ಇಸ್ಲಾಮಾಬಾದ್: ಭಾರತದ ಚುನಾವಣೆ (Indian General Election) ಪ್ರಕ್ರಿಯೆ, ಪಾರದರ್ಶಕತೆ, ಶಾಂತಿಯುತ ಮತದಾನದ ಬಗ್ಗೆ ಪಾಕಿಸ್ತಾನ (Pakistan) ವಿರೋಧ ಪಕ್ಷದ ನಾಯಕ ಶಿಬ್ಲಿ ಫರಾಜ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಂಸತ್‌ನಲ್ಲಿ ಮಾತನಾಡಿದ ಅವರು, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವು ಯಾವುದೇ ಆರೋಪಗಳಿಲ್ಲದೆ ಇವಿಎಂಗಳನ್ನು (EVM) ಬಳಸಿಕೊಂಡು ತನ್ನ ಚುನಾವಣೆಗಳನ್ನು ಯಶಸ್ವಿಯಾಗಿ ನಡೆಸಿದೆ ಎಂದು ಶ್ಲಾಘಿಸಿದರು.
Advertisement
In the Pakistani Parliament, opposition leader Shibli Faraz praised the Indian electoral process, highlighting how the world’s largest democracy conducted its lengthy elections with EVMs, announced results, and transferred power smoothly without any allegations of fraud. Why… pic.twitter.com/eNnzidup3x
— Ghulam Abbas Shah (@ghulamabbasshah) June 13, 2024
ಇತ್ತೀಚೆಗೆ ಭಾರತದಲ್ಲಿ ಲೋಕಸಭಾ ಚುನಾವಣೆ (Lok Sabha Election) ನಡೆಯಿತು. ಲಕ್ಷಾಂತರ ಜನರು ಮತ ಹಾಕಿದರು. ಸಾವಿರಾರು ಮತಗಟ್ಟೆಗಳು ಸ್ಥಾಪನೆಯಾಗಿದ್ದವು. ದೂರದ ಪ್ರದೇಶದಲ್ಲಿ ವಾಸಿಸುವ ಒಬ್ಬ ವ್ಯಕ್ತಿಗೆ ಸಹ ಒಂದು ಮತಗಟ್ಟೆಯನ್ನು ನಿರ್ಮಿಸಲಾಗಿತ್ತು. ಒಂದು ತಿಂಗಳ ಕಾಲ ಇವಿಎಂ ಬಳಸಿ ಯಶಸ್ವಿಯಾಗಿ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ಅಕ್ರಮ ನಡೆದ ಬಗ್ಗೆ ಒಂದೇ ಒಂದು ಅಪಸ್ವರ ಬಂದಿಲ್ಲ. ಇದೇ ರೀತಿಯ ಪ್ರಗತಿಯನ್ನು ನಾನು ಪಾಕಿಸ್ತಾನದಲ್ಲಿ ನೋಡಲು ಬಯಸುತ್ತೇನೆ ಎಂದು ಹೇಳಿದರು.
Advertisement
ಪಾಕಿಸ್ತಾನದ ಚುನಾವಣೆಗಳಲ್ಲಿ ಪುನರಾವರ್ತಿತ ವಿವಾದಗಳ ಬಗ್ಗೆ ಹತಾಶೆಯನ್ನು ವ್ಯಕ್ತಪಡಿಸಿದ ಶಿಬ್ಲಿ ಫರಾಜ್ ನಮ್ಮಲ್ಲಿ ಸೋತ ಅಭ್ಯರ್ಥಿಗಳು ಸೋಲನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಾರೆ. ಇದು ದುರ್ಬಲಗೊಂಡ ರಾಜಕೀಯ ವ್ಯವಸ್ಥೆಗೆ ಕಾರಣವಾಗುತ್ತದೆ ಎಂದರು. ಇದನ್ನೂ ಓದಿ: ಶೀಘ್ರವೇ ಮೊಬೈಲ್ ಸಂಖ್ಯೆ, ಲ್ಯಾಂಡ್‌ಲೈನ್ ಸಂಖ್ಯೆಗೆ ಪಾವತಿಸಬೇಕು ಶುಲ್ಕ!
Advertisement
Advertisement
ಪಾಕಿಸ್ತಾನ ಸಾರ್ವತಿಕ ಚುನಾವಣೆಯಲ್ಲಿ ಭಾರೀ ಗಲಾಟೆಗಳು ನಡೆದಿದ್ದವು. ಇಮ್ರಾನ್ ಖಾನ್ ಅವರು ನೇರವಾಗಿ ಸೇನೆಯ ವಿರುದ್ಧ ಹೇಳಿಕೆ ನೀಡಿದ್ದರು. ಮತ ಕೇಂದ್ರದಲ್ಲಿ ಗಲಾಟೆ, ಫಲಿತಾಂಶ ಪ್ರಕಟವಾದ ನಂತರ ಗಲಭೆಗಳು ನಡೆದಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.