ಶ್ರೀನಗರ: ಪಾಕಿಸ್ತಾನ ಕೈಗೆ ಬಳೆ ತೊಟ್ಟಿಕೊಂಡಿಲ್ಲ. ಭಾರತದ ವಿರುದ್ಧ ಬಳಸಬಹುದಾದ ಪರಮಾಣು ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನ (Pakistan) ಹೊಂದಿದೆ ಎಂದು ಹೇಳುವ ಮೂಲಕ ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ (Farooq Abdullah) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
Advertisement
ಪಾಕ್ ಆಕ್ರಮಿತ ಕಾಶ್ಮೀರವನ್ನು (POK) ಭಾರತದೊಂದಿಗೆ ವಿಲೀನಗೊಳಿಸುವ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajanath Singh) ಅವರ ಹೇಳಿಕೆಗೆ ಪ್ರತಿಕ್ರಿಯಿಸಿ ಇದೀಗ ಫಾರೂಕ್ ಅಬ್ದುಲ್ಲಾ ವಿವಾದಕ್ಕೀಡಾಗಿದ್ದಾರೆ. ರಕ್ಷಣಾ ಸಚಿವರು ಹೇಳುತ್ತಿದ್ದರೆ, ಮುಂದುವರಿಯಿರಿ, ನಾವು ತಡೆಯಲು ಯಾರು? ಆದರೆ ನೆನಪಿಡಿ, ಪಾಕಿಸ್ತಾನ ಬಳೆಗಳನ್ನು ಧರಿಸಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಜೆಟ್ ಏರ್ವೇಸ್ ಸಂಸ್ಥಾಪಕ ನರೇಶ್ ಗೋಯಲ್ಗೆ ಮಧ್ಯಂತರ ಜಾಮೀನು
Advertisement
Advertisement
ರಾಜನಾಥ್ ಸಿಂಗ್ ಹೇಳಿದ್ದೇನು?: ಪಿಓಕೆ ವಶಪಡಿಸಿಕೊಳ್ಳಲು ಸೇನಾ ಬಲ ಪ್ರಯೋಗಿಸುವ ಅಗತ್ಯವಿಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿರುವ ಅಭಿವೃದ್ಧಿಗಳನ್ನು ಕಂಡು ಅಲ್ಲಿನ ಜನರೇ ಭಾರತದ ಭಾಗವಾಗಲು ಬಯಸುತ್ತಾರೆ. ನನ್ನ ಪ್ರಕಾರ, ಭಾರತ ಏನೂ ಮಾಡುವುದು ಬೇಕಿಲ್ಲ ಎಂದು ಸಂದರ್ಶನವೊಂದರಲ್ಲಿ ರಾಜನಾಥ್ ಸಿಂಗ್ ಹೇಳಿದ್ದರು.
Advertisement
ಅಲ್ಲದೇ ಜಮ್ಮು ಮತ್ತು ಕಾಶ್ಮೀರದ ಆರ್ಥಿಕ ಪ್ರಗತಿ ಹಾಗೂ ಶಾಂತಿ ಮರಳಿರುವ ರೀತಿಯನ್ನು ಕಂಡಾಗ ಭಾರತದ ಜೊತೆ ವಿಲೀನಗೊಳ್ಳಬೇಕು ಎಂದು ಪಿಒಕೆ ಜನರೇ ಡಿಮಾಂಡ್ ಮಾಡುತ್ತಾರೆ. ಅಲ್ಲದೇ ನಾವು ಭಾರತದೊಂದಿಗೆ ಸೇರಬೇಕು ಎಂದು ಸ್ವತಃ ಜನರೇ ಹೇಳುವುದರಿಂದ ನಾವು ಪಿಒಕೆಯನ್ನು ವಶಪಡಿಸಿಕೊಳ್ಳಲು ಬಲ ಪ್ರಯೋಗಿಸುವ ಅಗತ್ಯ ಬರಲ್ಲ. POK ಹಿಂದೆ, ಈಗ ಮತ್ತು ಎಂದೆಂದಿಗೂ ನಮ್ಮದೇ ಎಂದು ಪುನರುಚ್ಚರಿಸಿದ್ದರು.