ಭಾರತದ ವಿದೇಶಾಂಗ ನೀತಿಯನ್ನು ಹೊಗಳಿದ ಪಾಕ್ ಪ್ರಧಾನಿ

Public TV
1 Min Read
IMRANKHAN

ಇಸ್ಲಾಮಾಬಾದ್: ಭಾರತ-ಪಾಕಿಸ್ತಾನ ವಿಭಜನೆಯಾದಾಗಿನಿಂದಲೂ ಒಂದಲ್ಲಾ ಒಂದು ವಿಷಯಕ್ಕೆ ಎರಡೂ ದೇಶಗಳು ಕಿತ್ತಾಡಿಕೊಂಡಿರುವ ಸುದ್ದಿಗಳೇ ಹೆಚ್ಚು. ಹಿಂದೂ ಮುಸ್ಲಿಂ ವಿವಾದವೂ ಇದಕ್ಕೆ ಹೊರತಲ್ಲ. ಇದೀಗ ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್, ಭಾರತದ ವಿದೇಶಾಂಗ ನೀತಿಯನ್ನು ಹೊಗಳಿ ಭಾರೀ ಸುದ್ದಿಯಾಗಿದ್ದಾರೆ.

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಭಾರತದ ವಿದೇಶಾಂಗ ನೀತಿಯನ್ನು ಶ್ಲಾಘಿಸಿದ್ದಾರೆ. ಭಾರತೀಯ ವಿದೇಶಾಂಗ ನೀತಿ ತನ್ನ ದೇಶದ ಪ್ರಜೆಗಳ ಒಳಿತನ್ನೇ ಮಾಡುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಇಮ್ರಾನ್‍ಖಾನ್ ಕುರ್ಚಿಗೆ ಇಕ್ಕಟ್ಟು: ಮಾರ್ಚ್ 28ಕ್ಕೆ ಭವಿಷ್ಯ ನಿರ್ಧಾರ

imran khan web

ಇಂದು ನಾನು ಭಾರತವನ್ನು ಗೌರವಿಸುತ್ತಿದ್ದೇನೆ. ಭಾರತ ಇಂದಿಗೂ ಸ್ವತಂತ್ರ ವಿದೇಶಾಂಗ ನೀತಿಯನ್ನು ಉಳಿಸಿಕೊಂಡಿದೆ. ಕ್ವಾಡ್ ಮೈತ್ರಿಕೂಟದ ಸದಸ್ಯ ರಾಷ್ಟ್ರ ಹಾಗೂ ಅಮೆರಿಕ ಅದರ ಸದಸ್ಯ ರಾಷ್ಟ್ರವಾಗಿಯೂ ಭಾರತ ನಿರ್ಬಂಧಗಳನ್ನು ಎದುರಿಸುತ್ತಿರುವ ರಷ್ಯಾದಿಂದ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಏಕೆಂದರೆ ಭಾರತದ ವಿದೇಶಾಂಗ ನೀತಿ ತನ್ನ ಪ್ರಜೆಗಳ ಪರವಾಗಿದೆ ಎಂದು ಹೊಗಳಿದ್ದಾರೆ.

ಇತ್ತೀಚೆಗೆ ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ತಲೆದೋರಿದ್ದು, ಪ್ರತಿಪಕ್ಷಗಳು ಇಮ್ರಾನ್ ಖಾನ್‌ರನ್ನು ತಮ್ಮ ಸ್ಥಾನದಿಂದ ಕೆಳಗಿಳಿಸಲು ಪ್ರಯತ್ನ ಪಡುತ್ತಿವೆ. ಇಮ್ರಾನ್ ಖಾನ್ ವಿರುದ್ಧ ಇದೀಗ ಅವಿಶ್ವಾಸ ನಿಲುವಳಿ ಮಂಡನೆಗೆ ನೋಟಿಸ್ ನೀಡಲಾಗಿದ್ದು, ಇದರ ಬಗ್ಗೆ ಮತ ನಡೆಸಲು ಮಾರ್ಚ್ 28ರಂದು ದಿನಾಂಕ ನಿಗದಿ ಮಾಡಲಾಗಿದೆ. ಇದನ್ನೂ ಓದಿ: ರಷ್ಯಾದೊಂದಿಗೆ ಸಂಬಂಧ – 11 ರಾಜಕೀಯ ಪಕ್ಷಗಳನ್ನು ಅಮಾನತುಗೊಳಿಸಿದ ಉಕ್ರೇನ್

ಇಮ್ರಾನ್ ಖಾನ್ ಅವರು ಪ್ರಧಾನಿ ಸ್ಥಾನವನ್ನು ಕಳೆದುಕೊಳ್ಳುವ ಸಾಧ್ಯತೆಯೇ ಹೆಚ್ಚು ಎಂದು ಮಿತ್ರಪಕ್ಷಗಳು ಹೇಳುತ್ತಿವೆ. ತಮ್ಮ ಸ್ಥಾನಕ್ಕೆ ಕುತ್ತು ಬಂದಿರುವ ಸಂದರ್ಭದಲ್ಲಿ ಪಾಕ್ ಪ್ರಧಾನಿ ಭಾರತವನ್ನು ಹೊಗಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *