ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಚುನಾವಣಾ ಆಯೋಗದಿಂದ(ಇಸಿಪಿ) 23 ಬ್ಯಾಂಕ್ ಖಾತೆಗಳು ಹಾಗೂ ಲಕ್ಷಾಂತರ ಡಾಲರ್ ಹಣವನ್ನು ಮರೆಮಾಚಿದ್ದಾರೆ ಎಂದು ಮಾಜಿ ಸಚಿವ ಅಹ್ಸಾನ್ ಇಕ್ಬಾಲ್ ಆರೋಪಿಸಿದ್ದಾರೆ.
ಇಮ್ರಾನ್ ಖಾನ್ ಯಾವುದೇ ಹಣವನ್ನು ಮುಚ್ಚಿಡದೆ ಎಲ್ಲ ವಿವರಗಳನ್ನು ಪ್ರಸ್ತುತ ಪಡಿಸಬೇಕು. ಇಸಿಪಿಯಿಂದ 23 ಬ್ಯಾಂಕ್ ಖಾತೆಗಳನ್ನು ಏಕೆ ಮುಚ್ಚಿಟ್ಟಿದ್ದಾರೆ ಎಂಬುದನ್ನು ರಾಷ್ಟ್ರ ತಿಳಿದುಕೊಳ್ಳಲು ಬಯಸುತ್ತದೆ. ಲಕ್ಷಾಂತರ ಡಾಲರ್‍ಗಳನ್ನು ಇಮ್ರಾನ್ ಖಾನ್ ಮುಚ್ಚಿಟ್ಟರಬೇಕು ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಇತರರನ್ನು ಕಳ್ಳರು, ವಂಚಕರು ಎಂದು ಕರೆಯುವ ಇಮ್ರಾನ್ ಖಾನ್ ಸ್ವತಃ ಭ್ರಷ್ಟ ವ್ಯಕ್ತಿಯಾಗಿದ್ದಾನೆ ಎಂದು ಅಹ್ಸಾನ್ ಆರೋಪಿಸಿದ್ದಾರೆ.
Advertisement
Advertisement
ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್(ಸಿಪಿಇಸಿ) ವಿವಾದದ ಕುರಿತು ಮಾತನಾಡಿದ ಅವರು, ಚೀನಾದಿಂದ 18 ಬಿಲಿಯನ್ ಡಾಲರ್(129.16 ಸಾವಿರ ಕೋಟಿ ರೂ.) ಸಾಲ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಆದರೆ ಪಾಕಿಸ್ತಾನ ಚೀನಾದಿಂದ ಚೀನಾದಿಂದ ಸಾಲ ಪಡೆದ ಒಟ್ಟು ಮೊತ್ತ ಕೇವಲ(41.61 ಸಾವಿರ ಕೋಟಿ ರೂ.) ಆಗಿದೆ. ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಸರ್ಕಾರ ಇದ್ದಾಗ ಈ ಸಿಪಿಇಸಿ ಪ್ರಾರಂಭವಾಗಿದೆ ಎಂದು ವಿವರಿಸಿದರು.