ಧಾರ್ಮಿಕ ಆಚರಣೆ – ಸಿಖ್‌ ಯಾತ್ರಾರ್ಥಿಗಳಿಗೆ 163 ವೀಸಾ ನೀಡಿದ ಪಾಕಿಸ್ತಾನ

Public TV
1 Min Read
sikh pilgrims

ಇಸ್ಲಾಮಾಬಾದ್‌: ಇದೇ ಜೂನ್‌ 8ರಿಂದ 17ರವರೆಗೆ ನಡೆಯಲಿರುವ ವಾರ್ಷಿಕ ಉತ್ಸವದ ಹಿನ್ನೆಲೆಯಲ್ಲಿ ಸಿಖ್‌ ಯಾತ್ರಾರ್ಥಿಗಳಿಗೆ ಪಾಕಿಸ್ತಾನ 163 ವೀಸಾಗಳನ್ನು ನೀಡಿದೆ.

ಗುರು ಅರ್ಜನ್ ದೇವ್ ಅವರ ಹುತಾತ್ಮ ದಿನದ ಮುನ್ನಾದಿನದಂದು ಪಾಕಿಸ್ತಾನದ ಹೈಕಮಿಷನ್ ಈ ಕ್ರಮ ಕೈಗೊಂಡಿದೆ. ಇದನ್ನೂ ಓದಿ: ಸತ್ಯೇಂದ್ರ ಜೈನ್ ಸಹಚರರ ಮನೆ ಮೇಲೆ ಇಡಿ ದಾಳಿ – ನೋಟಿನ ಕಂತೆಗಳನ್ನೇ ಬಳಸಿ `ED’ ವಿನ್ಯಾಸ

visa

ಈ ಕುರಿತು ಮಾತನಾಡಿದ ಅಫ್ತಾಬ್ ಹಸನ್ ಖಾನ್, ಯಾತ್ರಾರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು. ಯಾತ್ರೆ ಮೂಲಕ ತಮ್ಮ ಮನದಾಸೆ ಪೂರೈಸಿಕೊಳ್ಳಲಿ ಎಂದು ಹಾರೈಸಿದ್ದಾರೆ.

1974 ರ ಧಾರ್ಮಿಕ ದೇಗುಲಗಳಿಗೆ ಭೇಟಿ ನೀಡುವ ಪಾಕಿಸ್ತಾನ-ಭಾರತ ಮಾರ್ಗಸೂಚಿಯಡಿ ವೀಸಾ ವಿತರಿಸಲಾಗುವುದು. ಪ್ರತಿ ವರ್ಷ ಭಾರತದಿಂದ ಹೆಚ್ಚಿನ ಸಂಖ್ಯೆಯ ಸಿಖ್‌ ಯಾತ್ರಿಗಳು ಧಾರ್ಮಿಕ ಹಬ್ಬಗಳ ಆಚರಣೆ ಹಾಗೂ ಸ್ಥಳ ವೀಕ್ಷಿಸಲು ಪಾಕಿಸ್ತಾನಕ್ಕೆ ಭೇಟಿ ನೀಡುತ್ತಾರೆ. ಇದನ್ನೂ ಓದಿ: ಮೇಕೆದಾಟು ಅಣೆಕಟ್ಟು ನಿರ್ಮಾಣ ವಿಚಾರ – ತಮಿಳುನಾಡಿನಿಂದ ಮತ್ತೆ ತಕರಾರು

india pakistan

ಯಾತ್ರಾರ್ಥಿಗಳು ಪಂಜಾ ಸಾಹಿಬ್, ನಂಕಾನಾ ಸಾಹಿಬ್ ಮತ್ತು ಕರ್ತಾರ್ಪುರ್ ಸಾಹಿಬ್‌ಗೆ ಹೋಗುತ್ತಾರೆ. ಅವರು ಜೂನ್ 8 ರಂದು ಪಾಕಿಸ್ತಾನ ತಲುಪಿ ನಂತರ ಜೂನ್ 17 ರಂದು ಭಾರತಕ್ಕೆ ಹಿಂತಿರುಗುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *