ಇಸ್ಲಾಮಾಬಾದ್: ವಿಶ್ವದ ಅತ್ಯಂತ ಅಪಾಯಕಾರಿ ದೇಶಗಳಲ್ಲಿ (Dangerous Country) ಪಾಕಿಸ್ತಾನವೂ (Pakistan) ಒಂದು ಎಂದು ಅಮೆರಿಕ (America) ಅಧ್ಯಕ್ಷ ಜೋ ಬೈಡನ್ (Joe Biden) ಅವರ ಹೇಳಿಕೆಯನ್ನು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ತಿರಸ್ಕರಿಸಿದ್ದಾರೆ. ಪಾಕಿಸ್ತಾನ ಅಪಾಯಕಾರಿ ರಾಷ್ಟ್ರ ಅಲ್ಲ, ಬದಲಿಗೆ ಜವಾಬ್ದಾರಿಯುತ ರಾಷ್ಟ್ರ ಎಂದು ಷರೀಫ್ ತಿಳಿಸಿದ್ದಾರೆ.
ಬೈಡನ್ ಹೇಳಿಕೆಗೆ ತಿರುಗೇಟು ನೀಡಿದ ಷರೀಫ್, ಅಮೆರಿಕ ಅಧ್ಯಕ್ಷರ ಹೇಳಿಕೆ ದೋಷಪೂರಿತವಾಗಿದ್ದು, ವಾಸ್ತವವಾಗಿ ತಪ್ಪು ದಾರಿಗೆಳೆಯುವಂತೆ ಮಾಡುತ್ತಿದೆ ಎಂದು ಹೇಳಿದ್ದಾರೆ.
Advertisement
Advertisement
ಪಾಕಿಸ್ತಾನ ಅತ್ಯಂತ ಜವಾಬ್ದಾರಿಯುತ ಪರಮಾಣು ಹೊಂದಿರುವ ರಾಷ್ಟ್ರವೆಂದು ಕಳೆದ ದಶಕದಲ್ಲಿಯೇ ಸಾಬೀತಾಗಿದೆ. ತನ್ನ ಪರಮಾಣು ಕಾರ್ಯಗಳನ್ನು ನುರಿತ ಹಾಗೂ ಯಾವುದೇ ತಪ್ಪುಗಳಾಗದ ರೀತಿಯ ನಿಯಂತ್ರಣ ವ್ಯವಸ್ಥೆಯಿಂದ ನಿರ್ವಹಿಸಲಾಗುತ್ತಿದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಪಾಕಿಸ್ತಾನವೂ ಒಂದು – ಜೋ ಬೈಡೆನ್
Advertisement
Advertisement
ಬೈಡನ್ ಲಾಸ್ ಏಂಜಲೀಸ್‌ನಲ್ಲಿ ನಡೆದ ಡೆಮಾಕ್ರಟಿಕ್ ಕಾಂಗ್ರೆಸ್ ಕಾಂಪೇನ್ ಕಮಿಟಿಯ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಪಾಕಿಸ್ತಾನ ಯಾವುದೇ ಒಗ್ಗಟ್ಟಿನ ವ್ಯವಸ್ಥೆ ಇಲ್ಲದೇ ಅಣ್ವಸ್ತ್ರಗಳನ್ನು ಹೊಂದಿದೆ. ಇದು ವಿಶ್ವದ ಅತ್ಯಂತ ಅಪಾಯಕಾರಿ ದೇಶಗಳಲ್ಲಿ ಒಂದಾಗಿದೆ ಎಂದು ಹೇಳಿದ್ದರು. ಇದನ್ನೂ ಓದಿ: ಪಾಕಿಸ್ತಾನದ ಕಿರುಕುಳ, ತಾರತಮ್ಯಕ್ಕೆ ಬೇಸತ್ತು ಭಾರತಕ್ಕೆ ಬಂದ 100 ಹಿಂದೂಗಳು