ತಮ್ಮ ಭಾಷಣದಲ್ಲಿ 213 ಬಾರಿ ನಾನು, ನನ್ನ ಪದ ಬಳಸಿದ ಇಮ್ರಾನ್ ಖಾನ್- ಭಾರೀ ವೈರಲ್

Public TV
2 Min Read
IMRAN

ಇಸ್ಲಾಮಾಬಾದ್: ಪಾಕಿಸ್ತಾನದ ಮುಖ್ಯಮಂತ್ರಿ ಇಮ್ರಾನ್ ಖಾನ್ ರಾಷ್ಟ್ರವನ್ನುದ್ದೇಶಿಸಿ ಮಾಡಿದ 45 ನಿಮಿಷಗಳ ಭಾಷಣ ತಮ್ಮ ಹೆಸರನ್ನು ಪ್ರಸ್ತಾಪಿಸಿಕೊಂಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಪಾಕಿಸ್ತಾನದಲ್ಲಿ ಹೆಚ್ಚುತ್ತಿರುವ ರಾಜಕೀಯ ಬಿಕ್ಕಟ್ಟಿನ ಮಧ್ಯೆ ಕೊನೆಯ ಎಸೆತದವರೆಗೂ ಆಡುತ್ತಲೇ ಇರುತ್ತೇನೆ ಎಂದು ಹೇಳಿದ್ದರು. ಈ ವೇಳೆ ಅವರು ನಾನು, ನನ್ನ, ನನಗೆ, ಇಮ್ರಾನ್‍ಖಾನ್ ಎಂಬ ಪದವನ್ನು 213 ಬಾರಿ ಉಚ್ಛರಿಸಿದ್ದಾರೆ. ಇದೀಗ ಭಾರೀ ವೈರಲ್ ಆಗುತ್ತಿದೆ.

ಇಮ್ರಾನ್ ತಮ್ಮ ಭಾಷಣದಲ್ಲಿ ನಾನು(ಮೇ) ಎಂದು 85 ಬಾರಿ ಹೇಳಿದ್ದಾರೆ. ನನಗೆ (ಮುಝೆ) ಎಂದು 16 ಬಾರಿ ಹೇಳಿದ್ದಾರೆ. ನನ್ನ (ಮೇರಾ) ಎಂದು 11 ಬಾರಿ ಉಚ್ಛರಿಸಿದ್ದಾರೆ. ಜೊತೆಗೆ ಇಮ್ರಾನ್ ಖಾನ್ ತಮ್ಮ ಹೆಸರನ್ನೇ 14 ಬಾರಿ ಪ್ರಸ್ತಾಪಿಸಿದ್ದಾರೆ.

ಪಾಕಿಸ್ತಾನದ ಮಾಧ್ಯಮವೊಂದು ಒಟ್ಟಾರೆಯಾಗಿ ಇಮ್ರಾನ್ ತಮ್ಮ ಹೆಸರನ್ನು, ತಮ್ಮ ಕುರಿತು 213 ಬಾರಿ ಪ್ರಸ್ತಾಪಿಸಿದ್ದಾರೆ ಎಂದು ತಿಳಿಸಿದೆ. ಈ ಬಗ್ಗೆ ಹಲವು ವಿಡಿಯೋಗಳು ಹರಿದಾಡಿದ್ದು, ಭಾರೀ ಟ್ರೋಲ್ ಆಗುತ್ತಿದೆ. ಇಮ್ರಾನ್ ಖಾನ್ ತಮ್ಮ ಬಗ್ಗೆ ಹೆಚ್ಚು ಮಾತನಾಡುತ್ತಾರೆ ಎನ್ನುವ ಬಗ್ಗೆ ಮೊದಲಿನಿಂದಲೂ ಆರೋಪವಿತ್ತು. ಈಗ ಇದೇ ವಿಚಾರ ಮತ್ತಷ್ಟು ಚರ್ಚೆ ಆಗುತ್ತಿದೆ. ಇದನ್ನೂ ಓದಿ: ಭಾರತವನ್ನು ಬೆಂಬಲಿಸುತ್ತಿರುವ ಪ್ರಬಲ ರಾಷ್ಟ್ರವೊಂದು ಪಾಕಿಸ್ತಾನದ ಮೇಲೆ ಕೋಪಗೊಂಡಿದೆ: ಇಮ್ರಾನ್‌ ಖಾನ್‌

ಇಮ್ರಾನ್ ಖಾನ್ ಪಕ್ಷ ಪಿಟಿಐ ತನ್ನ ಎರಡು ಮಿತ್ರಪಕ್ಷಗಳ ಬೆಂಬಲವನ್ನು ಕಳೆದುಕೊಂಡಿದೆ. 342 ಸಂಖ್ಯಾಬಲದ ಪಾಕಿಸ್ತಾನ ಸಂಸತ್ತಿನಲ್ಲಿ ಬಹುಮತ ಸಾಬೀತುಪಡಿಸಲು 172 ಮತಗಳು ಬೇಕು. ಭಾನುವಾರ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಗುತ್ತದೆ ಎಂದು ವರದಿಗಳು ಹೇಳಿವೆ. ಇದನ್ನೂ ಓದಿ: ನೀವು ಪ್ರಧಾನಿಯಾಗಿಲ್ಲದಿದ್ದಾಗ ಪಾಕಿಸ್ತಾನ ಅದ್ಭುತವಾಗಿತ್ತು: ಇಮ್ರಾನ್‌ಗೆ ಮಾಜಿ ಪತ್ನಿ ತರಾಟೆ

Share This Article
Leave a Comment

Leave a Reply

Your email address will not be published. Required fields are marked *