ಇಸ್ಲಾಮಾಬಾದ್: ವಸ್ತುಗಳ ಮೇಲೆ ನಿಷೇಧ ಹೇರುವಂತೆ ಪಾಕಿಸ್ತಾನದ ಜನ ಅಭಿಯಾನ ನಡೆಸಿದ್ದರೆ ಫೆಡರಲ್ ಸರ್ಕಾರ ಜೀವ ಉಳಿಸುವ ಔಷಧಿ ಅಮದಿಗೆ ಒಪ್ಪಿಗೆ ಸೂಚಿಸಿದೆ.
ಪಾಕಿಸ್ತಾನದ ವಾಣಿಜ್ಯ ವ್ಯವಹಾರಗಳ ಸಚಿವಾಲಯ ಸೋಮವಾರ ಭಾರತದಿಂದ ಔಷಧಿಗಳನ್ನು ಆಮದು ಮಾಡಲು ಅನುಮತಿ ನೀಡಿದೆ.
Advertisement
Advertisement
ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಭಾರತ ಸರ್ಕಾರದ ನಡೆಯನ್ನು ಖಂಡಿಸಿ ದ್ವಿಪಕ್ಷೀಯ ವ್ಯವಹಾರವನ್ನು ಪಾಕಿಸ್ತಾನ ಬಂದ್ ಮಾಡಿತ್ತು. ಅಷ್ಟೇ ಅಲ್ಲದೇ ಪಾಕಿಸ್ತಾನದಲ್ಲಿದ್ದ ಭಾರತದ ರಾಯಭಾರಿಯನ್ನು ಹೊರ ಹೋಗುವಂತೆ ಸೂಚಿಸಿತ್ತು.
Advertisement
ಪಾಕಿಸ್ತಾನ ಆರೋಗ್ಯ ಸಚಿವಾಲಯ ಅಲ್ಲಿನ ಸಂಸತ್ತಿನಲ್ಲಿ ಪ್ರಕಟಿಸಿದ ಮಾಹಿತಿಯಂತೆ 2019ರ ಜೂನ್‍ವರೆಗೆ 136 ಕೋಟಿ ರೂ. ಮೌಲ್ಯದ ಔಷಧಿಗಳನ್ನು ಭಾರತ ರಫ್ತು ಮಾಡಿದೆ.
Advertisement
ಜನವರಿಯಲ್ಲಿ 15.43 ಕೋಟಿ ರೂ., ಫೆಬ್ರವರಿಯಲ್ಲಿ 19.37 ಕೋಟಿ ರೂ., ಮಾರ್ಚ್ ನಲ್ಲಿ 11.10 ಕೋಟಿ ರೂ., ಏಪ್ರಿಲ್ ನಲ್ಲಿ 18.96 ಕೋಟಿ ರೂ., ಮೇ ತಿಂಗಳಿನಲ್ಲಿ 4.89 ಕೋಟಿ ಪಾಕಿಸ್ತಾನ ರೂ. ಮೌಲ್ಯದ ಔಷಧಿಗಳನ್ನು ಖರೀದಿಸಿತ್ತು. ಪಾಕಿಸ್ತಾನ ಔಷಧಿಗಳನ್ನು ಹೆಚ್ಚಾಗಿ ಭಾರತ ಮತ್ತು ಚೀನಾದಿಂದ ಆಮದು ಮಾಡಿಕೊಳ್ಳುತ್ತಿದೆ.