ಇಸ್ಲಮಾಬಾದ್: ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ಎರಡು ದಿನಗಳ ಹಿಂದೆ ಪೆಟ್ರೋಲ್ ಮತ್ತು ಡೀಸೆಲ್ ಗಿಂತ ಹಾಲಿನ ಬೆಲೆ ಹೆಚ್ಚಾಗಿತ್ತು. ಪಾಕಿಸ್ತಾನದ ಸಿಂಧ್ ಮತ್ತು ಕರಾಚಿ ಭಾಗಗಳಲ್ಲಿ ಲೀಟರ್ ಹಾಲಿಗೆ 120 ರಿಂದ 140 ರೂ.ಗೆ ಮಾರಾಟವಾಗಿದೆ.
ಪಾಕಿಸ್ತಾನದ ಕರಾಚಿ ಮತ್ತು ಸಿಂಧ್ ಭಾಗಗಳಲ್ಲಿ ಪೆಟ್ರೋಲ್ 113 ರೂ. ಪ್ರತಿ ಲೀಟರ್ ಮತ್ತು ಡೀಸೆಲ್ 91 ರೂ. ಪ್ರತಿ ಲೀಟರ್ ಗೆ ಮಾರಟಗೊಂಡಿದೆ. ಇವರೆಡರ ಬೆಲೆಗಿಂತ ಹಾಲಿನ ಬೆಲೆ ಎರಡು ದಿನಗಳಲ್ಲಿ 15 ರಿಂದ 30 ರೂ.ವರೆಗೆ ಹೆಚ್ಚಳವಾಗಿತ್ತು. ಕೆಲವು ಪ್ರದೇಶಗಳಲ್ಲಿ ಲೀಟರ್ ಗೆ 140 ರೂ. ಮಾರಾಟವಾಗಿದೆ ಎಂದು ವರದಿಯಾಗಿದೆ.
Advertisement
Advertisement
ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಳವಾಗಿತ್ತು. ಬೇಡಿಕೆ ಅನುಗುಣವಾಗಿ ಹಾಲಿನ ಪೂರೈಕೆ ಆಗಲಿಲ್ಲ. ಹಾಗಾಗಿ ಸಹಜವಾಗಿಯೇ ಹಾಲಿನ ಬೆಲೆಯಲ್ಲಿ ಏರಿಕೆ ಆಯ್ತು. ಕರಾಚಿ ನಗರದ ಹಲವು ಪ್ರದೇಶಗಳಲ್ಲಿ 120 ರಿಂದ 140 ರೂ.ವರೆಗೆ ಮಾರಾಟ ಮಾಡಿದ್ದೇವೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.
Advertisement
ಬೇಡಿಕೆ ಹೆಚ್ಚಾಗಿದ್ದೇಕೆ?
ಮಂಗಳವಾರ ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಹಾಲಿನ ಬೆಲೆ ಏರಿಕೆ ಆಗಿತ್ತು. ಮೊಹರಂ ಹಬ್ಬರ ಪ್ರಯುಕ್ತ ನಗರಗಳಲ್ಲಿ ವಿಶೇಷ ಮೆರವಣಿಗೆಯನ್ನು ಆಯೋಜಿಸಲಾಗುತ್ತದೆ. ಮೆರವಣಿಗೆಯಲ್ಲಿ ಭಾಗಿಯಾಗುವ ಜನರಿಗಾಗಿ ಜನರು ತಂಪಾದ ಜ್ಯೂಸ್, ಹಾಲು, ನೀರು ಮತ್ತು ಇತರೆ ಹಾಲಿನ ಉತ್ಪನ್ನಗಳನ್ನು ನೀಡುತ್ತಾರೆ. ತಂಪು ಪಾನೀಯದ ಸ್ಟಾಲ್ ಗಳು ಸಹ ಮೆರವಣಿಗೆ ತೆರಳುವ ಮಾರ್ಗದಲ್ಲಿ ತೆರೆದಿರುತ್ತವೆ. ಹೀಗಾಗಿ ಹಾಲಿಗೆ ಬೇಡಿಕೆ ಹೆಚ್ಚಾಗಿತ್ತು.