ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ಲೀಗ್ (PSL) ನಲ್ಲಿ ಕಿರಿಕ್ ನಡೆದಿದೆ. ಲಾಹೋರ್ ಖಲಂದರ್ಸ್ ತಂಡದ ವೇಗದ ಬೌಲರ್ ಹ್ಯಾರಿಸ್ ರೌಫ್ ಸಹ ಆಟಗಾರ ಕಮ್ರಾನ್ ಗುಲಾಮ್‍ಗೆ ಕಪಾಳಮೋಕ್ಷ ಮಾಡಿದ್ದಾರೆ.
ಲಾಹೋರ್ ಖಲಂದರ್ಸ್ ಮತ್ತು ಪೆಶಾವರ್ ಝಲ್ಮಿ ನಡುವೆ ಪಂದ್ಯ ನಡೆಯುತ್ತಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಪೆಶಾವರ್ ಝಲ್ಮಿ ಪರ ಹಜರತುಲ್ಲಾ ಝಝೈ ಬ್ಯಾಟಿಂಗ್ ಮಾಡುತ್ತಿದ್ದರು. ಈ ವೇಳೆ ಹ್ಯಾರಿಸ್ ರೌಫ್ ಪಂದ್ಯದ ಎರಡನೇ ಓವರ್ ಎಸೆಯಲು ಆರಂಭಿಸಿದ್ದರು. ಹಜರತುಲ್ಲಾ ಝಝೈ ದೊಡ್ಡ ಹೊಡೆತಕ್ಕೆ ಕೈ ಹಾಕಿ ಕಮ್ರಾನ್ ಗುಲಾಮ್‍ಗೆ ಕ್ಯಾಚ್ ನೀಡಿದರು ಆದರೆ ಈ ಕ್ಯಾಚ್ ಹಿಡಿಯಲು ಕಮ್ರಾನ್ ಗುಲಾಮ್ ವಿಫಲವಾದರು. ಬಳಿಕ ಅದೇ ಓವರ್‌ನಲ್ಲಿ ಹ್ಯಾರಿಸ್ ರೌಫ್, ಪೆಶಾವರ್ ಝಲ್ಮಿ ತಂಡದ ಇನ್ನೋರ್ವ ಆರಂಭಿಕ ಆಟಗಾರ ಮೊಹಮ್ಮದ್ ಹ್ಯಾರಿಸ್ ವಿಕೆಟ್ ಪಡೆಯಲು ಸಫಲವಾದರು. ಈ ಸಂದರ್ಭ ಸಹ ಆಟಗಾರರು ಸಂಭ್ರಮಿಸಲು ಆರಂಭಿಸಿದರು. ಈ ವೇಳೆ ಕಮ್ರಾನ್ ಗುಲಾಮ್‍ಗೆ, ಹ್ಯಾರಿಸ್ ರೌಫ್ ಕಪಾಳಕ್ಕೆ ಹೊಡೆದರು. ಆದರೆ ಕಮ್ರಾನ್ ಗುಲಾಮ್ ಮಾತ್ರ ಸೈಲೆಂಟ್ ಆದರು. ಇದನ್ನೂ ಓದಿ: ನೀವು ಲೆಜೆಂಡರಿ ನಾಯಕ: ಕೊಹ್ಲಿಗೆ ಭಾವುಕ ಪತ್ರ ಬರೆದು ಗೋಲ್ಡನ್ ಶೂ ಗಿಫ್ಟ್ ಕೊಟ್ಟ ಯುವರಾಜ್ ಸಿಂಗ್
Wreck-it-Rauf gets Haris! #HBLPSL7 l #LevelHai l #LQvPZ pic.twitter.com/wwczV5GliZ
— PakistanSuperLeague (@thePSLt20) February 21, 2022
ನಂತರ ಪಂದ್ಯದ ಕೊನೆಯಲ್ಲಿ ಕಮ್ರಾನ್ ಗುಲಾಮ್ ಅದ್ಭುತ ರನ್‍ಔಟ್ ಒಂದನ್ನು ಮಾಡಿದರು. ಈ ವೇಳೆ ಕಮ್ರಾನ್ ಗುಲಾಮ್ ಬಳಿ ಬಂದ ಹ್ಯಾರಿಸ್ ರೌಫ್ ತಬ್ಬಿಕೊಂಡು ಪ್ರೋತ್ಸಾಹಿಸಿದರು. ಇದೀಗ ಈ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ವೃದ್ಧಿಮಾನ್ ಸಹಾ ಹೇಳಿಕೆಯಿಂದ ಬೇಸರವಾಗಿಲ್ಲ: ದ್ರಾವಿಡ್
???? #HBLPSL7 l #LevelHai l #LQvPZ pic.twitter.com/hg5uCFmgac
— PakistanSuperLeague (@thePSLt20) February 21, 2022
ಈ ಹಿಂದೆ ಕೂಡ ಪಿಎಸ್‍ಎಲ್‍ನಲ್ಲಿ ಆಟಗಾರರ ನಡುವೆ ಮಾರಾಮಾರಿ ನಡೆದಿತ್ತು. ಇದೀಗ ಮತ್ತೆ ಪಿಎಸ್‍ಎಲ್ ಕಿರಿಕ್ ಅಡ್ಡವಾಗಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದೆ.