BelgaumDistrictsKarnatakaLatestMain Post

ಆಲ್‌ಖೈದಾ ಉಗ್ರನ ಎಚ್ಚರಿಕೆ ನಡುವೆಯೇ ಪಾಕಿಸ್ತಾನದ ನೋಟು ಪತ್ತೆ

ಚಿಕ್ಕೋಡಿ: ಹಿಜಬ್ ವಿವಾದಕ್ಕೆ ಸಂಬಂಧಿಸಿದಂತೆ ಅಲ್‌ಖೈದಾ ಉಗ್ರನ ಎಚ್ಚರಿಕೆ ನಡುವೆಯೇ ಪಾಕಿಸ್ತಾನದ ನೋಟು ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ.

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ ಪಾಕಿಸ್ತಾನದ ನೋಟು ಪತ್ತೆಯಾಗಿದೆ. ಗ್ರಾಮದ ಬಸ್ ನಿಲ್ದಾಣದ ಹತ್ತಿರ ಪಾಕಿಸ್ತಾನ ದೇಶದ 10 ರೂ. ಮುಖಬೆಲೆಯ ನೋಟು ಪತ್ತೆಯಾಗಿದ್ದು, ಇದರಿಂದ ಗ್ರಾಮದಲ್ಲಿ ಭಯದ ವಾತಾವಾರಣ ನಿರ್ಮಾಣವಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಆದಾಯದಲ್ಲಿ 58% ಕ್ಕಿಂತ ಹೆಚ್ಚು ಕುಸಿತ

ಕರೋಶಿ ಗ್ರಾಮದ ಬಸ್ ನಿಲ್ದಾಣದ ಬಳಿ ನೋಟು ಬಿದ್ದಿದ್ದನ್ನು ನೋಡಿದ ಯುವಕ ತಕ್ಷಣವೇ ಇದು ಪಾಕಿಸ್ತಾನದ ನೋಟು ಎಂದು ಖಾತರಿ ಪಡಿಸಿಕೊಂಡು, ಪೊಲೀಸರಿಗೆ ಮಾಹಿತಿ ನೀಡಿ, ಅವರಿಗೆ ಒಪ್ಪಿಸಿದ್ದಾನೆ. ತಕ್ಷಣವೇ ಚಿಕ್ಕೋಡಿ ಪೊಲೀಸರು ಕಾರ್ಯಪ್ರವೃತ್ತರಾಗಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ತನಿಖೆ ಆರಂಭಿಸಿದ್ದಾರೆ.

ಗ್ರಾಮದಲ್ಲಿ ಸುಪ್ರಸಿದ್ಧ ದರ್ಗಾ ಇರುವ ಕಾರಣ ಇಲ್ಲಿ ಯಾರಾದರೂ ಪಾಕಿಸ್ತಾನಿ ಪ್ರಜೆಗಳು ಬಂದು ಹೋಗಿದ್ದಾರಾ ಅಥವಾ ಕರೋಶಿ ಗ್ರಾಮದವರೇ ಯಾರಾದರೂ ಪಾಕಿಸ್ತಾನಕ್ಕೆ ಹೋಗಿ ಬಂದಿದ್ದಾರಾ ಎಂಬುದನ್ನು ತಿಳಿಯಲು ತನಿಖೆ ಆರಂಭವಾಗಿದ್ದು, ಸಿಸಿಟಿವಿಗಳ ಪರಿಶೀಲನೆ ಕಾರ್ಯ ನಡೆಸುತ್ತಿದ್ದಾರೆ. ಇದನ್ನೂ ಓದಿ: ಚುನಾವಣೆ ಗೆಲ್ಲಲು ಹಿಜಬ್, ಹಲಾಲ್ ಸಾಲದು, ಉತ್ತಮ ಆಡಳಿತವೂ ಬೇಕು: ಬೊಮ್ಮಾಯಿಗೆ ಕಿವಿ ಹಿಂಡಿದ ಹೈಕಮಾಂಡ್

POLICE JEEP

ಒಟ್ಟಿನಲ್ಲಿ ಕರೋಶಿ ಗ್ರಾಮದಲ್ಲಿ ಪಾಕಿಸ್ತಾನದ ಕರೆನ್ಸಿ ದೊರೆತಿರುವುದು ಗ್ರಾಮದಲ್ಲಿ ಸಂಚಲನ ಮೂಡಿಸಿದೆ. ಪಾಕಿಸ್ತಾನದ ಭಯೋತ್ಪಾದಕರು ನಮ್ಮ ಗ್ರಾಮದಲ್ಲಿ ನುಸುಳಿಕೊಂಡಿದ್ದಾರಾ ಎನ್ನುವ ಆತಂಕ ಮನೆ ಮಾಡಿದ್ದು, ಪೊಲೀಸರು ಆದಷ್ಟು ಬೇಗ ತನಿಖೆಯನ್ನು ಚುರುಕುಗೊಳಿಸಿ ಸತ್ಯಾಂಶ ಬಯಲಿಗೆ ಎಳೆಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

YouTube video

Leave a Reply

Your email address will not be published. Required fields are marked *

Back to top button