು ಎನ್ನುವ ಆರೋಪ ತಳ್ಳಿಹಾಕಿದರು. ನಾವೇನು ಚಿಕ್ಕ ಮಕ್ಕಳನ್ನು ಟೂರ್ನಿಗೆ ಕಳುಹಿಸಿ ಅಂತಾ ಕೇಳಿರಲಿಲ್ಲ. ನಮ್ಮ ತಂಡ ಅಂತಾರಾಷ್ಟ್ರೀಯ ಅನುಭವ ಪಡೆದಿದೆ ಅಂತಾ ಎಂದು ಹೇಳ್ತಾರೆ. ನಾನು 6 ಪಂದ್ಯಗಳನ್ನಾಡಿದ್ದೇನೆ. ಸಾಯಿಮ್ 5 ಪಂದ್ಯಗಳನ್ನಾಡಿದ್ದಾರೆ. ತಂಡದಲ್ಲಿದ್ದವರು ಯಾರು ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಅನುಭವ ಪಡೆದಿದ್ದಾರೆ ಹೇಳಲಿ? ಎಂದು ಪ್ರಶ್ನಿಸಿದ್ದಾರೆ. ಸದ್ಯ ಟೀಂ ಇಂಡಿಯಾ-ಎ ತಂಡದ ವಿರುದ್ಧ ಹ್ಯಾರಿಸ್ ಮಾತುಗಳು ಭಾರೀ ಚರ್ಚೆಯನ್ನ ಹುಟ್ಟುಹಾಕಿದೆ.
Advertisement
ಕಳೆದ ತಿಂಗಳು ನಡೆದ ಎಮರ್ಜಿಂಗ್ ಏಷ್ಯಾಕಪ್ ಟೂರ್ನಿಯಲ್ಲಿ ಮೊಹಮ್ಮದ್ ಹ್ಯಾರಿಸ್ ನೇತೃತ್ವದ ಪಾಕಿಸ್ತಾನ ಎ ತಂಡವು ಭಾರತದ ವಿರುದ್ಧ 128 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ 2ನೇ ಬಾರಿಗೆ ಟ್ರೋಫಿ ಗೆದ್ದುಕೊಂಡಿತು. ಪಾಕ್ ತಂಡಕ್ಕೆ ಮೊಹಮ್ಮದ್ ಹ್ಯಾರಿಸ್ ಮಾರ್ಗದರ್ಶಕರಾಗಿದ್ದರು. ಇದನ್ನೂ ಓದಿ: Emerging AsiaCup: ಭಾರತಕ್ಕೆ ಹೀನಾಯ ಸೋಲು, 128 ರನ್ ಜಯದೊಂದಿಗೆ ಚಾಂಪಿಯನ್ ಪಟ್ಟಕ್ಕೇರಿದ ಪಾಕಿಸ್ತಾನ
ಪಂದ್ಯ ಮುಗಿದ ಬಳಿಕ ಪೋಸ್ಟ್ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ್ದ ಹ್ಯಾರಿಸ್, ಭಾರತ ತಂಡ ಐಪಿಎಲ್‌ನಿಂದ ಪ್ರಭಾವಿತರಾದ ಸಾಯಿ ಸುದರ್ಶನ್ (ಗುಜರಾತ್ ಟೈಟಾನ್ಸ್), ರಿಯಾನ್ ಪರಾಗ್ (ರಾಜಸ್ಥಾನ ರಾಯಲ್ಸ್) ಸೇರಿದಂತೆ ಪ್ರಮುಖ ಯುವ ತಾರೆಗಳನ್ನ ಒಳಗೊಂಡಿತ್ತು. ಖಚಿತವಾಗಿಯೂ ಭಾರತ ತಂಡ ಗೆಲ್ಲುತ್ತದೆ ಎಂದು ಭಾವಿಸಿದ್ದೆವು ಎಂಬುದಾಗಿ ಹೇಳಿದ್ದರು.
2013ರ ಚೊಚ್ಚಲ ಆವೃತ್ತಿಯಲ್ಲಿ ಪಾಕಿಸ್ತಾನ ಮಣಿಸಿ ಭಾರತ-ಎ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. 2018ರಲ್ಲಿ ಭಾರತ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಪಾಕ್ 2019ರಲ್ಲಿ ಪಾಕಿಸ್ತಾನ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. 2023ರಲ್ಲಿ ಮತ್ತೊಮ್ಮೆ ಚಾಂಪಿಯನ್ ಆಗಿ ಹೊರಹೊಮ್ಮಿತು.
Web Stories