ಇಸ್ಲಾಮಾಬಾದ್: ಮಸೀದಿಯ (Mosque) ಒಳಗಡೆಯೇ ಬಾಂಬ್ ಸ್ಫೋಟಗೊಂಡು (Bomb Blast) ಐವರು ಸಾವನ್ನಪ್ಪಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಪಾಕಿಸ್ತಾನದ (Pakistan) ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ನಡೆದಿದೆ.
ನೌಶೇರಾ ಜಿಲ್ಲೆಯ ಅಕೋರಾ ಖಟ್ಟಕ್ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆ. ಮದರಸಾದ ಆವರಣದಲ್ಲಿರುವ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆಯ ಸಮಯದಲ್ಲಿ ಬಾಂಬ್ ಸ್ಪೋಟಗೊಂಡಿದೆ.
حقانیہ مدرسہ اکوڑہ خٹک میں دھماکہ
نوشہرہ: ابتدائی اطلاعات کے مطابق دھماکہ کی صورت متعدد افراد زخمی ہوئے، ریسکیو1122 pic.twitter.com/ynmZskWsii
— Ghazanfar Abbas (@ghazanfarabbass) February 28, 2025
ಗಾಯಗೊಂಡವರಲ್ಲಿ ಜಮಿಯತ್ ಉಲೇಮಾ-ಎ-ಇಸ್ಲಾಂ-ಸಾಮಿ (ಜೆಯುಐ-ಎಸ್) ನಾಯಕ ಮೌಲಾನಾ ಹಮಿದುಲ್ ಹಕ್ ಹಕ್ಕಾನಿ ಕೂಡ ಸೇರಿದ್ದಾರೆ. ಸ್ಫೋಟ ಸಂಭವಿಸಿದಾಗ ಶುಕ್ರವಾರ ಪ್ರಾರ್ಥನೆ ಸಲ್ಲಿಸುತ್ತಾ ಮುಂದಿನ ಸಾಲಿನಲ್ಲಿದ್ದರು. ಇದನ್ನೂ ಓದಿ: 18 ವರ್ಷ ತುಂಬುವುದು ಇಷ್ಟವಿಲ್ಲ ಅಂತ ಹುಟ್ಟುಹಬ್ಬಕ್ಕೂ ಮುನ್ನವೇ ಮಗನನ್ನು ಕೊಂದ ಮಹಿಳೆ
ಅಫ್ಘಾನ್ ತಾಲಿಬಾನ್‌ನೊಂದಿಗೆ ಮೌಲಾನಾ ಹಮಿದುಲ್ ಹಕ್ ಹಕ್ಕಾನಿ ಸಂಪರ್ಕ ಹೊಂದಿದ್ದಾರೆ. ಇಲ್ಲಿಯವರೆಗೆ ದಾಳಿಯ ಹೊಣೆಯನ್ನು ಯಾವುದೇ ಗುಂಪು ತಕ್ಷಣ ವಹಿಸಿಕೊಂಡಿಲ್ಲ. ಭಾನುವರದಿಂದ ಮುಸ್ಲಿಮರ ಪವಿತ್ರ ರಂಜಾನ್ ತಿಂಗಳು ಆರಂಭವಾಗುವ ಮೊದಲೇ ಬಾಂಬ್ ದಾಳಿ ನಡೆದಿದೆ.
Scene from the site of explosion: pic.twitter.com/yFUe6IjWHu
— Vineet (@cozyduke_apt29) February 28, 2025