ಇಸ್ಲಾಮಾಬಾದ್: 57 ವರ್ಷದ ಮಹಿಳೆಯಲ್ಲಿ ಕೋವಿಡ್-19 ಸೋಂಕಿನ ಪಾಸಿಟಿವ್ ವರದಿ ಬಂದಿದ್ದು, ಪಾಕಿಸ್ತಾನದಲ್ಲೇ ವರದಿಯಾದ ಮೊದಲ ಓಮಿಕ್ರಾನ್ ರೂಪಾಂತರವೂ ಅವರಲ್ಲಿ ಕಂಡು ಬಂದಿದೆ. ಜೊತೆಯಲ್ಲಿ ಮಹಿಳೆ ಕೋವಿಡ್-19ನ ಯಾವುದೇ ಲಸಿಕೆ ಪಡೆದುಕೊಂಡಿರಲಿಲ್ಲ ಎಂಬ ಮಾಹಿತಿಯೂ ದೊರಕಿದೆ.
ಘಟನೆ ಸೋಮವಾರ ಕರಾಚಿಯಲ್ಲಿ ನಡೆದಿದ್ದು, ಪಾಕಿಸ್ತಾನದ ಟಾಪ್ ಆಂಟಿ-ಕೊರೋನಾ ವೈರಸ್ ಬಾಡಿ ದೃಢಪಡಿಸಿದೆ. ರಾಷ್ಟ್ರೀಯ ಕಮಾಂಡ್ ಹಾಗೂ ಆಪರೇಷನ್ ಸೆಂಟರ್ (ಎನ್‌ಸಿಒಸಿ) ಮಹಿಳೆ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ಶಂಕಿಸಿದ ಕೆಲವು ದಿನಗಳ ಬಳಿಕ ವರದಿಯನ್ನು ನೀಡಿದೆ.
Advertisement
Advertisement
ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್, ಇಸ್ಲಾಮಾ ಬಾದ್ ಈ ಕೇಸ್ ಅನ್ನು ಓಮಿಕ್ರಾನ್ ರೂಪಾಂತರ ಎಂದು ಖಚಿತಪಡಿಸಲು ಸಮರ್ಥವಾಗಿದೆ ಎಂದು ಎನ್‌ಸಿಒಸಿ ಟ್ವೀಟ್ ಮಾಡಿದೆ. ಪಾಕಿಸ್ತಾನದಲ್ಲಿ ಆಂಟಿ-ಕೊರೋನಾ ವೈರಸ್ ಬಾಡಿ ಕೊರೋನಾ ವೈರಸ್‌ನ ಹೊಸ ರೂಪಾಂತರದ ಗಂಭೀರ ಪರಿಣಾಮಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಲಸಿಕೆಯನ್ನು ಪಡೆಯುವಂತೆ ಜನರನ್ನು ಒತ್ತಾಯಿಸಿದೆ. ಇದನ್ನೂ ಓದಿ: ವಿಶ್ವದಲ್ಲಿ ಓಮ್ರಿಕಾನ್ ರಣಕೇಕೆ – ಬ್ರಿಟನ್‍ನಲ್ಲಿ ಓಮಿಕ್ರಾನ್‍ಗೆ ಮೊದಲ ಬಲಿ
Advertisement
Advertisement
ಕಳೆದ ವಾರ ಮಹಿಳೆಯನ್ನು ಅಗಾ ಖಾನ್ ಯೂನಿವರ್ಸಿಟಿ ಆಸ್ಪತ್ರೆ(ಎಕೆಯುಹೆಚ್)ಯಲ್ಲಿ ಕೊರೋನಾ ಶಂಕೆಯಿಂದ ದಾಖಲು ಮಾಡಲಾಗಿತ್ತು. ನಂತರ ಜೀನ್ ಸೀಕ್ವೆನ್ಸ್ ಮೂಲಕ ಹೊಸ ರೂಪಾಂತರವನ್ನು ಪತ್ತೆ ಹಚ್ಚಲಾಗಿದೆ. ಇದನ್ನೂ ಓದಿ: ರಾಷ್ಟ್ರಕವಿ ಕುವೆಂಪುರವರ ಸೊಸೆ ರಾಜೇಶ್ವರಿ ತೇಜಸ್ವಿ ಇನ್ನಿಲ್ಲ
ರೋಗಿ ಸದ್ಯ ಆರೋಗ್ಯವಾಗಿದ್ದು, ಬಳಿಕ ಯಾವುದೇ ಇತರ ಓಮಿಕ್ರಾನ್ ಕೇಸ್‌ಗಳು ದೃಢಪಟ್ಟಿಲ್ಲ ಎಂದು ಮಾಹಿತಿ ದೊರಕಿದೆ.