ದೇಶ ಬಿಟ್ಟು ತೊಲಗುವಂತೆ ಅಫ್ಘಾನ್‌ ನಿರಾಶ್ರಿತರಿಗೆ ಪಾಕ್ ಸರ್ಕಾರ ವಾರ್ನಿಂಗ್

Public TV
1 Min Read
Pakistan

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ (Pakistan) ಆಶ್ರಯ ಪಡೆದಿರುವ 17 ಲಕ್ಷ ಅಫ್ಘಾನ್‌ ನಿರಾತ್ರಿತರಿಗೆ ನವೆಂಬರ್ 1ರೊಳಗೆ ದೇಶ ತೊರೆಯಲು ಪಾಕ್ ಸರ್ಕಾರ ಗಡುವು ನೀಡಿದೆ.

ಅನುಮತಿ ಇಲ್ಲದೇ ಪಾಕಿಸ್ತಾನಕ್ಕೆ ಎಂಟ್ರಿಕೊಟ್ಟಿರುವ ಅಫ್ಘಾನ್‌ (Afghanistan) ಪ್ರಜೆಗಳು ಕೂಡಲೇ ದೇಶ ತೊರೆಯಬೇಕು. ಇಲ್ಲದಿದ್ದರೇ ಹುಡುಕಿ ಹುಡುಕಿ ಹೊಡೆದೋಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ನಿಲ್ಲದ ಸಮರ – ಉಕ್ರೇನ್‌ ದಿನಸಿ ಅಂಗಡಿ ಮೇಲೆ ರಷ್ಯಾ ರಾಕೆಟ್‌ ದಾಳಿಗೆ 49 ಮಂದಿ ಬಲಿ

Taliban Pakistan Why are Afghanistan and Pakistan enemies 7

ಒಂದುವೇಳೆ ಗುರುತಿನ ಚೀಟಿ ತೋರಿಸದಿದ್ರೆ, ಅವ್ರ ರಾಷ್ಟ್ರೀಯತೆಯನ್ನ ಗುರುತಿಸಲು DNA ಟೆಸ್ಟ್ ಕೂಡ ಮಾಡಿಸ್ತೇವೆ. ಸೇನೆಯನ್ನು ಬಳಸಿಕೊಂಡು ದೇಶದಿಂದಲೇ ಹೊರಹಾಕುತ್ತೇವೆ ಎಂದು ವಾರ್ನಿಂಗ್ ಕೊಟ್ಟಿದೆ. 2021ರಲ್ಲಿ ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ (Taliban Government) ಆಡಳಿತಕ್ಕೆ ಬಂದ ಬಳಿಕ ಲಕ್ಷಾಂತರ ಮಂದಿ ನೆರೆಯ ದೇಶಗಳಿಗೆ ತೆರಳಿದರು. ಈ ಸಂರ್ಭದಲ್ಲಿ ಅಫ್ಘಾನಿಸ್ತಾನದ ಲಕ್ಷಾಂತರ ಮಂದಿ ಪಾಕಿಸ್ತಾನದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಜಗತ್ತಿಗೆ ಭಿಕ್ಷುಕರ ರಫ್ತಿನಲ್ಲಿ ಪಾಕಿಸ್ತಾನವೇ ಫಸ್ಟ್ – ಜೇಬುಗಳ್ಳರ ಸಂಖ್ಯೆಯಲ್ಲೂ ಪಾಕಿಸ್ತಾನಿಯರೇ ಹೆಚ್ಚು

ತಾಲಿಬಾನ್ ಪ್ರತಿಕ್ರಿಯೆ ಏನು?
ಪಾಕಿಸ್ತಾನ ಸರ್ಕಾರದ ನಿರ್ಧಾರ ಸ್ವೀಕಾರಾರ್ಹವಲ್ಲ ಎಂದು ಕಾಬೂಲ್‌ನಲ್ಲಿ ತಾಲಿಬಾನ್ ಆಡಳಿತದ ವಕ್ತಾರ ಜಬಿಹುಲ್ಲಾ ಮುಜಾಹಿದ್ ಟ್ವೀಟ್ ಮೂಲಕ ಅಸಮಾಧಾನ ಹೊರಹಾಕಿದ್ದಾರೆ. ಅಫ್ಘಾನ್ ನಿರಾಶ್ರಿತರು ಪಾಕಿಸ್ತಾನದ ಭದ್ರತಾ ಸಮಸ್ಯೆಗಳಲ್ಲಿ ಭಾಗಿಯಾಗಿಲ್ಲ. ಎಲ್ಲಿಯವರೆಗೆ ಅವರು ಸ್ವಯಂಪ್ರೇರಣೆಯಿಂದ ಪಾಕಿಸ್ತಾನವನ್ನು ತೊರೆಯುತ್ತಾರೆಯೋ ಅಲ್ಲಿಯವರೆಗೆ ದೇಶವು ಅವರನ್ನು ಸಹಿಸಿಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.

Web Stories

Share This Article