ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್‍ಗೆ ಈಗ ಕಷ್ಟ ಕಾಲ. ಇಮ್ರಾನ್ ಅಧಿಕಾರಕ್ಕೆ ಕತ್ತರಿ ಬಿದ್ದ ಕೂಡಲೇ ಅವರ ಆಪ್ತರು, ಅನುಯಾಯಿಗಳಲ್ಲಿ ಬಂಧನ ಭೀತಿ ಶುರುವಾಗಿದೆ.
ಒಬ್ಬೊಬ್ಬರೇ ಸದ್ದಿಲ್ಲದೇ ಪಾಕಿಸ್ತಾನ ತೊರೆಯುತ್ತಿದ್ದಾರೆ. ಭಾನುವಾರವೇ ಇಮ್ರಾನ್ ಮೂರನೇ ಪತ್ನಿ ಬುಷ್ರಾ ಬೀಬಿಯ ಪರಮಾಪ್ತೆ ಫರ್ಹಾಖಾನ್ ಖಾಸಗಿ ಜೆಟ್‍ನಲ್ಲಿ ದುಬೈಗೆ ಎಸ್ಕೇಪ್ ಆಗಿದ್ದಾರೆ. ಈ ವೇಳೆ ಆಕೆ ಹೊಂದಿದ್ದ ವ್ಯಾನಿಟಿ ಬ್ಯಾಗ್ ಬೆಲೆ 90ಸಾವಿರ ಡಾಲರ್. ಇದನ್ನು ನೋಡಿದ್ರೇ ಗೊತ್ತಾಗುತ್ತೆ ಆಕೆ ಎಷ್ಟರ ಮಟ್ಟಿಗೆ ಭ್ರಷ್ಟಾಚಾರ ಎಸಗಿದ್ದಾರೆಂದು ವಿಪಕ್ಷ ಹರಿಹಾಯ್ದಿದೆ.
ಅಧಿಕಾರಿಗಳ ವರ್ಗಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಈಕೆ ದೊಡ್ಡಮಟ್ಟದಲ್ಲಿ ಭ್ರಷ್ಟಾಚಾರ ಎಸಗಿದ್ದಾರೆ. 32 ಮಿಲಿಯನ್ ಡಾಲರ್ ಹಣವನ್ನು ಲೂಟಿ ಮಾಡಿದ್ದಾರೆ ಎನ್ನಲಾಗಿದೆ. ವಿಪಕ್ಷಗಳು ಈಕೆಯನ್ನು ಮದರ್ ಆಫ್ ಆಲ್ ಸ್ಕ್ಯಾಂಡಲ್ಸ್ ಎಂದು ಆಕ್ರೋಶ ಹೊರಹಾಕುತ್ತಿವೆ. ಇದನ್ನೂ ಓದಿ: ಬುಚಾ ನರಮೇಧವನ್ನು ತೀವ್ರವಾಗಿ ಖಂಡಿಸಿದ ಭಾರತ
ಸತತ ಮೂರನೇ ದಿನವೂ ಪಾಕ್ ಸುಪ್ರೀಂಕೋರ್ಟ್‍ನಲ್ಲಿ ವಿಚಾರಣೆ ನಡೆದಿದೆ. ಇಮ್ರಾನ್ ಮಾಡಿದ ವಿದೇಶಿ ಪಿತೂರಿ ಆರೋಪದ ಬಗ್ಗೆ ಪ್ರಸ್ತಾಪಿಸಿದ ಮುಖ್ಯ ನ್ಯಾಯಮೂರ್ತಿಗಳು, ರಾಷ್ಟ್ರೀಯ ಭದ್ರತಾ ಸಮಿತಿ ಸಭೆಯ ಮಾಹಿತಿ ಪ್ರತಿ ಎಲ್ಲಿದೆ. ಕೂಡಲೇ ಒದಗಿಸಿ ಎಂದು ನಿರ್ದೇಶನ ನೀಡಿದ್ದಾರೆ. ಇದನ್ನೂ ಓದಿ: 9 ಮಂದಿ ಮದುವೆಯಾದ ಮಾಡೆಲ್, ಒಬ್ಬಳಿಗೆ ಡಿವೋರ್ಸ್, ಮತ್ತಿಬ್ಬರನ್ನು ಮದುವೆಯಾಗುವ ಬಯಕೆ
ಇಂದು ಅಧ್ಯಕ್ಷರ ಪರವಾಗಿ ವಾದ ಮಂಡಿಸಿದ ವಕೀಲರು, ಪಾಕ್ ಸಂವಿಧಾನದ ಪ್ರಕಾರ, ಸ್ಪೀಕರ್ ರೂಲಿಂಗ್‍ನ್ನು ಪರಿಶೀಲಿಸುವ ಅಧಿಕಾರ ಸುಪ್ರೀಂಕೋರ್ಟ್‍ಗೆ ಇಲ್ಲ ಎಂದಿದ್ದಾರೆ. ಆದರೂ ಸಂಸತ್ ವಿಸರ್ಜಿಸುವ ಡೆಪ್ಯೂಟಿ ಸ್ಪೀಕರ್ ನಿರ್ಣಯದ ಬಗ್ಗೆ ತನಿಖೆ ನಡೆಸಲು ಐವರು ನ್ಯಾಯಮೂರ್ತಿಗಳ ಸಮಿತಿಯನ್ನು ಸಿಜೆ ರಚಿಸಿದ್ದಾರೆ. ಇನ್ನು, ಚುನಾವಣಾ ದಿನಾಂಕ ನಿಗದಿ ಮಾಡುವಂತೆ ಚುನಾವಣಾ ಆಯೋಗಕ್ಕೆ ಪಾಕ್ ಅಧ್ಯಕ್ಷ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಪಾಕ್ ಪ್ರಧಾನಿ ಇಮ್ರಾನ್ ಖಾನ್ 3ನೇ ಪತ್ನಿಯ ಕ್ಲೋಸ್ ಫ್ರೆಂಡ್ ಪಲಾಯನ!