ಇಸ್ಲಾಮಾಬಾದ್: 16 ಬಿಲಿಯನ್ ಮನಿ ಲಾಂಡರಿಂಗ್ ಪ್ರಕರಣದ ದೋಷಾರೋಪಣೆಗಾಗಿ ಪಾಕಿಸ್ತಾನದ ವಿಶೇಷ ನ್ಯಾಯಾಲಯವು ಶನಿವಾರ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಅವರ ಪುತ್ರ ಹಮ್ಜಾ ಶೆಹಬಾಜ್‍ಗೆ ಸಮನ್ಸ್ ಜಾರಿ ಮಾಡಿದೆ.
2020ರ ನವೆಂಬರ್‌ನಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಅಕ್ರಮ ಹಣ ವರ್ಗಾವಣೆ ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಶೆಹಬಾಜ್(70) ಅವರ ಮಕ್ಕಳಾದ ಹಮ್ಜಾ(47) ಮತ್ತು ಸುಲೇಮಾನ್(40) ವಿರುದ್ಧ ಪ್ರಕರಣ ದಾಖಲಾಗಿತ್ತು. ಲಾಹೋರ್‌ನ ವಿಶೇಷ ನ್ಯಾಯಾಲಯವು ಈ ಹಿಂದೆ ಶೆಹಬಾಜ್‍ಗೆ ಬಂಧನ ಪೂರ್ವ ಜಾಮೀನು ನೀಡಿತ್ತು. ಈ ಹಿನ್ನೆಲೆ ಶನಿವಾರ ನ್ಯಾಯಾಲಯವು ಶೆಹಬಾಜ್ ಷರೀಫ್ ಮತ್ತು ಅವರ ಪುತ್ರ ಹಮ್ಜಾ ಶೆಹಬಾಜ್ ಅವರಿಗೆ ಸೆಪ್ಟೆಂಬರ್ 7 ರಂದು ಸಮನ್ಸ್ ನೀಡಿದೆ. ಇದನ್ನೂ ಓದಿ: ಶಿಕ್ಷಕಿ ವೃತ್ತಿಯಿಂದ ನಿವೃತ್ತಿಗೊಂಡ ತಾಯಿಯನ್ನು ಹೆಲಿಕಾಪ್ಟರ್‌ನಲ್ಲಿ ಮನೆಗೆ ಕರೆತಂದ ಮಗ!
Advertisement
Advertisement
ಶೆಹಬಾಜ್ ಮತ್ತು ಹಮ್ಜಾ ಇಬ್ಬರೂ ವಿಚಾರಣೆಯ ಸಮಯದಲ್ಲಿ ಗೈರುಹಾಜರಾಗಿದ್ದರು. ಅದಕ್ಕೆ ಶೆಹಬಾಜ್ ಅವರ ವಕೀಲ ಅಮ್ಜದ್ ಪರ್ವೈಜ್ ಅವರು ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ಅವರು ಆರೋಗ್ಯವಾಗಿಲ್ಲದ ಕಾರಣ ವೈದ್ಯರು ಅವರಿಗೆ ಪ್ರಯಾಣಿಸದಂತೆ ಸಲಹೆ ನೀಡಲಾಗಿದೆ ಎಂದು ಹೇಳಿದರು. ಹಮ್ಜಾ ಅವರ ವಕೀಲ ರಾವ್ ಔರಂಗಜೇಬ್ ಅವರು, ತಮ್ಮ ಕಕ್ಷಿದಾರರಿಗೆ ತೀವ್ರವಾದ ಬೆನ್ನುನೋವು ಮತ್ತು ವಿಶ್ರಾಂತಿಯ ಅಗತ್ಯವಿದೆ ಎಂದು ತಿಳಿಸಿದರು. ಈ ಹಿನ್ನೆಲೆ ಸೆಪ್ಟೆಂಬರ್‌ವರೆಗೂ ವಿಚಾರಣೆಯನ್ನು ವಿಸ್ತರಿಸಲಾಗಿದೆ.
Advertisement
Advertisement
ಈ ವೇಳೆ ಶೆಹಬಾಜ್ ಅವರ ಎರಡನೇ ಪುತ್ರ ಸುಲೇಮಾನ್ ಶೆಹಬಾಜ್ ಅವರ 19 ಬ್ಯಾಂಕ್ ಖಾತೆಗಳ ದಾಖಲೆಯನ್ನು ನಾವು ಪಡೆದುಕೊಂಡಿದ್ದೇವೆ. ಇನ್ನೂ ಏಳು ದಾಖಲೆಗಳನ್ನು ಪಡೆಯಬೇಕಾಗಿದೆ ಎಂದು ಪ್ರಾಸಿಕ್ಯೂಟರ್ ನ್ಯಾಯಾಲಯಕ್ಕೆ ತಿಳಿಸಿದರು. ಇದನ್ನೂ ಓದಿ: ನಾನು ಸಂದರ್ಶನ ಕೊಡಲು ಶುರು ಮಾಡಿದ್ರೆ ಭೂಕಂಪವಾಗುತ್ತೆ: ಉದ್ಧವ್‍ಗೆ ಶಿಂಧೆ ಟಾಂಗ್