ನವದೆಹಲಿ: ಭಾರತೀಯ ಯೋಧರ ಸಹನೆ ಪರೀಕ್ಷಿಸಿ ಕಾಲ್ಕೆರದು ಪದೇ ಪದೇ ಕದನವಿರಾಮ ಉಲ್ಲಂಘಿಸುವ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿಸೆಪ್ಟೆಂಬರ್ 29, 2016ರಲ್ಲಿ `ಸರ್ಜಿಕಲ್ ಸ್ಟ್ರೈಕ್’ ಮಾಡಿದ್ರೂ ಪಾಕಿಸ್ತಾನಕ್ಕೆ ಬುದ್ಧಿ ಬಂದಿಲ್ಲ. ಸೋಮವಾರ ಬೆಳಗ್ಗೆ ಜಮ್ಮು ಕಾಶ್ಮೀರದ ಪೂಂಚ್ ಸೆಕ್ಟರ್‍ನಲ್ಲಿ ಗಡಿ ನಿಯಂತ್ರಣ ರೇಖೆ ದಾಟಿ ಭಾರತೀಯ ಸೇನೆಯ ಇಬ್ಬರು ಯೋಧರನ್ನು ಬರ್ಬರ, ಅಮಾನುಷವಾಗಿ ಕೊಂದಿದೆ.
ಯೋಧರ ಶಿರಚ್ಛೇದನ ಮಾಡಿ ದೇಹವನ್ನು ತುಂಡರಿಸಿ ಪೈಶಾಚಿಕವಾಗಿ ನಡೆದುಕೊಂಡಿದೆ. ಮಧ್ಯಾಹ್ನ ಗಸ್ತಿನಲ್ಲಿ ಯೋಧರಿಗೆ ಕೃಷ್ಣಘಾಟ್ ಬಳಿ ಶಿರಚ್ಛೇದನವಾಗಿ ಬಿದ್ದಿದ್ದ ಸೇನಾ ಕಿರಿಯ ಕಮಾಂಡೆಂಟ್ ಪರಮ್‍ಜಿತ್ ಸಿಂಗ್ ಹಾಗೂ ಬಿಎಸ್‍ಎಫ್‍ನ ಹೆಡ್ ಕಾನ್ಸಟೇಬಲ್ ಪರಮ್ ಸಾಗರ್ ಎಂಬ ಇಬ್ಬರು ಯೋಧರ ಶವ ಪತ್ತೆಯಾಗಿದೆ.
Advertisement
ಈ ಇಬ್ಬರು ನೆಲ ಬಾಂಬ್ ನಿಷ್ಕ್ರಿಯಗೊಳಿಸಲು ಎಲ್‍ಒಸಿಯಲ್ಲಿ ಪಹರೆ ನಡೆಸ್ತಿದ್ರು. ಇನ್ನು, ಪಾಕಿಸ್ತಾನದ ಕೃತ್ಯವನ್ನು ಅತ್ಯುಘ್ರವಾಗಿ ಖಂಡಿಸಿರೋ ಸೇನೆ, ಶೀಘ್ರದಲ್ಲೇ ತಕ್ಕ ಉತ್ತರ ಕೊಡೋದಾಗಿ ಎಚ್ಚರಿಕೆ ರವಾನಿಸಿದೆ.
Advertisement
ಅಂದಹಾಗೆ, ನಿನ್ನೆ ತಾನೇ ಎಲ್‍ಒಸಿಗೆ ಪಾಕ್ ಸೇನಾ ಮುಖ್ಯಸ್ಥ ಖಮರ್ ಭಜ್ವಾ ಭೇಟಿ ನೀಡಿ ತಮ್ಮ ಜಾಗವನ್ನು ಉಳಿಸಿಕೊಳ್ಳೋಣ. ನೀವು ಹೋರಾಡಿ ಅಂತಾ ಅವರ ಸೈನಿಕರಿಗೆ ಹುರಿದುಂಬಿಸಿದ್ರು. ಈ ಭೇಟಿಯ ಬೆನ್ನಲ್ಲೇ ಪಾಕ್ ಸೈನಿಕರು ನಮ್ಮ ಭಾರತೀಯ ಸೈನಿಕರ ಶಿರಚ್ಛೇದನ ಮಾಡಿದ್ದಾರೆ.
Advertisement
ಘಟನೆ ಬಗ್ಗೆ ಪ್ರಧಾನಿ ಮೋದಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಮಾಹಿತಿ ನೀಡಿದ್ದಾರೆ. ಪಾಕಿಸ್ಥಾನಕ್ಕೆ ತಿರುಗೇಟು ನೀಡಲು ಚಿಂತನೆ ನಡೆಸಿದ್ದಾರೆ. ಇನ್ನು, ಪಾಕಿಸ್ತಾನ ತನ್ನ ಅವಸಾನವನ್ನ ಆಹ್ವಾನಿಸಿಕೊಳ್ತಿದೆ ಅಂತ ರಾಜಕೀಯ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
Advertisement
Pak Army mutilates bodies of Indian soldiers, Indian Army vows strong retaliation
Read @ANI_news story -> https://t.co/xMrgdpxHUA pic.twitter.com/GYEnt3IvzV
— ANI Digital (@ani_digital) May 1, 2017
In an unsoldierly act by Pakistan Army the bodies of two of our soldiers in the patrol were mutilated: Army pic.twitter.com/z5b2z1Ikya
— ANI (@ANI_news) May 1, 2017
There was stand up fire from across the border,1 soldier injured, 2 soldiers succumbed to injuries; matter under investigation:R Pandey, SSP pic.twitter.com/LuLGPCd1I4
— ANI (@ANI_news) May 1, 2017
Incident Krishna Ghati Sector . Statement attached. pic.twitter.com/yyNFqCEHDm
— NorthernComd.IA (@NorthernComd_IA) May 1, 2017