ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ (Nawaz Sharif) ಅವರು ಲಾಹೋರ್ ಕ್ಷೇತ್ರದಲ್ಲಿ ಯಾಸ್ಮಿನ್ ರಶೀದ್ ವಿರುದ್ಧ 55,000 ಮತಗಳಿಂದ ಗೆದ್ದಿದ್ದಾರೆ.
ಹಿಂಸಾಚಾರದ ನಡುವೆಯೂ ಪಾಕಿಸ್ತಾನದಲ್ಲಿ (Pakistan) ಮತದಾನ ನಡೆದಿದೆ. ಈ ಮೂಲಕ ಪಾಕಿಸ್ತಾನ ಗುರುವಾರ ತನ್ನ ಹೊಸ ಸರ್ಕಾರವನ್ನು ಆಯ್ಕೆ ಮಾಡಲು ಮತ ಚಲಾಯಿಸಿದೆ. ಸದ್ಯ ಮತ ಎಣಿಕೆ ನಡೆಯುತ್ತಿದ್ದು, ಇಲ್ಲಿಯವರೆಗೆ 265 ಸ್ಪರ್ಧಿಗಳ ಪೈಕಿ 13 ಸ್ಥಾನಗಳ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ.
Advertisement
Advertisement
ಸ್ವತಂತ್ರವಾಗಿ ಸ್ಪರ್ಧಿಸಿದ್ದ ಇಮ್ರಾನ್ ಖಾನ್ (Imran Khan) ಬೆಂಬಲಿತ ಅಭ್ಯರ್ಥಿಗಳು ಐದು ಸ್ಥಾನಗಳನ್ನು ಪಡೆದುಕೊಂಡಿದ್ದರೆ, ನಾಲ್ಕು ಸ್ಥಾನಗಳನ್ನು ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪಕ್ಷವಾದ ಪಾಕಿಸ್ತಾನ್ ಮುಸ್ಲಿಂ ಲೀಗ್ (Pakistan Muslim League) ಗೆದ್ದಿದೆ. ಇದನ್ನೂ ಓದಿ: ಸುಳ್ಳು ಮಾಹಿತಿ ಹರಡಿ ದೊಡ್ಡ ತಪ್ಪು ಮಾಡಿದೆ- ಕ್ಷಮೆಯಾಚಿಸಿದ ಎಬಿಡಿ
Advertisement
Advertisement
ಹತ್ಯೆಗೀಡಾದ ಪ್ರಧಾನಿ ಬೆನಜೀರ್ ಭುಟ್ಟೊ (Benazir Bhutto) ಅವರ ಪುತ್ರ, ಜರ್ದಾರಿಯ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಬಿಲಾವಲ್ ಭುಟ್ಟೋ ಮೂರು ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಇತ್ತ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಪುತ್ರ ತಲ್ಹಾ ಹಫೀಜ್ ಸಯೀದ್ ಲಾಹೋರ್ ಕ್ಷೇತ್ರದಿಂದ ಸೋತಿದ್ದಾರೆ.
12 ಕೋಟಿಗೂ ಹೆಚ್ಚು ಮತದಾರರು ಮತ ಚಲಾಯಿಸಲು ಅನುಕೂಲವಾಗುವಂತೆ ದೇಶಾದ್ಯಂತ ನಿನ್ನೆ ರಜೆ ಘೋಷಿಸಲಾಗಿತ್ತು. ಮತದಾನದ ನಂತರ ಮತಗಳ ಎಣಿಕೆ ಪ್ರಾರಂಭವಾಯಿತು.