– ಹಮಾಸ್ ಮಾದರಿಯಲ್ಲಿ ಪಾಕ್ ಆರ್ಮಿ ಟಾರ್ಗೆಟ್
ಶ್ರೀನಗರ: ಜಮ್ಮುವನ್ನು ಗುರಿಯಾಗಿಸಿಕೊಂಡು ಮತ್ತೆ ಪಾಕಿಸ್ತಾನ ದಾಳಿ ನಡೆಸಿದ್ದು, ಕ್ಷಿಪಣಿಗಳನ್ನು ಬಳಸಿಕೊಂಡು ಹಮಾಸ್ ಸ್ಟೈಲ್ನಲ್ಲಿ ಪಾಕ್ ಆರ್ಮಿ ಆಟ್ಯಾಕ್ ಆರಂಭಿಸಿದೆ.
ಆದರೆ ಭಾರತದ ಏರ್ ಡಿಫೆನ್ಸ್ ಯೂನಿಟ್ನಿಂದ ಪಾಕ್ನ ಎಲ್ಲ ಕ್ಷಿಪಣಿಗಳನ್ನು ಉಡೀಸ್ ಮಾಡಿದೆ. ಇಸ್ರೇಲ್ ಮೇಲೆ ಹಮಾಸ್ ದಾಳಿಯ ಮಾದರಿಯಲ್ಲಿ ಪಾಕ್ ಅರ್ಮಿ ದಾಳಿ ನಡೆಸಿದೆ. ಆದರೆ ಭಾರತದ ದಾಳಿಗೆ ಪಾಕ್ ಆರ್ಮಿ ಆಟ ನಡೆಯದಂತಾಗಿದೆ. ದಾಳಿ ಆರಂಭವಾಗುತ್ತಿದ್ದಂತೆ ಭಾರೀ ಶಬ್ದಕ್ಕೆ ಬೆಚ್ಚಿ ಬಿದ್ದು, ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.ಇದನ್ನೂ ಓದಿ: ಜಮ್ಮು ಮೇಲೆ ಪಾಕಿಸ್ತಾನ ಕ್ಷಿಪಣಿ ದಾಳಿ ಯತ್ನ – ಮಿಸೈಲ್, ಡ್ರೋನ್ ಹೊಡೆದುರುಳಿಸಿದ ಭಾರತ
ಕ್ಷಿಪಣಿಗಳು ಮತ್ತು ಡ್ರೋನ್ಗಳನ್ನು ಜಮ್ಮುವಿನ ಮೇಲೆ ಹಾಕಿಸಿದ್ದು, ನಗರದಲ್ಲಿ ಜೋರಾಗಿ ಸ್ಫೋಟಗಳು ಕೇಳಿಬಂದಿವೆ. ದಾಳಿಗೆ ಭಾರತವು ತಕ್ಕ ಪ್ರತ್ಯುತ್ತರ ನೀಡಿದೆ. ಭಾರತದಲ್ಲಿ ಯಾವುದೇ ಹಾನಿಯಾಗಿಲ್ಲ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ.
ಜಮ್ಮುವಿನಲ್ಲಿ ಜೋರಾಗಿ ಸ್ಫೋಟಗಳು ಕೇಳಿಬಂದವು. ನಂತರ ಸೈರನ್ಗಳ ಕೂಗು ಕೇಳಿಬಂತು. ತಕ್ಷಣ ವಿದ್ಯುತ್ ಕಡಿತವಾಯಿತು. ದಾಳಿ ಇನ್ನೂ ಮುಂದುವರಿದಿದೆ. ಪರಿಣಾಮವಾಗಿ ಸೆಲ್ಫೋನ್ ಸೇವೆ ಸ್ಥಗಿತಗೊಂಡಿದೆ.
ಸ್ಥಳೀಯರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವೀಡಿಯೋಗಳಲ್ಲಿ, ಆಕಾಶದಾದ್ಯಂತ ದೀಪಗಳು ಪಸರಿಸಿದಂತೆ ದೃಶ್ಯ ಕಂಡುಬಂದಿದೆ. ಇದು ಭಾರತೀಯ ಸಶಸ್ತ್ರ ಪಡೆಗಳ ವಾಯು ರಕ್ಷಣಾ ವ್ಯವಸ್ಥೆಯಿಂದ ಪಾಕ್ನ ಕ್ಷಿಪಣಿಗಳು ಮತ್ತು ಡ್ರೋನ್ಗಳ ಹೊಡೆದುರುಳಿಸುವ ದೃಶ್ಯವಾಗಿದೆ.
300 ಕಿ.ಮೀ.ಗಿಂತಲೂ ಹೆಚ್ಚು ದೂರದಲ್ಲಿರುವ ಕುಪ್ವಾರಾ ಪಟ್ಟಣ ಮತ್ತು ಪಠಾಣ್ಕೋಟ್ನಲ್ಲೂ ಇದೇ ರೀತಿಯ ಪರಿಸ್ಥಿತಿ ಕಂಡುಬಂದಿದೆ. ಪಂಜಾಬ್ನ ಹತ್ತಿರದ ಪಟ್ಟಣವಾದ ಗುರುದಾಸ್ಪುರದಲ್ಲಿ ಬ್ಲ್ಯಾಕೌಟ್ ಘೋಷಿಸಲಾಯಿತು. ಅಖ್ನೂರ್ನ ಸಾಂಬಾದಲ್ಲಿರುವ ಅಂತರರಾಷ್ಟ್ರೀಯ ಗಡಿಯಲ್ಲಿ ಶೆಲ್ ದಾಳಿ ನಡೆದಿದೆ.ಇದನ್ನೂ ಓದಿ:ಭಯೋತ್ಪಾದನೆ ವಿರುದ್ಧ ನಾವು ನಿಮ್ಮೊಂದಿಗೆ – ಭಾರತದ ಬೆಂಬಲಕ್ಕೆ ನಿಂತ ನೇಪಾಳ