– 14 ಪಾಕಿಸ್ತಾನಿ ಯೋಧರ ಸಾವು?
ಪಾಕಿಸ್ತಾನ: ಲಾಹೋರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಂದು (Allama Iqbal International Airport) ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯಿಂದಾಗಿ ರನ್‌ವೇ (Runway) ಬಂದ್ ಮಾಡಲಾಗಿದ್ದು, ಎಲ್ಲಾ ವಿಮಾನಗಳ ಹಾರಾಟವನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
Fire breaks out at Allama Iqbal International Airport. It is also known as Lahore International Airport, Pakistan.#Terrorism #Fire #PehalgamTerroristAttack pic.twitter.com/oFeZCp7MNQ
— Kapadia CP (@Ckant72) April 26, 2025
ಪಾಕಿಸ್ತಾನ ಸೇನೆಯ ವಿಮಾನ ಲ್ಯಾಂಡಿಂಗ್ (Flight Landing) ವೇಳೇ ಟೈಯರ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದೆ ಎಂದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ. ಸದ್ಯ ಬೆಂಕಿ ನಿಯಂತ್ರಿಸಲು ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿದೆ. ಘಟನೆ ಬಳಿಕ ರನ್‌ವೇಯನ್ನು ಮುಚ್ಚಲಾಗಿದ್ದು, ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಶಿಮ್ಲಾ ಒಪ್ಪಂದಕ್ಕೆ ಸಹಿ ಹಾಕಿದ್ದ ಮೇಜಿಂದ ಪಾಕ್ ಧ್ವಜ ತೆಗೆದು ಹಾಕಿದ ಭಾರತ
ಘಟನೆಗೆ ಸಂಬಂಧಿಸಿದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ವಿಮಾನ ನಿಲ್ದಾಣದಲ್ಲಿನ ಜನ ಹೊಗೆಯಿಂದ ತೊಂದರೆ ಅನುಭವಿಸುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಕಪಾಡಿಯಾ ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ 32 ಸೆಕೆಂಡುಗಳ ವಿಡಿಯೋ ಹಂಚಿಕೊಂಡಿದ್ದು, ಆಕಾಶದ ತುಂಬೆಲ್ಲ ಕಪ್ಪು ಹೊಗೆ ತುಂಬಿರುವುರು ಕಾಣುತ್ತಿದೆ. ಯಾವುದೇ ಸಾವು ನೋವು ದಾಖಲಾಗಿಲ್ಲ. ಲಾಹೋರ್ ವಿಮಾನ ನಿಲ್ದಾಣ ಹೊತ್ತಿ ಉರಿಯುತ್ತಿದೆ ಎಂದು ಬರೆದುಕೊಂಡಿದ್ದಾರೆ.
ಪಾಕಿಸ್ತಾನದ ಅಲ್ಲಾಮಾ ಇಕ್ಬಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಇದೇ ಮೊದಲಲ್ಲ. ಈ ಹಿಂದೆ ಕೂಡ ವಿಮಾನ ನಿಲ್ದಾಣದಲ್ಲಿ ಬೆಂಕಿ ಕಾಣಿಸಿಕೊಂಡ ಬಗ್ಗೆ ವರದಿಯಾಗಿತ್ತು. ಇದು ದೇಶದಲ್ಲಿ ಕಳಪೆ ಮೂಲಸೌಕರ್ಯ ಮತ್ತು ಭದ್ರತಾ ಮಾನದಂಡಗಳ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ. ಇದನ್ನೂ ಓದಿ: ಸಿಂಧೂ ನೀರು ಪಾಕ್‌ಗೆ ಹರಿಯಬೇಕು, ಇಲ್ಲದಿದ್ರೆ ಭಾರತೀಯರ ರಕ್ತ ಹರಿಯುತ್ತೆ: ಬಿಲಾವಲ್ ಭುಟ್ಟೋ
14 ಸೈನಿಕರು ಸಾವು?
ವಿವಿಧ ಮೂಲಗಳ ಪ್ರಕಾರ, ಪಾಕಿಸ್ತಾನದ ಲಾಹೋರ್‌ನಲ್ಲಿರುವ ಅಲ್ಲಾಮಾ ಇಕ್ಬಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾಯು ರಕ್ಷಣಾ ವ್ಯವಸ್ಥೆಯ ಕ್ಷಿಪಣಿ ಬ್ಯಾಟರಿ ಅಳವಡಿಸುವ ಸಮಯದಲ್ಲಿ ಸ್ಫೋಟಗೊಂಡ ಉಂಟಾಗಿದೆ. ಬಳಿಕ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ 14 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಕೆಲ ವರದಿಗಳು ದೃಢಪಡಿಸಿವೆ. ಆದ್ರೆ ಸೇನೆಯಿಂದ ಅಧಿಕೃತ ಹೇಳಿಕೆ ಬಿಡುಗಡೆಯಾಗಿಲ್ಲ. ಇದನ್ನೂ ಓದಿ: ಪಹಲ್ಗಾಮ್‌ನಲ್ಲಿ ನಡೆದಿದ್ದು ಘೋರ ದುರಂತ – ಭಾರತ, ಪಾಕ್ ಉದ್ವಿಗ್ನತೆ ಬಗೆಹರಿಸಿಕೊಳ್ಳಲಿವೆ: ಟ್ರಂಪ್