ಇಸ್ಲಾಮಾಬಾದ್: ಫೇಸ್‍ಬುಕ್‍ನಲ್ಲಿ ಧರ್ಮನಿಂದನೆ ಮಾಡಿದ್ದಕ್ಕೆ ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ಕೋರ್ಟ್ ವ್ಯಕ್ತಿಯೊಬ್ಬನಿಗೆ ಗಲ್ಲು ಶಿಕ್ಷೆ ವಿಧಿಸಿದೆ ಎಂದು ಸರ್ಕಾರಿ ಪ್ರಾಸಿಕ್ಯೂಟರ್‍ವೊಬ್ಬರು ಭಾನುವಾರದಂದು ತಿಳಿಸಿದ್ದಾರೆ.
30 ವರ್ಷದ ತೈಮೂರ್ ರಾಜಾ ಗಲ್ಲು ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿ. ಸಾಮಾಜಿಕ ಜಾಲತಾಣದಲ್ಲಿ ಧರ್ಮನಿಂದನೆ ಮಾಡಿದ ಕಾರಣಕ್ಕೆ ವ್ಯಕ್ತಿಗೆ ಗಲ್ಲು ಶಿಕ್ಷೆ ವಿಧಿಸಲಾಗಿರುವುದು ಪಾಕಿಸ್ತಾನದಲ್ಲಿ ಇದೇ ಮೊದಲು ಎಂದು ವರದಿಯಾಗಿದೆ.
Advertisement
ಪಾಕಿಸ್ತಾನದಲ್ಲಿ ಧರ್ಮನಿಂದನೆ ಅತ್ಯಂತ ಸೂಕ್ಷ್ಮವಾದ ವಿಚಾರಚಾಗಿದ್ದು, ಪ್ರವಾದಿ ಮೊಹಮ್ಮದ್‍ರನ್ನು ನಿಂದಿಸುವುದು ಮಹಾಪರಾಧವೆಂದು ಪರಿಗಣಿಸಲ್ಪಟ್ಟಿದೆ. ತೈಮೂರ್ ರಾಜಾ ಫೇಸ್‍ಬುಕ್‍ನಲ್ಲಿ ಪ್ರವಾದಿ ಮೊಹಮ್ಮದ್, ಅವರ ಪತ್ನಿ ಹಾಗೂ ಹಿಂಬಾಲಕರ ವಿರುದ್ಧ ಅವಮಾನಕರ ಹೇಳಿಕೆ ನೀಡಿದ್ದರಿಂದ ಶಿಕ್ಷೆ ವಿಧಿಸಲಾಗಿದೆ ಎಂದು ಇಲ್ಲಿನ ಬಹಾವಲ್‍ಪುರ್‍ನ ವಕೀಲರಾದ ಶಫೀಕ್ ಖುರೇಷಿ ಹೇಳಿದ್ದಾರೆ.
Advertisement
Advertisement
ಸಾಮಾಜಿಕ ಜಾಲತಾಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ವ್ಯಕ್ತಿಗೆ ಗಲ್ಲು ಶಿಕ್ಷೆ ವಿಧಿಸಿರುವುದು ಇದೇ ಮೊದಲು ಎಂದು ಖುರೇಷಿ ಹೇಳಿದ್ದಾರೆ. ಭಯೋತ್ಪಾದನಾ ವಿರೋಧಿ ಕೋರ್ಟ್‍ನಲ್ಲಿ ಧರ್ಮನಿಂದನೆಗೆ ಸಂಬಂಧಿಸಿದ ಪ್ರಕರಣ ವಿಚಾರಣೆಗೆ ಬರುವುದು ತುಂಬಾ ವಿರಳ. ಆದ್ರೆ ರಾಜಾ ವಿರುದ್ಧದ ಚಾರ್ಜ್ ಶೀಟ್‍ನಲ್ಲಿ ಭಯೋತ್ಪಾದನಾ ಅಪರಾಧ ಹಾಗೂ ದ್ವೇಷದ ಹೇಳಿಕೆಯ ಆರೋಪಗಳು ಇದ್ದಿದ್ದರಿಂದ ಈ ಕೋರ್ಟ್‍ಗೆ ಪ್ರಕರಣ ಬಂತು ಎಂದಿದ್ದಾರೆ.
Advertisement
ಅಪರಾಧಿ ರಾಜಾ ಅಲ್ಪಸಂಖ್ಯಾತ ಶಿಯಾ ಸಮುದಾಯಕ್ಕೆ ಸೇರಿದ್ದು, ಸುನ್ನಿ ಸಮುದಾಯಕ್ಕೆ ಬದ್ಧವಾಗಿರುವ ದಿಯೋಬನಿ ಪಂಥದ ವಿರುದ್ಧ ನಿಂದನಾತ್ಮಕ ಭಾಷಣ ಮಾಡಿದ ಆರೋಪದಡಿ ಈಗ ಶಿಕ್ಷೆಗೆ ಗುರಿಯಾಗಿರುವುದಾಗಿ ವರದಿಯಾಗಿದೆ.
ಭಯೋತ್ಪಾದನಾ ವಿರೋಧಿ ನ್ಯಾಯಾಲಯ ರಾಜಾಗೆ ಶಿಕ್ಷೆ ವಿಧಿಸಿದ್ದು, ಈತ ಹೈಕೋರ್ಟ್ ಅಥವಾ ಬಳಿಕ ಸುಪ್ರೀಂ ಕೋರ್ಟ್ ಮೊರೆಹೋಗಲು ಅವಕಾಶವಿದೆ.