ಚಂಡೀಗಢ: ಖಲಿಸ್ತಾನಿ (Khalistan) ಪರ ಹೋರಾಟಗಾರ, ವಾರೀಸ್ ಪಂಜಾಬ್ ದೇ ಧಾರ್ಮಿಕ ಸಂಸ್ಥೆಯ ಮುಖ್ಯಸ್ಥ ಅಮೃತ್‍ಪಾಲ್ ಸಿಂಗ್ (Amritpal Singh) ದೇಶಕ್ಕೆ ಕಂಟಕವಾಗುವ ರೀತಿ ಕಾಣುತ್ತಿದ್ದು ಆತನಿಗೆ ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್‌ಐ (ISI) ಬೆಂಬಲವಿದೆ ಎಂದು ಗುಪ್ತಚರ ಇಲಾಖೆ ಹೇಳಿದೆ.
ಅಮೃತಪಾಲ್ ಸಿಂಗ್ ಜಾರ್ಜಿಯಾಕ್ಕೆ ಭೇಟಿದ್ದ. ಅಲ್ಲಿ ಆತನಿಗೆ ಬೋಧನೆ ಮಾಡಲಾಗಿದೆ. ಖಾಲಿಸ್ತಾನ ಹೋರಾಟವನ್ನು ಜೀವಂತವಾಗಿಡಲು ಭಾರತದಲ್ಲಿ ಐಎಸ್‌ಐಗೆ ವ್ಯಕ್ತಿ ಬೇಕಿತ್ತು ಎಂದು ಗುಪ್ತಚರ ಇಲಾಖೆಯ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮ ವರದಿ ಮಾಡಿದೆ.
ನಾನು ಭಾರತೀಯನೇ ಅಲ್ಲ, ಪಾಸ್‍ಪೋರ್ಟ್ ಇದ್ದ ಮಾತ್ರಕ್ಕೆ ನಾನು ಭಾರತೀಯ ವ್ಯಕ್ತಿಯಾಗುವುದಿಲ್ಲ. ಅದು ಕೇವಲ ಟ್ರಾವೆಲ್ ಡಾಕ್ಯುಮೆಂಟ್ ಎಂದು ಹೇಳಿಕೊಂಡಿದ್ದಾನೆ. ಸಿದ್ದಾಂತಕ್ಕೆ ಸಾವಿಲ್ಲ. ನಮ್ಮ ಸಿದ್ದಾಂತವೂ ಅಷ್ಟೇ. ಖಲಿಸ್ತಾನ್ ತಡೆಯಲು ನೋಡಿದರೆ ಇಂದಿರಾ ಗಾಂಧಿಗೆ ಆದ ಗತಿಯೇ ಅಮಿತ್ ಶಾಗೂ ಎದುರಾಗಲಿದೆ ಎಂದು ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾನೆ. ಇದನ್ನೂ ಓದಿ: ಭಾರತ ಮಾತ್ರವಲ್ಲದೇ ವಿದೇಶದಲ್ಲೂ ಅಂಬಾನಿ, ಕುಟುಂಬಕ್ಕೆ z+ ಭದ್ರತೆ ನೀಡಿ: ಸುಪ್ರೀಂ
ಖಲಿಸ್ತಾನಿ ಪರ ಸಹಾನುಭೂತಿ ಇರುವವರು ಅಮೃತ್‍ಪಾಲ್ ಸಿಂಗ್‍ನನ್ನು ಎರಡನೇ ಬಿಂದ್ರನ್‍ವಾಲೆ ಎಂದು ಗುಣಗಾನ ಮಾಡುತ್ತಿದ್ದಾರೆ. ಅಮೃತ್‍ಪಾಲ್ ಸಿಂಗ್ ವೇಷಭೂಷಣವೂ ಬಿಂದ್ರನ್‍ವಾಲೆ ಸ್ಟೈಲ್‍ನಲ್ಲಿಯೇ ಇದೆ. ಅಮೃತ್‍ಪಾಲ್ ಸಿಂಗ್‌ಗೆ ಆಪ್ ಬೆಂಬಲ ನೀಡುತ್ತಿದೆ ಎಂದು ವಿರೋಧ ಪಕ್ಷಗಳು ಟೀಕೆ ಮಾಡಿವೆ.
ಅಮಿತ್ ಶಾ (Amit Shah) ಅವರನ್ನೇ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರೂ, ಈವರೆಗೂ ಅಮೃತ್‍ಪಾಲ್ ಸಿಂಗ್ ಮತ್ತು ಅವರ ಅನುಯಾಯಿಗಳ ವಿರುದ್ಧ ಈವರೆಗೂ ಒಂದೇ ಒಂದು ಕೇಸ್ ದಾಖಲಾಗದಿರುವುದು ಈ ಅನುಮಾನಕ್ಕೆ ಪುಷ್ಠಿ ಕೊಡುತ್ತಿದೆ. ಪಂಜಾಬ್‍ನಲ್ಲಿ ಕಳೆದ ಚುನಾವಣೆಯಲ್ಲಿ ಆಪ್ ವಿಜಯದ ಹಿಂದೆ ಖಲಿಸ್ತಾನಿ ಶಕ್ತಿಗಳ ಕೈವಾಡವಿರುವ ಬಗ್ಗೆಯೂ ಶಂಕೆ ವ್ಯಕ್ತವಾಗುತ್ತಿದೆ.