ಇಸ್ಲಾಮಾಬಾದ್: ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡದ ದಂತಕಥೆ ಸನಾ ಮಿರ್ ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದಾರೆ.
ಪಾಕಿಸ್ತಾನದ ಮಾಜಿ ನಾಯಕಿ ಸನಾ ಮಿರ್ ಟಿ20 ವಿಶ್ವಕಪ್ ತಂಡದಿಂದ ಆಶ್ಚರ್ಯಕರವಾಗಿ ಹೊರಗುಳಿದಿದ್ದರು. ಮಿರ್ ಕಳೆದ ವರ್ಷ ಅಂತರರಾಷ್ಟ್ರೀಯ ಕ್ರಿಕೆಟ್‍ನಿಂದ ವಿರಾಮ ತೆಗೆದುಕೊಂಡಿದ್ದರು. ವಿಶ್ವಕಪ್‍ನಿಂದ ಮಿರ್ ದೂರ ಉಳಿದಿದ್ದರಿಂದ ನವೆಂಬರ್ 2019ರ ಬಳಿಕ ಅಂತರರಾಷ್ಟ್ರೀಯ ಕ್ರಿಕೆಟ್ ಆಡಲು ಸಾಧ್ಯವಾಗಲಿಲ್ಲ.
Advertisement
A wonderful ambassador for the sport, Sana Mir has been a role model for young women around the world.
???? WATCH pic.twitter.com/Cmr7Kplbrj
— ICC (@ICC) April 25, 2020
Advertisement
ಅನುಭವಿ ಆಟಗಾರ್ತಿ ವಿಶ್ವಕಪ್ ತಂಡದಲ್ಲಿ ಸ್ಥಾನಪಡೆಯದ ಹಿನ್ನೆಲೆಯಲ್ಲಿ ನಿವೃತ್ತಿಯ ಬಗ್ಗೆ ಮಾತುಗಳು ಕೇಳಿ ಬಂದಿದ್ದವು. ಹೀಗಾಗಿ ಸನಾ ಮಿರ್ ಅವರು ಇಂದು ತಮ್ಮ ಅಂತಿಮ ನಿರ್ಧಾರವನ್ನು ಪ್ರಕಟಿಸಿದ್ದಾರೆ.
Advertisement
”ಕಳೆದ ಕೆಲವು ತಿಂಗಳಿಂದ ನನಗೆ ಆಲೋಚಿಸುವ ಅವಕಾಶ ಸಿಕ್ಕಿತು. ನಾನು ಮುಂದುವರಿಯಲು ಇದು ಸರಿಯಾದ ಸಮಯವಲ್ಲ ಎಂದು ಭಾವಿಸುತ್ತೇನೆ. ನನ್ನ ದೇಶ ಮತ್ತು ಕ್ರೀಡೆಗೆ ಕೊಡುಗೆ ನೀಡಿದ್ದೇನೆ ಎಂದು ನಂಬಿದ್ದೇನೆ. ನನ್ನ ಕ್ರಿಕೆಟ್ ವೃತ್ತಿಜೀವನದಲ್ಲಿ ಕೆಲವು ಅದ್ಭುತ ಕ್ರಿಕೆಟಿಗರನ್ನು ಭೇಟಿಯಾಗಿ ಬಲವಾದ ಸ್ನೇಹವನ್ನು ಬೆಳೆಸಿಕೊಂಡಿದ್ದೇನೆ. ಅವರ ಕಥೆಗಳು ಮತ್ತು ಚಿಂತನೆಗಳ ಬಗ್ಗೆ ಕೇಳುವುದು ನನ್ನನ್ನು ಕಠಿಣ ಮತ್ತು ಬಲಿಷ್ಠ ಕ್ರೀಡಾಪಟುವನ್ನಾಗಿ ಮಾಡಿತು. ಜೀವನ ಹಾಗೂ ಕ್ರೀಡೆಯಯ ಅನೇಕ ವಿಷಯಗಳನ್ನು ಕಲಿಸಿದೆ” ಎಂದು ಸನಾ ಮಿರ್ ಹೇಳಿದ್ದಾರೆ.
Advertisement
JUST IN: Former ???????? captain Sana Mir has announced her retirement from international cricket.
From 2005 to 2019, she featured in 226 internationals for Pakistan, including 137 as captain. pic.twitter.com/cBGDItYKaa
— ICC (@ICC) April 25, 2020
ಏಕದಿನ ಕ್ರಿಕೆಟ್‍ನಲ್ಲಿ ಪಾಕಿಸ್ತಾನದ ಮಹಿಳಾ ತಂಡವನ್ನು ಅತಿ ಹೆಚ್ಚು ಬಾರಿ ಸನಾ ಮಿರ್ ಮುನ್ನಡೆಸಿದ್ದಾರೆ. 2005ರಿಂದ 2019ರವರೆಗೆ 120 ಏಕದಿನ ಮತ್ತು 106 ಟಿ20 ಪಂದ್ಯಗಳನ್ನು ಮಿರ್ ಆಡಿದ್ದಾರೆ. ಕರಾಚಿಯಲ್ಲಿ ಶ್ರೀಲಂಕಾ ವಿರುದ್ಧ 19 ವಯಸ್ಸಿಯಲ್ಲಿ ಏಕದಿನ ಪಂದ್ಯಕ್ಕೆ ಮಿರ್ ಪಾದಾರ್ಪಣೆ ಮಾಡಿದ್ದರು. ನಾಲ್ಕು ವರ್ಷಗಳ ನಂತರ, ಡಬ್ಲಿನ್‍ನಲ್ಲಿ ಐರ್ಲೆಂಡ್ ವಿರುದ್ಧದ ಟಿ20 ಚೊಚ್ಚಲ ಪಂದ್ಯದಲ್ಲಿ ಮಿರ್ ಪಾಕಿಸ್ತಾನವನ್ನು ಮುನ್ನಡೆಸಿದ್ದರು. ಅವರು 2009ರಲ್ಲಿ ನಡೆದ ಮೊದಲ ಟಿ20 ವಿಶ್ವಕಪ್‍ನಲ್ಲಿ ತಂಡದ ನೇತೃತ್ವ ವಹಿಸಿದ್ದರು.