ಇಸ್ಲಾಮಾಬಾದ್: ಪಾಕಿಸ್ತಾನದ ವೇಗದ ಬೌಲರ್ ಶಾಹೀನ್ ಶಾ ಆಫ್ರಿದಿ (Shaheen Shah Afridi) ಮತ್ತು ಪತ್ನಿ ಅನ್ಶಾ ಅಫ್ರಿದಿ ದಂಪತಿ ಗಂಡು ಮಗುವಿಗೆ (ಅಲಿ ಯಾರ್) ಜನ್ಮ ನೀಡಿದ್ದಾರೆ. ಪಾಕ್‌ನ ಹೊಡಿ ಬಡಿ ದಾಂಡಿಗ ಶಾಹಿದ್ ಅಫ್ರಿದಿ ತಾತ ಆಗಿದ್ದಾರೆ.
ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಶಾಹಿದ್ ಅಫ್ರಿದಿ (Shahid Afridi) ಅವರ ಪುತ್ರಿ ಅನ್ಶಾ ಅಫ್ರಿದಿ (Ansha Afridi). ಇವರನ್ನು ಶಾಹೀನ್‌ಗೆ ಕೊಟ್ಟು ಮದುವೆ ಮಾಡಲಾಗಿತ್ತು. ಹಾಲಿ ಕ್ರಿಕೆಟಿಗ ತಂದೆಯಾದರೆ, ಮಾಜಿ ಕ್ರಿಕೆಟಿಗ ತಾತನಾಗಿದ್ದಾರೆ. ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್ ಉತ್ತೇಜಕ್ಕೆ 125 ಕೋಟಿ ಮೊತ್ತದ ನಿಧಿ ಸ್ಥಾಪನೆಗೆ ಐಸಿಸಿ ನಿರ್ಧಾರ – ಭಾರತ, ಆಸೀಸ್‌ಗಿಲ್ಲ ಲಾಭ ಏಕೆ?
Advertisement
Advertisement
ಮಗು ಆಗಮನದ ನಿರೀಕ್ಷೆಯಲ್ಲಿದ್ದ ಶಾಹೀನ್ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡುವುದಿಲ್ಲ ಎಂಬ ಸುದ್ದಿ ಹರಡಿತ್ತು. ಆಗ ಪಾಕಿಸ್ತಾನದ ರೆಡ್ ಬಾಲ್ ತರಬೇತುದಾರ ಜೇಸನ್ ಗಿಲ್ಲೆಸ್ಪಿ, ವೃತ್ತಿಪರ ಬದ್ಧತೆಗಳಿಗಿಂತ ಕುಟುಂಬದ ಮಹತ್ವವನ್ನು ಒತ್ತಿ ಹೇಳಿದ್ದರು. ಈ ಮಹತ್ವದ ಕ್ಷಣದಲ್ಲಿ ಶಾಹೀನ್‌ಗೆ ತನ್ನ ಹೆಂಡತಿಯೊಂದಿಗೆ ಇರಲು ಸಮಯವನ್ನು ನೀಡಬಹುದು ಎಂದು ಸಲಹೆ ನೀಡಿದ್ದರು.
Advertisement
ಶಾಹೀನ್ ಮತ್ತು ಅನ್ಶಾ ಜೋಡಿಗೆ 2021 ರಲ್ಲಿ ನಿಶ್ಚಿತಾರ್ಥವಾಗಿತ್ತು. ನಂತರ ಖಾಸಗಿ ನಿಕಾಹ್ ಸಮಾರಂಭದಲ್ಲಿ 2023ರ ಫೆಬ್ರವರಿಯಲ್ಲಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು. ಜುಲೈನಲ್ಲಿ ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದನ್ನೂ ಓದಿ: ಅಂತಾರಾಷ್ಟ್ರೀಯ, ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ ಶಿಖರ್ ಧವನ್
Advertisement
2018 ರಲ್ಲಿ ಶಾಹೀನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಬಳಿಕ ಉತ್ತಮ ಪ್ರದರ್ಶನದೊಂದಿಗೆ ಪಾಕಿಸ್ತಾನದ ಪ್ರಮುಖ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಎಡಗೈ ವೇಗಿ ಟೆಸ್ಟ್ ಮತ್ತು ODI ಎರಡರಲ್ಲೂ 100 ಕ್ಕೂ ಹೆಚ್ಚು ವಿಕೆಟ್ ಪಡೆದಿದ್ದಾರೆ.
T20I ನಲ್ಲಿ 100 ತಲುಪಲು ಕೇವಲ ನಾಲ್ಕು ವಿಕೆಟ್‌ಗಳ ಅಗತ್ಯವಿದೆ. ಶಾಹೀನ್ ಪಾಕಿಸ್ತಾನದ ದೇಶೀಯ ಕ್ರಿಕೆಟ್ ಯಶಸ್ಸಿಗೆ ಕೊಡುಗೆ ನೀಡಿದ್ದಾರೆ. 2022 ಮತ್ತು 2023 ರಲ್ಲಿ ಪಾಕಿಸ್ತಾನ ಸೂಪರ್ ಲೀಗ್ (PSL) ಪ್ರಶಸ್ತಿಗಳನ್ನು ಲಾಹೋರ್ ಖಲಂದರ್ಸ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದನ್ನೂ ಓದಿ: ಮಾಜಿ ಪ್ರಧಾನಿ ಶೇಖ್ ಹಸೀನಾ, ಬಾಂಗ್ಲಾದ ಆಲ್‌ರೌಂಡರ್ ಶಕೀಬ್ ವಿರುದ್ಧ ಕೊಲೆ ಪ್ರಕರಣ ದಾಖಲು