ಇಸ್ಲಾಮಾಬಾದ್: ಬರೋಬ್ಬರಿ 6 ಮದುವೆಯಾಗಿ, ಬರೋಬ್ಬರಿ 54 ಮಕ್ಕಳನ್ನು ಪಡೆದಿದ್ದ ಪಾಕಿಸ್ತಾನದ ವ್ಯಕ್ತಿ (Pakistan Man) ತಮ್ಮ 75ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. ವ್ಯಕ್ತಿಯ ಸಾವಿಗೆ ಸುಮಾರು 150 ಕುಟುಂಬದ ಸದಸ್ಯರೇ ಕಂಬನಿ ಮಿಡಿದಿದ್ದಾರೆ.
ಬಲೂಚಿಸ್ತಾನದ ನೋಶಿ ಜಿಲ್ಲೆಯ ಕಾಳಿ ಮಂಗಲ್ ಗ್ರಾಮದ ನಿವಾಸಿ ಅಬ್ದುಲ್ ಮಜೀದ್ ಮೆಂಗಲ್ (Abdul Majeed Mangal) ಕಳೆದ ಬುಧವಾರ ಹೃದಯಾಘಾತದಿಂದ ಸಾವನ್ನಪ್ಪಿದರು. ಮೆಂಗಾಲ್ 42 ಮಕ್ಕಳು ಹಾಗೂ 4 ಪತ್ನಿಯರನ್ನು ಅಗಲಿದ್ದಾರೆ. ಇದನ್ನೂ ಓದಿ: ಗಡಿಯಲ್ಲಿ ಮತ್ತೆ ಬಡಿದಾಟ – ಚೀನಿ ಯೋಧರಿಗೆ ತಿರುಗೇಟು ಕೊಟ್ಟ ಭಾರತ
Advertisement
Advertisement
ವರದಿಗಳ ಪ್ರಕಾರ ಅವರ 12 ಮಕ್ಕಳು ಹಾಗೂ ಇಬ್ಬರು ಪತ್ನಿಯರು ಮೊದಲೇ ಸಾವನ್ನಪ್ಪಿದ್ದಾರೆ. ಮೆಂಗಾಲ್‌ನ ಪ್ರಸ್ತುತ 42 ಮಕ್ಕಳಲ್ಲಿ 22 ಗಂಡು ಹಾಗೂ 20 ಹೆಣ್ಣು ಮಕ್ಕಳಿದ್ದಾರೆ. ಅವರ ಮೊಮ್ಮಕ್ಕಳು ಸೇರಿದರೆ ಸುಮಾರು 150 ಸದಸ್ಯರ ತುಂಬು ಕುಟುಂಬವಾಗಿದೆ. ಇದನ್ನೂ ಓದಿ: ಕಾಬೂಲ್‌ನಲ್ಲಿ ಚೀನೀಯರ ಅತಿಥಿ ಗೃಹದ ಬಳಿ ಭಾರೀ ಸ್ಫೋಟ, ಗುಂಡಿನ ದಾಳಿ
Advertisement
ರಾಷ್ಟ್ರೀಯ ಜನಗಣತಿ 2017 ಪ್ರಾರಂಭವಾದಾಗ ಅಬ್ದುಲ್ ಮಜೀದ್ ಹಾಗೂ ಅವರ ಕುಟುಂಬ ಮೊದಲ ಬಾರಿ ಬೆಳಕಿಗೆ ಬಂದಿತ್ತು. ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಿದಾಗ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದರು. ಇದೀಗ 150 ಸದಸ್ಯರ ದೊಡ್ಡ ಕುಟುಂಬವನ್ನು ಯಜಮಾನ ಮೆಂಗಲ್ ಅಗಲಿದ್ದಾರೆ.