ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಅಹ್ಮದ್ ಶಿಹಜಾದ್ ಡೋಪಿಂಗ್ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದು, ಮುಂದಿನ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಿಂದ ಹೊರಬಿದಿದ್ದಾರೆ.
ಜೂನ್ 20 ರಂದು ನಡೆಸಲಾದ ಪರೀಕ್ಷೆಯಲ್ಲಿ ಪಾಕ್ ಆರಂಭಿಕ ಅಹ್ಮದ್ ಶಿಹಜಾದ್ ಅವರ ಮಾದರಿ ಪರೀಕ್ಷೆ ಪಾಸಿಟಿವ್ ಎಂಬ ವರದಿ ಬಂದಿದೆ. ಸದ್ಯ ಈ ಕುರಿತು ಟ್ವೀಟ್ ಮಾಡಿರುವ ಪಾಕಿಸ್ತಾನ ಮಾಧ್ಯಮ ಪಾಕ್ ಆಟಗಾರನ ಡೋಪಿಂಗ್ ಟೆಸ್ಟ್ ನಲ್ಲಿ ಪಾಸಿಟಿವ್ ಎಂದು ಬಂದಿದ್ದು, ಆದರೆ ಆಟಗಾರನ ದೇಹದಲ್ಲಿ ಕಂಡು ಬಂದಿರುವ ಕೆಮಿಕಲ್ ಕುರಿತು ವರದಿ ಬರುವವರೆಗೂ ಆಟಗಾರನ ಹೆಸರು ಬಹಿರಂಗ ಪಡಿಸುವಂತಿಲ್ಲ ಎಂದು ತಿಳಿಸಿದೆ.
Advertisement
Ahmad Shahzad has been tested positive for Marijuana – the test was conducted prior to the Scotland series during Pakistan Cup.
— zainab abbas (@ZAbbasOfficial) June 20, 2018
Advertisement
ಅಹ್ಮದ್ ಡೋಪಿಂಗ್ ಪರೀಕ್ಷೆಯಲ್ಲಿ ಸಿಕ್ಕಿ ಬಿದ್ದಿರುವ ಕುರಿತು ಖಚಿತಪಡಿಸಿ ಟ್ವೀಟ್ ಮಾಡಿರುವ ಪಾಕ್ ಪತ್ರಕರ್ತೆ ಜೈನಭ್ ಅಬ್ಬಾಸ್, ಅಹ್ಮದ್ ಪರೀಕ್ಷೆಯಲ್ಲಿ ಪಾಸಿಟಿವ್ ಎಂಬ ವರದಿ ಬಂದಿದ್ದು, ಸ್ಕಾಟ್‍ಲ್ಯಾಂಡ್ ಟೂರ್ನಿಯ ವೇಳೆ ನಡೆದ ಪರೀಕ್ಷಾ ವರದಿಯಲ್ಲಿ ಸಿಕ್ಕಿಬಿದ್ದಾರೆ ಎಂದು ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
Advertisement
A player has reportedly tested positive for a prohibited substance. But under ICC rules PCB cannot name the player or chargesheet him until the chemical report is CONFIRMED by the Anti-Dope Agency of the government. We should have an answer in a day or two.
— PCB Media (@TheRealPCBMedia) June 20, 2018
Advertisement
ಸದ್ಯ ಅಹ್ಮದ್ ಡೋಪಿಂಗ್ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿರುವ ಕುರಿತು ವಾಡಾ (ವರ್ಲ್ಡ್ ಅ್ಯಂಟಿ-ಡೋಪಿಂಗ್ ಏಜನ್ಸಿ) ಯಾವ ಕ್ರಮಕೈಗೊಳ್ಳಲಿದೆ ಎಂದು ಕಾದುನೋಡಬೇಕಿದೆ. ಈ ನಡುವೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ತನ್ನ ಮುಂದಿನ ಸರಣಿಗೆ ಅಹ್ಮದ್ ಶಿಹಜಾದ್ ಕೈ ಬಿಟ್ಟು ಶಾನ್ ಮಸೂದ್ ಅಥವಾ ಮೊಹಮ್ಮದ್ ಹಫೀಜ್‍ರನ್ನು ಆಯ್ಕೆ ಮಾಡುವ ಸಂಭವವಿದೆ. ಖಾಸಗಿ ಸುದ್ದಿ ವಾಹಿನಿಯ ವರದಿಯ ಅನ್ವಯ ಶಿಹಜಾದ್ ಗೆ ಮತ್ತೊಂದು ಸುತ್ತಿನ ಪರೀಕ್ಷೆ ನಡೆಸುವ ಸಂಭವವಿದೆ ಎಂದು ತಿಳಿಸಿದೆ. ಈ ನಡುವೆ ಪಿಸಿಬಿ ಶಿಹಜಾದ್‍ಗೆ ಮೂರು ತಿಂಗಳು ಅಮಾನತು ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.
ಸ್ಕಾಟ್ ಲ್ಯಾಂಡ್ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದ್ದ ಮಹಮ್ಮದ್ ಎರಡು ಟಿ20 ಪಂದ್ಯಗಳಿಂದ 36 ರನ್ ಮಾತ್ರ ಗಳಿಸಿದ್ದರು. ಒಟ್ಟಾರೆ ಪಾಕ್ ಪರ 81 ಪಂದ್ಯಗಳನ್ನು ಆಡಿರುವ ಮಹಮ್ಮದ್ 2605 ರನ್ ಹಾಗೂ 57 ಟಿ20 ಇನ್ನಿಂಗ್ಸ್ ಗಳಿಂದ ಕೇವಲ 11 ರನ್ ಗಳಿಸಿದ್ದಾರೆ.
BREAKING NEWS,AHMAD SHAZAD DOPE TEST POSITIVE,PCB CONFIRMS
— Saleem Khaliq (@saleemkhaliq) June 20, 2018