InternationalLatestMain Post

ಪಾಕ್ ಪೊಲೀಸರಿಂದ 9 ಟೆರರಿಸ್ಟ್ ಬಂಧನ

ಇಸ್ಲಾಮಾಬಾದ್: ಪಾಕಿಸ್ತಾನದ ಪೊಲೀಸರು ಪಂಜಾಬ್ ಪ್ರಾಂತ್ಯದಲ್ಲಿ 9 ಭಯೋತ್ಪಾದಕರನ್ನು ಬಂಧಿಸಿದ್ದಾರೆ. ಅವರಲ್ಲಿ ನಾಲ್ವರು ಐಸಿಸ್ ಭಯೋತ್ಪಾದಕ ಗುಂಪಿಗೆ ಸೇರಿದವರು ಎಂದು ಪಾಕ್ ಪೊಲೀಸರು ಶನಿವಾರ ತಿಳಿಸಿದ್ದಾರೆ.

ಪಾಕಿಸ್ತಾನದ ಪಂಜಾಬ್ ಪೊಲೀಸ್‌ನ ಭಯೋತ್ಪಾದನಾ ನಿಗ್ರಹ ಇಲಾಖೆ(ಸಿಟಿಡಿ) ಸುಳಿವಿನ ಮೇರೆಗೆ ದಾಳಿ ನಡೆಸಿ, 9 ಭಯೋತ್ಪಾದಕರನ್ನು ಬಂಧಿಸಿದೆ. ಅದರಲ್ಲಿ ನಾಲ್ವರು ಐಸಿಸ್‌ಗೆ ಸೇರಿದವರಾಗಿದ್ದು, ಇತರರು ನಿಷೇಧಿತ ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನದ(ಟಿಟಿಪಿ) ವಿವಿಧ ಬಣಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಒಬ್ಬ ಲಷ್ಕರ್-ಎ-ಜಾಂಗ್ವಿ(ಎಲ್‌ಇಜೆ) ಸಂಘಟನೆಯ ಸದಸ್ಯ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಕೋರ್ಟ್ ಬಳಿ ಉದಯಪುರ ಟೈಲರ್ ಹಂತಕರ ಬಟ್ಟೆ ಹರಿದು ಥಳಿಸಿದ ಪ್ರತಿಭಟನಾಕಾರರು

ಬಂಧನವಾಗಿರುವ ಎಲ್ಲಾ ಭಯೋತ್ಪಾದಕರನ್ನೂ ಹೆಚ್ಚಿನ ತನಿಖೆಗಾಗಿ ಅಜ್ಞಾತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಅವರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ಗರ್ಭಪಾತ ಹಕ್ಕು ನಿಷೇಧ: ಆಸ್ಟ್ರೇಲಿಯಾದಲ್ಲಿ ಹೋರಾಟದ ಕಿಚ್ಚು

ಕಳೆದ ವಾರ ಪಂಜಾಬ್ ಪ್ರಾಂತ್ಯದಲ್ಲಿ ಟಿಟಿಪಿಗೆ ಸೇರಿದ 11 ಭಯೋತ್ಪಾದಕರನ್ನು ಸಿಟಿಡಿ ಬಂಧಿಸಿದೆ. ಸದ್ಯ ಬಂಧಿತ ಭಯೋತ್ಪಾದಕರ ವಿರುದ್ಧ ಭಯೋತ್ಪಾದನಾ ನಿಗ್ರಹ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

 

Live Tv

Leave a Reply

Your email address will not be published. Required fields are marked *

Back to top button