ಇಸ್ಲಾಮಬಾದ್: ಅಕ್ರಮ ಸಂಬಂಧ ಹೊಂದುವಂತೆ ಪತ್ನಿಗೆ ಬ್ಲಾಕ್‍ಮೇಲ್ ಮಾಡುತ್ತಿದ್ದ ಎಂದು ಪೊಲೀಸ್ ಕಿವಿ, ತುಟಿ ಮತ್ತು ಮೂಗನ್ನು ಕಟ್ ಮಾಡಿದ ಸುದ್ದಿಯೊಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ.
ಲಾಹೋರ್‌ನಿಂದ ಸುಮಾರು 200 ಕಿಮೀ ದೂರದಲ್ಲಿರುವ ಜಾಂಗ್ ಜಿಲ್ಲೆಯಲ್ಲಿ ಆರೋಪಿ ಮುಹಮ್ಮದ್ ಇಫ್ತಿಕರ್ ತನ್ನ ಸಹಚರರೊಂದಿಗೆ ಪೊಲೀಸ್ ಕಾನ್‍ಸ್ಟೆಬಲ್ ಖಾಸಿಂ ಹಯಾತ್‍ಗೆ ತೀವ್ರ ಚಿತ್ರಹಿಂಸೆ ಕೊಟ್ಟಿದ್ದಾನೆ. ನಂತರ ಆತನ ಮೂಗು, ಕಿವಿ ಮತ್ತು ತುಟಿಗಳನ್ನು ಕತ್ತರಿಸಿ ಅಲ್ಲಿಂದ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪಾಕ್ ಪ್ರಧಾನಿಗೆ ಸಮನ್ಸ್ ಜಾರಿ
Advertisement
Advertisement
ಇಫ್ತಿಕಾರ್, ಹಯಾತ್‍ಗೆ ತನ್ನ ಪತ್ನಿಗೆ ಬ್ಯಾಕ್‍ಮೇಲ್ ಮಾಡುತ್ತಿರುವುದು ತಿಳಿದು ಕಳೆದ ತಿಂಗಳು ಪೊಲೀಸರಿಗೆ ದೂರು ಕೊಟ್ಟಿದ್ದಾನೆ. ಆದರೆ ಅದರಿಂದ ಏನು ಪ್ರಯೋಜನವಾಗಿಲ್ಲ. ಅದಕ್ಕೆ ಇಫ್ತಿಕಾರ್, 12 ಮಂದಿ ಸಹಚರರೊಂದಿಗೆ ಸೇರಿಕೊಂಡು ಹಯಾತ್ ಮನೆಗೆ ಹಿಂದಿರುಗುತ್ತಿದ್ದಾಗ ಆತನನ್ನು ಅಪಹರಿಸಿ ನಿರ್ಜನ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಆತನಿಗೆ ತೀವ್ರ ಚಿತ್ರಹಿಂಸೆ ನೀಡಿ ನಂತರ ಆತನ ದೇಹದ ಭಾಗಗಳನ್ನು ಹರಿತವಾದ ಆಯುಧದಿಂದ ಕತ್ತರಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement
ಕಳೆದ ತಿಂಗಳು, ಪಾಕಿಸ್ತಾನ ದಂಡ ಸಂಹಿತೆಯ(ಪಿಪಿಸಿ) ಸೆಕ್ಷನ್ 354(ಮಹಿಳೆಯ ಮೇಲೆ ಹಲ್ಲೆ), 384 (ಸುಲಿಗೆ) ಮತ್ತು 292(ಅಶ್ಲೀಲತೆ) ಅಡಿಯಲ್ಲಿ ಕಾನ್‍ಸ್ಟೆಬಲ್ ಹಯಾತ್ ವಿರುದ್ಧ ಇಫ್ತಿಕರ್ ಪ್ರಕರಣ ದಾಖಲಿಸಿದ್ದ.
Advertisement
ಆಸಲಿ ಕಾರಣವೇನು?
ಹಯಾತ್ ತನ್ನ ಮಗನನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾಗ ನನ್ನ ಹೆಂಡತಿಯನ್ನು ತನ್ನೊಂದಿಗೆ ಅಕ್ರಮ ಸಂಬಂಧ ಹೊಂದುವಂತೆ ಒತ್ತಾಯಿಸಿದ್ದ. ಮಗನಿಗಾಗಿ ಆಕೆ ಹಯಾತ್‍ನನ್ನು ಭೇಟಿಯಾದಾಗ ಲೈಂಗಿಕ ಕ್ರಿಯೆ ನಡೆಸುವಂತೆ ಬಲವಂತಪಡಿಸಿದ್ದ. ಈ ವೇಳೆ ಆತ ಕೃತ್ಯದ ವೀಡಿಯೋ ಮಾಡಿ ನನ್ನ ಪತ್ನಿಗೆ ಬ್ಲಾಕ್‍ಮೇಲ್ ಮಾಡಲು ಆರಂಭಿಸಿದ್ದ ಎಂದು ಇಫ್ತಿಕರ್ ದೂರಿನಲ್ಲಿ ತಿಳಿಸಿದ್ದ. ಇದನ್ನೂ ಓದಿ: ಅಂತಾರಾಷ್ಟ್ರೀಯ ಒಪ್ಪಿಗೆ ಸಿಗಬೇಕಾದರೆ ಮಾನವ ಹಕ್ಕು ಗೌರವಿಸಿ: ತಾಲಿಬಾನ್‍ಗೆ UN ಖಡಕ್ ಎಚ್ಚರಿಕೆ
ಪೊಲೀಸರು ಈ ಕುರಿತು ಮಾತನಾಡಿದ್ದು, ಹಯಾತ್‍ನನ್ನು ಜಿಲ್ಲಾ ಕೇಂದ್ರ ಆಸ್ಪತ್ರೆಗೆ ಜಾಂಗ್‍ಗೆ ರವಾನಿಸಲಾಗಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ. ಪ್ರಸ್ತುತ ನಾವು ಆರೋಪಿ ಇಫ್ತಿಕರ್ ಮತ್ತು ಆತನ ಸಹಚರರನ್ನು ಹುಡುಕುತ್ತಿದ್ದೇವೆ ಎಂದು ತಿಳಿಸಿದ್ದಾರೆ.