ಹಾವೇರಿ: ನನ್ನ ಲೆಕ್ಕಾಚಾರದ ಪ್ರಕಾರ ಸಿದ್ದರಾಮಯ್ಯ (Siddaramaiah) ಅವರಿಗೆ ಸೇಫ್ ಎಂದರೆ ಪಾಕಿಸ್ತಾನ (Pakistan). ಅವರ ಮನಸ್ಥಿತಿಗೆ ಸೇಫ್ ಆಗಿರೋದು ಪಾಕಿಸ್ತಾನವೇ ಎಂದು ವಿಧಾನಸಭಾ ಚುನಾವಣೆಗೆ (Assembly election) ಮಾಜಿ ಸಿಎಂ ಸಿದ್ದರಾಮಯ್ಯ ಕ್ಷೇತ್ರ ಹುಡುಕಾಟಕ್ಕೆ ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ವ್ಯಂಗ್ಯವಾಡಿದ್ದಾರೆ.
ಪಾಕಿಸ್ತಾನದಲ್ಲಿ ಮೋದಿ, ಬೊಮ್ಮಾಯಿ, ಯಡಿಯೂರಪ್ಪನವರು ಇರುವುದಿಲ್ಲ. ಅಲ್ಲಿ ಹೋದರೆ ಕಾಟ ಕೊಡೋದಕ್ಕೆ ಡಿಕೆ ಶಿವಕುಮಾರ್, ಖರ್ಗೆಯೂ ಇರಲ್ಲ. ಹೀಗಾಗಿ ಪಾಕಿಸ್ತಾನವೇ ಅವರಿಗೆ ಸೇಫ್ ಜಾಗ ಎಂದು ಸಿಟಿ ರವಿ ಲೇವಡಿ ಮಾಡಿದ್ದಾರೆ.
Advertisement
Advertisement
ಬಿಜೆಪಿ ಹಾಲಿ ಶಾಸಕರೇ ಕಾಂಗ್ರೆಸ್ ಸೇರಲು ರೆಡಿ ಇದ್ದಾರೆ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ಕಿಡಿಕಾರಿದ ಅವರು, ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ಕಾಂಗ್ರೆಸ್‌ನವರೂ ತುದಿಗಾಲ ಮೇಲೆ ನಿಂತಿದ್ದಾರೆ. ನಾವು ಬೇಕೆಂದರೆ ಸೆಲೆಕ್ಟ್ ಮಾಡಿ ತೆಗೆದುಕೊಳ್ಳುತ್ತೇವೆ. ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಗುಜರಾತ್‌ನಲ್ಲಿ 77 ಸ್ಥಾನಗಳಲ್ಲಿ ಕಾಂಗ್ರೆಸ್ ಏನು ಸಾಧನೆ ಮಾಡಿದೆ? ಉತ್ತರ ಪ್ರದೇಶದಲ್ಲಿ 2 ಸ್ಥಾನ ಗೆದ್ದಿದೆ. ಕರ್ನಾಟಕದಲ್ಲಿ ನೋಡಿ, ಕಾಂಗ್ರೆಸ್‌ನಲ್ಲಿ ಮಹಾಭಾರತವೇ ಶುರುವಾಗುತ್ತದೆ ಎಂದರು.
Advertisement
ನಾವು ಚಿಕ್ಕಮಗಳೂರು ಉತ್ಸವ ಮಾಡಿದ್ದೆವು. ಯಾರಿಗೂ ಸಾರಿಗೆಯ ವ್ಯವಸ್ಥೆ ಮಾಡಿರಲಿಲ್ಲ. ಸ್ವಯಂ ಪ್ರೇರಿತರಾಗಿ ಜನರು ಉತ್ಸವಕ್ಕೆ ಬಂದಿದ್ದರು. ಇದು ಜನರ ತಾಕತ್ತು. ರಾತ್ರಿಯವರೆಗೂ ಜನರು ಕಾರ್ಯಕ್ರಮ ನೋಡಿದ್ದರು. 6-7 ಸಾವಿರ ಜನ ಸೇರಿಸಿದರೆ ಪ್ರಜಾಧ್ವನಿ ಹೇಗಾಗುತ್ತೆ? ಇದು ಪ್ರಜಾಧ್ವನಿ ಅಲ್ಲ, ಕಾಂಗ್ರೆಸ್ ಧ್ವನಿ. ಪ್ರಜೆಗಳು ನಮ್ಮ ಜೊತೆ ಇರೋದಕ್ಕೆ ಕಾಂಗ್ರೆಸ್‌ನವರಿಗೆ ಭಯ ಇದೆ. ಪ್ರಜೆಗಳನ್ನು ಲೂಟಿ ಮಾಡಿದ ಕಾಂಗ್ರೆಸ್‌ನವರು ನಮ್ಮ ವಿರುದ್ಧ ಮಾತನಾಡುತ್ತಾರೆ. ಹೀಗಾಗಿ ಅವರದು ಸೌಂಡು, ನಮ್ಮದು ಗ್ರೌಂಡು. ಕಾಂಗ್ರೆಸ್‌ನವರು ಯಾವಾಗಲೂ ಸೌಂಡ್ ಮಾಡ್ತಾರೆ ಎಂದರು.
Advertisement
ಮೋದಿಯವರು ಪ್ರಧಾನಿ ಆಗಲ್ಲ ಎಂದು ಸಿದ್ದರಾಮಯ್ಯ ಹೇಳಿದ್ರು. ಆದರೆ ಮೋದಿ 2 ಬಾರಿ ಗೆಲ್ಲಲಿಲ್ಲವಾ? ಜೆಡಿಎಸ್ – ಕಾಂಗ್ರೆಸ್ ಸರ್ಕಾರ ಇತ್ತು. ಯಾರು ಅಧಿಕಾರಕ್ಕಾಗಿ ಬಿಜೆಪಿಗೆ ಬಂದು ಸೇರಿಕೊಂಡರು? ಮೋದಿಯವರ ಆಡಳಿತ ನೋಡಿ ಕರ್ನಾಟಕದಲ್ಲಿಯೂ ಬಿಜೆಪಿ ಗೆಲ್ಲುತ್ತದೆ ಎನ್ನುವುದು ಗೊತ್ತಿದೆ. ಮುಳುಗುವ ಹಡಗಿನಲ್ಲಿ ಯಾರು ಇರ್ತಾರೆ? ಎಂದು ಟಾಂಗ್ ನೀಡಿದರು. ಇದನ್ನೂ ಓದಿ: ಕಾಂಗ್ರೆಸ್ ಪಕ್ಷವನ್ನ ನಂಬುವ ಪರಿಸ್ಥಿತಿಯಲ್ಲಿ ಜನರಿಲ್ಲ: ಹೆಚ್‍ಡಿಕೆ
ನಮ್ಮದು ತತ್ವದ ರಾಜಕಾರಣ, ಹಿಂದುತ್ವದ ರಾಜಕಾರಣ. ನಾವು ಜಾತಿ ರಾಜಕಾರಣ ಮಾಡಿಲ್ಲ. ಚುನಾವಣೆ ಹಿಂದೂಗಳು ನಾವಲ್ಲ. ಇದಕ್ಕಾಗಿ ತರಹೇವಾರಿ ವೇಷ ನಾವು ಹಾಕಲ್ಲ. ಅಭಿವೃದ್ಧಿ ಕೆಲಸಕ್ಕೆ ಬಂದಾಗ, ಕಷ್ಟ ಅಂತ ಬಂದಾಗ ಯಾವ ಜಾತಿನೂ ನಾವು ನೋಡಿಲ್ಲ. ಅದಕ್ಕಾಗಿ 4 ಬಾರಿ ಜನರು ನನ್ನನ್ನು ಗೆಲ್ಲಿಸಿದ್ದಾರೆ. ನೆಂಟರು ಎಂದರೆ ಊಟ ಹಾಕ್ತೀವಿ, ಕೋಳಿ ಸಾರು, ಚೆನ್ನರಾಯ ಪಟ್ಟಣ ಮಟನ್ ಸಾರು, ಇದನ್ನು ತಿನ್ನಲ್ಲ ಎಂದರೆ ಪುಲ್ಚಾರು ಹಾಕುತ್ತೇವೆ. ಹೀಗಾಗಿ ನಾವು ನೆಂಟರನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ. ಆದರೆ ವೋಟ್‌ಗಳನ್ನು ಮಾತ್ರ ಬಿಲ್ಕುಲ್ ಗೆಲ್ಲೋಕೆ ಆಗಲ್ಲ. ಚಿಕ್ಕಮಗಳೂರು ಜನರು ಕಾಂಗ್ರೆಸ್‌ಗೆ ವೋಟ್ ಹಾಕಲ್ಲ ಎಂದರು.
ಶಂಕರ್ ಅನರ್ಹ ಎಂದಾಗ ಎಂಎಲ್‌ಸಿ ಮಾಡಿದ್ದೇವೆ. ಅವರಿಗೆ ಮಂತ್ರಿ ಆಗಬೇಕು ಎಂಬ ಆಸೆ ಇತ್ತು. ತಾಳ್ಮೆಯಿಂದ ಇದ್ದು ಬಿಜೆಪಿಯಲ್ಲಿ ಉಳಿದುಕೊಂಡು ಬಿಜೆಪಿ ಅಭ್ಯರ್ಥಿ ಗೆಲ್ಲಿಸಿದರೆ ಬಡ್ಡಿ ಸಮೇತ ಬರುತ್ತದೆ. ಬಿಟ್ಟು ಹೋದರೆ ಡೆಪಾಸಿಟ್ ಕೂಡಾ ಹೋಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್ ನಾಯಕರು ಭ್ರಷ್ಟಾಚಾರದಲ್ಲಿ PHD ಪಡೆದಿದ್ದಾರೆ, ಬೆಂಗ್ಳೂರನ್ನ ಹಾಳು ಮಾಡಿದ್ದಾರೆ: ಬೊಮ್ಮಾಯಿ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k