ದುಬೈ: ಟಿ20 ಶ್ರೇಯಾಂಕ ಪಟ್ಟಿಯಲ್ಲಿ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ಸಮಾನ ಅಂಕಗಳನ್ನು ಹೊಂದಿದ್ದರೂ ಆಸ್ಟ್ರೇಲಿಯಾಗೆ ಎರಡನೇ ಸ್ಥಾನ ಸಿಕ್ಕಿದ್ದು ಹೇಗೆ ಎನ್ನುವುದನ್ನು ಐಸಿಸಿ ತಿಳಿಸಿದೆ.
ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವಿನ ಟಿ20 ಸರಣಿಯನ್ನು ಗೆದ್ದುಕೊಂಡರೆ ಟಿ20 ಪಟ್ಟಿಯಲ್ಲಿ ಆಸ್ಟ್ರೇಲಿಯಾ ನಂಬರ್ ಒನ್ ಸ್ಥಾನಕ್ಕೆ ಏರಲಿದೆ ಎಂದು ಐಸಿಸಿ ತಿಳಿಸಿತ್ತು. ಈ ಸರಣಿಯನ್ನು ಗೆದ್ದ ಬಳಿಕ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ 126 ಅಂಕಗಳಿಸಿತ್ತು. ಆದರೆ ಫೆ.21ರಂದು ಅಪ್‍ಡೇಟ್ ಆಗಿದ್ದ ಶ್ರೇಯಾಂಕ ಪಟ್ಟಿಯಲ್ಲಿ ಆಸ್ಟ್ರೇಲಿಯಾ ನಂಬರ್ ಒನ್ ಸ್ಥಾನವನ್ನು ಗಳಿಸದೇ ಪಾಕಿಸ್ತಾನ ನಂಬರ್ ಒನ್ ಸ್ಥಾನದಲ್ಲಿ ಮುಂದುವರಿದಿತ್ತು.
ಸರಣಿ ಗೆದ್ದರೂ ನಂಬರ್ ಒನ್ ಪಟ್ಟ ಸಿಗದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಮಾಧ್ಯಮಗಳು ಐಸಿಸಿ ತಂಡಗಳಿಗೆ ಶ್ರೇಯಾಂಕ ನೀಡಲು ಅನುಸರಿಸುವ ಅಂಕಗಳ ಮಾನದಂಡಗಳನ್ನು ಟೀಕಿಸಿ ಸುದ್ದಿ ಪ್ರಕಟಿಸಿತ್ತು. ಅಷ್ಟೇ ಅಲ್ಲದೇ ಶ್ರೇಯಾಂಕ ಪಟ್ಟಿಯಲ್ಲಿ ತಪ್ಪಾಗಿದೆ ಎಂದು ವರದಿ ಮಾಡಿತ್ತು.
ತಪ್ಪಾಗಿದೆ ಎನ್ನುವ ಸುದ್ದಿ ಪ್ರಕಟವಾಗುತ್ತಲೇ ಈ ಕುರಿತು ಐಸಿಸಿ ವಕ್ತಾರರೊಬ್ಬರು ಖಾಸಗಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ ಆರೋಪವನ್ನು ನಿರಾಕರಿಸಿದ್ದಾರೆ. ಆಸ್ಟ್ರೇಲಿಯಾ ತಂಡ ತ್ರಿಕೋನ ಸರಣಿಯನ್ನು ಗೆದ್ದರೂ 125.65 ಪಾಯಿಂಟ್ ಲಭಿಸಿದೆ. ಆದರೆ ಪಾಕಿಸ್ತಾನಕ್ಕೆ ಈಗಾಗಲೇ 125.84 ಪಾಯಿಂಟ್ ಸಿಕ್ಕಿದ್ದು 0.19 ಹೆಚ್ಚುವರಿ ಪಾಯಿಂಟ್ ಇರುವ ಕಾರಣ ನಂಬರ್ ಸ್ಥಾನದಲ್ಲಿದೆ. ಇದರಲ್ಲಿ ಯಾವುದೇ ಗೊಂದಲ ಬೇಡ ಎಂದು ಅವರು ತಿಳಿಸಿದ್ದಾರೆ.
ಅಂದಹಾಗೇ 2011 ರ ನಂತರ ಆಸ್ಟ್ರೇಲಿಯಾ ತಂಡವು ಒಮ್ಮೆಯೂ ಐಸಿಸಿ ಟಿ20 ಮಾದರಿಯ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದಿಲ್ಲ. ಪ್ರಸ್ತುತ ಟೆಸ್ಟ್ ಮತ್ತು ಏಕದಿನ ಮಾದರಿಯಲ್ಲಿ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನವನ್ನು ಪಡೆದಿದೆ.
ಪಟ್ಟಿಯಲ್ಲಿ ಟೀಂ ಇಂಡಿಯಾ 120 ಅಂಕಗಳೊಂದಿಗೆ ಟಿ 20 ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್ 116 ಅಂಕಗಳೊಂದಿಗೆ ನಾಲ್ಕನೇಯ ಸ್ಥಾನದಲ್ಲಿದೆ.
"Right from the get-go, we played superb cricket" – @davidwarner31 reflects on a successful Tri-Series campaign for Australia.https://t.co/ODeIxL0QFb pic.twitter.com/GW5b9OgAcK
— ICC (@ICC) February 21, 2018